ಸಿನಿ ಅಭಿಮಾನಿಗಳಂತೆಯೇ ನಮ್ಮ ಸ್ಮಾಲ್ ಸ್ಕ್ರೀನ್ ಗಳಲ್ಲಿ ದಿನನಿತ್ಯ ಪ್ರಸಾರವಾಗುವ ಧಾರಾವಾಹಿಗಳಿಗೂ ಕೂಡ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಿನಿಮಾ ನಟ ನಟಿಯರಿಗೆ ದೊಡ್ಡ ದೊಡ್ಡ ಅಭಿಮಾನಿ ಬಳಗವು ಇರುವ ಹಾಗೆ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಯ ನಟನಟಿಯರಿಗೂ ಕೂಡ ಅಭಿಮಾನಿಗಳ ಬಳಗವಿದೆ. ಇತ್ತೀಚಿಗೆ ಪ್ರಸಾರವಾಗುವ ಧಾರವಾಹಿಗಳು ಕೂಡ ಯಾವುದೇ ಸಿನಿಮಾಗೆ ಕಡಿಮೆಯಿಲ್ಲವೆಂಬಂತೆ ನಿರ್ದೇಶನ ಮಾಡುತ್ತಿವೆ. ಧಾರಾವಾಹಿಗಳು ಒಂದು ಕುಟುಂಬದಲ್ಲಿ ದಿನನಿತ್ಯ ನಡೆಯಬಹುದಾದ ನೈಜ ಘಟನೆಗಳನ್ನು ಆಧರಿಸಿರುವುದರಿಂದ ಇವುಗಳು ಎಲ್ಲರಿಗೂ ಅಚ್ಚುಮೆಚ್ಚು. ದೊಡ್ಡ ದೊಡ್ಡ ಸಿನಿಮಾ ನಟರಂತೆ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿರುವ ಪಾತ್ರಧಾರಿಗಳಿಗೂ ಕೂಡ ಕ್ರೇಜ್ ಹೆಚ್ಚುತ್ತಿದೆ.

ಯಾವುದೇ ಹೊಸ ಧಾರಾವಾಹಿ ಆರಂಭವಾದಾಗ ಅದರ ಬಗ್ಗೆ ವೀಕ್ಷಕರು ಆಸಕ್ತಿ ತೋರಿಸುವುದು ಸಹಜ. ಧಾರಾವಾಹಿ ಶುರುವಾದಾಗ ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಾರೆ. ಆದರೆ ಆ ಕುತೂಹಲವನ್ನು ಮುಂದುವರಿಸಿದೊಂಡು ಹೋಗುವಲ್ಲಿ ಕೆಲವು ಸೀರಿಯಲ್ ಗಳು ಮಾತ್ರ ಸಕ್ಸಸ್ ಆಗುತ್ತವೆ. ಅಂತಹ ಸಾಲಿನಲ್ಲಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡತಿ ಸೀರಿಯಲ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. 2020ರಲ್ಲಿ ಶುರುವಾದ ಈ ಸೀರಿಯಲ್ ಬೇರೆ ಸೀರಿಯಲ್ ಗಳಿಂಗಿಂತ ವಿಭಿನ್ನವಾಗಿದೆ ಎಂದರೆ ತಪ್ಪಾಗಲಾರದು. ಕನ್ನಡವನ್ನು ಹಾಗೂ ಕನ್ನಡದ ಬಳಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಈ ಸೀರಿಯಲ್ ಎಲ್ಲರ ಮನಗೆದ್ದಿದೆ. ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈ ಧಾರಾವಾಹಿ ಎಲ್ಲರ ಫೇವರೆಟ್.

ಈ ಧಾರಾವಾಹಿಯ ಎಲ್ಲಾ ಪಾತ್ರಧಾರಿಗಳನ್ನು ಜನ ಮೆಚ್ಚಿಕೊಂಡಿದ್ದು ಅದರಲ್ಲೂ ಹರ್ಷ ಭುವಿ ಜೋಡಿ ಎಲ್ಲರ ಫೇವರೆಟ್. ಇತ್ತೀಚೆಗೆ ಸಾನಿಯಾ ಪಾತ್ರಧಾರಿ ಬದಲಾದರು. ಅಲ್ಲದೇ ಈ ಧಾರಾವಾಹಿಯಲ್ಲಿ ಹೊಸ ಪಾತ್ರವೊಂದು ಸೃಷ್ಟಿಯಾಯಿತು. ಧಾರಾವಾಹಿಯಲ್ಲಿ ಹೊಸ ಪಾತ್ರ ಬಂದರೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚುವುದು ಸಾಮಾನ್ಯ. ಈ ಧಾರಾವಾಹಿಯಲ್ಲಿ ವರುದಿನಿ ಪ್ರೇಮಿಯಾಗಿ ವಿಕ್ರಂತ್ ಎಂಬ ಹೊಸ ಪಾತ್ರವನ್ನು ಸೃಷ್ಟಿ ಮಾಡಲಾಗಿತ್ತು. ಈ ವಿಕ್ರಂತ್ ಸಾನಿಯಾ ಕರೆತಂದ ವ್ಯಕ್ತಿ. ಈ ವಿಕ್ರಂತ್ ವರುಧಿನಿಯನ್ನು ತನ್ನೆಡೆ ಸೆಳೆದುಕೊಂಡು, ಹರ್ಷ ಭುವಿ ಮದ್ಯ ಸಂಕಟವಾಗಿರುವ ವರೂದಿನಿಯನ್ನು ಹವಿ ಜೋಡಿಯಿಂದ ದೂರ ಮಾಡುತ್ತಾನೆ ಎಂದು ಎಲ್ಲರೂ ಖುಷಿ ಪಟ್ಟಿದ್ದರು. ಈಗ ವಿಕ್ರಂತ್ ಪಾತ್ರದಲ್ಲಿ ಒಂದು ಟ್ವಿಸ್ಟ್ ರೆಡಿ ಆಗಿದೆ.

ಹೌದು ವಿಕ್ರಂತ್ ಪಾತ್ರಧಾರಿಯ ನಿಜವಾದ ಹೆಸರು ಭವಿಷ್. ಈ ಧಾರಾವಾಹಿಯಲ್ಲಿ ಈಗ ಹೊಸ ಪಾತ್ರವೊಂದರ ಆಗಮನವಾಗಿದ್ದು ನಟ ವಿನಯ್ ಕಶ್ಯಪ್ ಅವರು ಈ ಪಾತ್ರವನ್ನು ಮಾಡಲಿದ್ದಾರೆ. ಅಸಲಿಗೆ ವಿನಯ್ ಅವರದ್ದು ಯಾವ ಪಾತ್ರ ಎಂದು ಇನ್ನಷ್ಟೇ ಗೊತ್ತಾಗಬೇಕಿದೆ, ಸದ್ಯಕ್ಕೆ ಉದಯ ವಾಹಿನಿಯ ಸೇವಂತಿ ಮತ್ತು ಜೀ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸುತ್ತಿರುವ ವಿನಯ್ ಅವರು ಈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ಮುಂದೆ ವರುಧಿನಿಯ ಜೋಡಿಯಾಗಿ ವಿಕ್ರಾಂತ್ ಪಾತ್ರದಲ್ಲಿ ವಿನಯ್ ಕಶ್ಯಪ್ ಕಾಣಿಸಿಕೊಳ್ಳಲಿದ್ದಾರೆ.