ಕೇವಲ ಇನ್ನ ಎರಡು ಮೂರು ದಿನಗಳಲ್ಲಿ ತಮಿಳು ಖ್ಯಾತ ನಟನೊಬ್ಬ ಕನ್ನಡಿಗರಿಗೆ ಕನ್ನಡ ಸಿನಿ ಪ್ರಿಯರಿಗೆ ಖುಷಿಯಾಗಿ ಸುದ್ದಿಯೊಂದನ್ನು ನೀಡಲಿದ್ದಾರೆ ಅದೇನೆಂದು ಹೇಳುತ್ತೇವೆ ನೋಡಿ. ತಮಿಳು ನಟ ತಳಪತಿ ವಿಜಯ್ ಎಂಬ ಹೆಸರು ಕೇಳಿರುತ್ತೀರಿ, ಈ ಹೆಸರು ತಮಿಳುನಾಡಿನ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು. ಬೇಡಿಕೆಯಲ್ಲಿರುವ ಹೆಸರೆಂದರೆ ಇದೆ ನಟ ವಿಜಯ್ ಅವರ ಹೆಸರು. ಕಳೆದ ಮೂರು ನಾಲ್ಕು ಚಿತ್ರಗಳಂತೂ ಅತ್ಯಂತ ಯಶಸ್ಸು ಗಳಿಸಿ ನೂರಾರು ಕೋಟಿ ಹಣವನ್ನು ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದಿದೆ.

ಚಿತ್ರ ನಟ ವಿಜಯ್ ಅವರ ಜೀವನದಲ್ಲಿ ಅತ್ಯಂತ ಹೆಚ್ಚು ಗಳಿಕೆಯ ಚಿತ್ರವಾಯಿತು. ವಿಜಯ ಅವರ ಈ ಮಾಸ್ಟರ್ ಚಿತ್ರ ಸದ್ಯಕ್ಕೆ ತಮಿಳುನಾಡು ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತದಾದ್ಯಂತ ನಿರೀಕ್ಷೆ ಮಿತಿಮೀರಿದೆ. ಇದೆ ಕಾರಣಕ್ಕೆ ಚಿತ್ರತಂಡ ಬೇರೆ ಭಾಷೆಗಳಿಗೂ ಡಬ್ ಮಾಡಲು ತೀರ್ಮಾನಿಸಿದೆ, ಈ ಸಮಯದಲ್ಲಿ ಕರ್ನಾಟಕದಲ್ಲಿರುವ ಕನ್ನಡಿಗರು ಹಾಗೂ ವಿಜಯ್ ಅಭಿಮಾನಿಗಳು ಟ್ವಿಟ್ಟರಲ್ಲಿ ಮಾಸ್ಟರ್ ಇನ್ ಕನ್ನಡ ಎಂಬ ಹ್ಯಾಸ್ ಟ್ಯಾಗ್ ಇಟ್ಟುಕೊಂಡು ಟ್ರೆಂಡ್ ಮಾಡಿದ್ದರು. ಕನ್ನಡಿಗರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಾಸ್ಟರ್ ಚಿತ್ರತಂಡ ವಿಜಯ್ ಅವರ ಚಿತ್ರವನ್ನು ಕನ್ನಡದಲ್ಲಿಯೂ ಬಿಡುಗಡೆ ಮಾಡಲು ತೀರ್ಮಾನಿಸಿದೆ.

ನಟ ವಿಜಯ್ ಅವರಿಗೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ತುಂಬಾ ಅಭಿಮಾನಿಗಳಿದ್ದಾರೆ, ಕರ್ನಾಟಕದ ಅಭಿಮಾನಿಗಳ ಒತ್ತಾಯದ ಮೇರೆಗೆ ಚಿತ್ರತಂಡ ಈ ಬಹುನಿರೀಕ್ಷಿತ ಮಾಸ್ಟರ್ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ಕರ್ನಾಟಕದಾದ್ಯಂತ ಕನ್ನಡದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಈಗ ಈ ಚಿತ್ರದಬಗ್ಗೆ ಹೊಸ ಸುದ್ದಿಯೊಂದು ಬಂದಿದ್ದು ವರದರಾಜ್ ಚಿಕ್ಕಬಳ್ಳಾಪುರ ಎಂಬ ಬರಹಗಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟನ್ನು ಹಾಕಿದ್ದಾರೆ. ಸಿಹಿಸುದ್ದಿ ಬರಲಿದೆ ಎಂದು ಅಡಿಬರಹ ಕೊಟ್ಟಿದ್ದಾರೆ. ಅಭಿಮಾನಿಗಳ ಊಹೆಯ ಪ್ರಕಾರ ಮಾಸ್ಟರ್ ಕನ್ನಡ ಅವತರಣಿಕೆಯ ಫಸ್ಟ್ ಲುಕ್ ಪೋಸ್ಟರ್ ಬರಬಹುದು ಎಂದು ಅಂದಾಜಿಸಿದ್ದಾರೆ. ಏನೇ ಆಗಲಿ ಒಟ್ಟಿನಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾಗುವ ಪರಭಾಷಾ ಚಿತ್ರಗಳು ನಮ್ಮ ಕನ್ನಡಿಗರಿಗೆ ನಮ್ಮ ಕನ್ನಡ ಭಾಷೆಯಲ್ಲಿ ನೋಡುವಂತೆ ಆಗಲಿ.