ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧರಿತ ಕಥೆಯನ್ನು ಸಿನಿಮಾವಾಗಿ ಬೆಳ್ಳೆತೆರೆ ಮೇಲೆ ತಂದು ನಿರ್ದೇಶಕಿ ಸುಧಾ ಅವರು ಯಶಸ್ವಿಯಾಗಿದ್ದಾರೆ. ಇದು ತಮಿಳಿನಲ್ಲಿ ಸೂರರೈಪೋಟ್ರು ಎಂಬ ಟೈಟಲ್ ನೊಂದಿಗೆ ತಮಿಳಿನಲ್ಲಿ ತಯಾರಾಗಿರುವ ಸಿನಿಮಾವಾಗಿದ್ದು ಎಲ್ಲಾ ಭಾಷೆಗಳಲ್ಲೂ ಡಬ್ ಆಗಿದೆ, ಸೂರರೈಪೋಟ್ರು ಚಿತ್ರ ಕನ್ನಡದ ಅವತರಣೆಕೆಯಲ್ಲೂ ಸಹ ಬಿಡುಗಡೆಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಬೆಂಗಳೂರು ನಗರ ಮಾಜಿ ಕಮೀಷನರ್ ಭಾಸ್ಕರ್ ರಾವ್ ಅವರೂ ಕೂಡ ಕನ್ನಡದಲ್ಲಿದ್ದ ಈ ಚಿತ್ರವನ್ನು ನೋಡಿ ಖುಷಿಪಟ್ಟು ಯುವಕರು ನೋಡಲೇಬೇಕಾದ ಚಿತ್ರವಿದು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆ ಚಿತ್ರದ ನೋಡಬೇಕಾದ ಮಹತ್ವವನ್ನು ಕೂಡ ಹೇಳಿದ್ದಾರೆ ಈ ಚಿತ್ರದಲ್ಲಿ ಅಸಾಧ್ಯವಾದ ಕನಸುಗಳನ್ನು ಬೆನ್ನಟ್ಟಿ ಹೇಗೆ ಸಾಧಿಸಬೇಕು ಎಂಬುದನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ.
ನಟ ಸೂರ್ಯ ಅವರ ಅಭಿನಯ ಮತ್ತು ಕಥೆಯ ನಿರೂಪಣೆ ಅಚ್ಚುಕ್ಟಟ್ಟಾಗಿ ಮನೋಜ್ಞವಾಗಿ ಮೂಡಿಬಂದಿದ್ದು ಇಂದಿನ ಯುವಸಮೂಹ ಇಂತಹ ಚಿತ್ರಗಳನ್ನು ಸ್ಪೂರ್ತಿ ಪಡೆಯಬೇಕು ಎಂದು ಪ್ರಸ್ತುತ ಆಂತರಿಕ ಭದ್ರತೆ ಇಲಾಖೆಯ ಎಡಿಜಿಪಿ ಆಗಿರುವ ಭಾಸ್ಕರ್ ರಾವ್ ಚಿತ್ರ ನೋಡಿ ಇಡೀ ತಂಡಕ್ಕೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅದಲ್ಲದೆ ರಿಯಲ್ ಹೀರೋ ಕ್ಯಾಪ್ಟನ್ ಗೋಪಿನಾಥ್ ಅವರು ಕೂಡ ತಡರಾತ್ರಿ ಸಿನಿಮಾ ವೀಕ್ಷಿಸಿ ನನ್ನ ಕಥೆಯನ್ನು ಬಹಳ ನೈಜವಾಗಿ ತೆರೆಮೇಲೆ ತಂದಿದ್ದಾರೆ ನಾನು ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಸೂರರೈಪೋಟ್ರು ಸಿನಿಮಿ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿ ಹಿಂದಿ ಭಾಷೆಯ ಅವತರಣೆಕೆಯಲ್ಲಿ ಭಾರಿ ಜನಮನ್ನಣೆಗಳಿಸುತ್ತಿದೆ.