ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತೆ, ಕನ್ನಡಕ್ಕೆ ಡಬ್ ಮಾಡುವ ಅಗತ್ಯ ಇಲ್ಲ ಎಂದು ಉಡಾಫೆ ಹೇಳಿಕೆ ಕೊಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಖ್ಯಾತ ತೆಲುಗು ನಟ

ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತೆ. ಅವರಿಗೆ ಕನ್ನಡದಲ್ಲಿ ಡಬ್ ಮಾಡುವ ಅಗತ್ಯ ಇಲ್ಲ. ನಾನು ಕನ್ನಡಕ್ಕೆ ಡಬ್ ಮಾಡುವುದಿಲ್ಲ ಎಂದು ಟಾಲಿವುಡ್ ಸ್ಟಾರ್ ನಟರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯದ ಮಟ್ಟಿಗೆ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಾಣುತ್ತಿದೆ. ಅದು ಸಿನಿಮಾದ ಮೇಕಿಂಗ್, ಕಥೆಯ ಗುಣಮಟ್ಟ ಹೀಗೆ ಪ್ರತಿಯೊಂದು ವಿಭಾಗದಲ್ಲಿಯೂ ಕೂಡ ಕನ್ನಡ ಸಿನಿಮಾಗಳು ಅಪ್ ಡೇಟ್ ಆಗಿ ಮೂಡಿ ಬರುತ್ತಿವೆ. ದಶಕಗಳಿಂದ ಕನ್ನಡ ಚಿತ್ರರಂಗದ ಬಗ್ಗೆ ಪರಭಾಷಾ ಸಿನಿಮಾ ರಂಗ ಕೇವಲವಾಗಿ ಮಾತನಾಡುತ್ತಿದ್ದವು. ಅಷ್ಟೇ ನಿರ್ಲಕ್ಷ್ಯ ಮನೋಭಾವನೆ ಹೊಂದಿದ್ದವು. ಆದರೆ ಕೆಜಿಎಫ್ ಚಿತ್ರದ ನಂತರ ಕನ್ನಡ ಸಿನಿಮಾದ ಬಗ್ಗೆ ಇಡೀ ಭಾರತ ಮಾತ್ರ ಅಲ್ಲದೆ ವಿಶ್ವದ ಮಟ್ಟದಲ್ಲಿ ಭಾರಿ ಸದ್ದು ಆಗುವುದರ ಜೊತೆಗೆ ಕನ್ನಡ ಸಿನಿಮಾದ ಬಗ್ಗೆ ನಿಬ್ಬೆರಗಾಗಿ ನೋಡುವಂತಾಯಿತು.

ಕನ್ನಡ ಚಿತ್ರರಂಗ ಈ ಪರಿಯಾಗಿ ಹೆಸರು ಮಾಡಿರುವ ಸಂಧರ್ಭದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟ ನ್ಯಾಚುರಲ್ ಸ್ಟಾರ್ ನಾನಿ ಕನ್ನಡಿಗರಿಗೆ ನೋವಾಗುವಂತಹ ಹೇಳಿಕೆ ನೀಡಿದ್ದಾರೆ. ಹೌದು ಟಾಲಿವುಡ್ ನ್ಯಾಚುರಲ್ ಸ್ಟಾರ್ ನಟ ನಾನಿ ಅವರು ತಮ್ಮ ನಟನೆಯ ಬಹು ನಿರೀಕ್ಷಿತ “ಅಂಟೆ ಸುಂದರಾನಿಕಿ” ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಬಗ್ಗೆ ಎಲ್ಲೆಡೆ ಭಾರಿ ಕುತೂಹಲ ಕೂಡ ಮೂಡಿದೆ. ತೆಲುಗಿನ ಈ ಚಿತ್ರ ತೆಲುಗು ಮಾತ್ರ ಅಲ್ಲದೆ ಭಾರತದ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಡಬ್ ಆಗುತ್ತಿದೆ. ಅದರಂತೆ ಸಿನಿಮಾದ ಟೀಸರ್ ಬಿಡುಗಡೆಯ ವೇಳೆ ನೆಟ್ಟಿಗರು ಕೇಳಿದ ಪ್ರಶ್ನೆಗೆ ನಾನಿ ನೀಡಿರುವ ಉತ್ತರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ರೀತಿ ಇದ್ದು ಇದಕ್ಕೆ ಕನ್ನಡಿಗರು ಗರಂ ಆಗಿದ್ದಾರೆ ಅಷ್ಟಕ್ಕೂ ಅವರು ಕೇಳಿದ ಪ್ರಶ್ನೆ ಏನು ಹಾಗೂ ನಾನಿ ಅವರು ನೀಡಿದ ಉತ್ತರ ಏನು ಎಂದು ತಿಳಿಯುವುದಾದರೆ, ಟೀಸರ್ ಬಿಡುಗಡೆಯ ವೇಳೆ ಅಲ್ಲಿನ ನೆಟ್ಟಿಗರು ಕನ್ನಡಕ್ಕೆ ಯಾಕೆ ಸಿನಿಮಾ ಡಬ್ ಮಾಡಿಲ್ಲ ಎಂದು ಕೇಳಿದ್ದಾರೆ.

ಇದಕ್ಕೆ ನಟ ನಾನಿ ವಿವಾದಾತ್ಮಕ ಹೇಳಿಕೆಯೊಂದು ನೀಡಿದ್ದಾರೆ. ಬಹುತೇಕ ಎಲ್ಲ ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತದೆ, ಹಾಗೂ ಅವರು ತೆಲುಗಿನಲ್ಲಿ ಸಿನಿಮಾ ನೋಡಲು ಇಷ್ಟ ಪಡುತ್ತಾರೆ. ಹಾಗಾಗಿ ನಮ್ಮ ಚಿತ್ರವನ್ನು ಕೂಡ ತೆಲುಗಿನಲ್ಲಿಯೆ ನೋಡುತ್ತಾರೆ ಎಂದು ಈ ಸಿನಿಮಾದ ಟೀಸರ್ ಲಾಂಚ್ ವೇಳೆ ನಟ ನಾನಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ನಾನಿ ಅವರು ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗಿದ್ದರು. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಿಯವರ ಈ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕನ್ನಡಕ್ಕೆ ಡಬ್ ಮಾಡಿದರೆ ಮಾತ್ರ ನಿಮ್ಮ ಸಿನಿಮಾವನ್ನು ನೋಡುತ್ತೇವೆ. ಇಲ್ಲವಾದರೆ ನಾವು ನಿಮ್ಮ ಚಿತ್ರವನ್ನ ನೋಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಒಂದಷ್ಟು ಜನರು ನಮಗೆ ತೆಲುಗು ಅರ್ಥ ಆಗುವುದಿಲ್ಲ.

ಕನ್ನಡಕ್ಕೆ ಡಬ್ ಮಾಡಿದರೆ ಅಷ್ಟೇ ನಾವು ಸಿನಿಮಾ ನೋಡುತ್ತೇವೆ ಇಲ್ಲದಿದ್ದರೆ ಸಿನಿಮಾ ನೋಡುವುದಿಲ್ಲ ಎಂದು ಟ್ವೀಟ್ ಮಾಡಿದರು. ಕನ್ನಡಿಗರ ಆಕ್ರೋಶಕ್ಕೆ ತಕ್ಷಣ ಎಚ್ಚೆತ್ತುಕೊಂಡು ನಟ ನಾನಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ನಾನು ಹೇಳಿದ ಮಾತಿನ ಅರ್ಥವೇ ಬೇರೆಯಾಗಿತ್ತು. ಈ ಹಿಂದೆ ಡಬ್ಬಿಂಗ್ ಇಲ್ಲದ ಸಮಯದಲ್ಲಿಯೂ ನಮ್ಮ ಕನ್ನಡಿಗರು ನಮ್ಮ ತೆಲುಗು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ನನ್ನ ಮಾತಿನ ಅರ್ಥ ಇದಾಗಿತ್ತು. ಆದರೆ ಇದು ಸೋಶಿಯಲ್ ಮೀಡಿಯಾ‌ದಲ್ಲಿ ಇದು ಬೇರೆಯೇ ಸ್ವರೂಪ ಪಡೆದುಕೊಂಡಿದೆ. ನಾನು ಸರಿಯಾಗಿ ಹೇಳದಿದ್ದಕ್ಕೆ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿ ಕನ್ನಡ ಸಿನಿಮಾ ರಂಗ ಗಡಿ ಮೀರಿ ಬೆಳೆಯುತ್ತಿರುವುದು ನನಗೂ ಹೆಮ್ಮೆ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ ನಾನಿ ಅವರ ದುಡಕಿನ ಮಾತು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಇದೀಗ ಕ್ಷಮೆ ಕೇಳುವಂತಹ ಸನ್ನಿವೇಶವನ್ನ ನಾನಿ ಎದುರಿಸಿದ್ದಾರೆ.

%d bloggers like this: