ಕನ್ನಡಿಗರು ಇಷ್ಟು ದಿನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಉಗ್ರಂ ಹಾಗು ಕೆಜಿಎಫ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈಗ ಪರಭಾಷೆಯತ್ತ ಮುಖ ಮಾಡಿದ್ದಾರೆ, ಕೆಜಿಎಫ್ ಚಿತ್ರದ ಎರಡನೇ ಚಾಪ್ಟರ್ ಇನ್ನೂ ಚಿತ್ರೀಕರಣ ನಡೆಯುತ್ತಿರುವಾಗಲೇ ತೆಲುಗು ಚಿತ್ರರಂಗದ ನಟ ಪ್ರಭಾಸ್ ಜೊತೆ ದೊಡ್ಡ ಮಟ್ಟದ ಚಿತ್ರವೊಂದಕ್ಕೆ ಸಹಿ ಹಾಕಿದ್ದು ಇದನ್ನು ಸ್ವತಃ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆಯಾದ ವಿಜಯ್ ಕಿರಾಗಂದೂರ್ ಅವರ ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಮೂಲಗಳು ಹೇಳುವ ಪ್ರಕಾರ ಈ ಚಿತ್ರವು ಮಾಸ್ ಮೂವಿ ಆಗಿರುತ್ತದೆ ಹಾಗು ಸುಮಾರು ಐದಾರು ಭಾಷೆಗಳಲ್ಲಿ ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಆದರೆ ನಮ್ಮ ಕನ್ನಡದ ನಿರ್ದೇಶಕ ಕನ್ನಡದಲ್ಲಿ ಇಷ್ಟೊಂದು ನಟರಿದ್ದರೂ ಪರಭಾಷಾ ನಟನನ್ನು ಹಾಕಿಕೊಂಡು ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಬೇಸರ ತರಿಸಿದೆ.

ಹೌದು ಎರಡು ದಿನಗಳ ಹಿಂದೆ ಹೊಂಬಾಳೆ ಫಿಲಂಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಕೊಟ್ಟಿದ್ದರು, ನಾವು ನಮ್ಮ ಮುಂದಿನ ದೊಡ್ಡ ಚಿತ್ರವನ್ನು ಡಿಸೆಂಬರ್ ಎರಡಕ್ಕೆ ಮಧ್ಯಾಹ್ನ ತಿಳಿಸುತ್ತೇವೆ ಎಂದು. ಅವತ್ತಿನಿಂದ ಟ್ವಿಟ್ಟರ್ ಅಲ್ಲಿ ದಕ್ಷಿಣ ಭಾರತದ ಅಭಿಮಾನಿಗಳು ಕುತೂಹಲದಿಂದ ಚರ್ಚೆ ಮಾಡುತ್ತಿದ್ದರು. ಕೆಲವರು ಪ್ರಭಾಸ್ ಹಾಗು ಪ್ರಶಾಂತ್ ನೀಲ್ ಅಂದರೆ ಇನ್ನು ಕೆಲವರು ಪುನೀತ್ ಹಾಗು ನೀಲ್ ಅವರು ಹೊಸ ಚಿತ್ರ ಮಾಡಲಿದ್ದಾರೆ ಎಂದು ತಮ್ಮ ಅಭಿಪ್ರಾಯ ಹೇಳುತ್ತಿದ್ದರು. ಆದ್ರೆ ಇಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದ್ದು ಪ್ರಭಾಸ್ ಹಾಗು ಪ್ರಶಾಂತ್ ನೀಲ್ ಅವರು ಚಿತ್ರ ಮಾಡುತ್ತಿದ್ದೆ ಇದೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಟ್ವಿಟ್ಟರ್ ಅಲ್ಲಿ ಕನ್ನಡಿಗರಿಂದ ಇದಕ್ಕೆ ವಿರೋಧಗಳು ಬರುತ್ತಿವೆ. ಚಿತ್ರದ ಹೆಸರನ್ನು ‘ಸಲಾರ್’ ಎಂದು ಘೋಷಣೆ ಮಾಡಿದ್ದಾರೆ.