ಕಣ್ಣಿನ ದೃಷ್ಟಿ ಮಂಜಾಗುತ್ತಿದೆಯೇ, ಇವುಗಳನ್ನು ಸೇವಿಸಿ ಕಣ್ಣಿನ ಆರೋಗ್ಯ ಕಾಪಾಡಿ

ಮನುಷ್ಯನಿಗೆ ಮುಖ್ಯವಾದ್ದು ಆರೋಗ್ಯ, ಆದರೆ ಆರೋಗ್ಯ ಅಂದಾಕ್ಷಣ ಕೇವಲ ದೇಹ ಸಧೃಡವಾಗಿಟ್ಟುಕೊಂಡು ಮೈಕಟ್ಟು ಬೆಳೆಸುವುದಲ್ಲ. ದೇಹದ ಪ್ರತಿಯೊಂದು ಅಂಗಾಂಗಗಳ ಬಗ್ಗೆ ಕಾಳಜಿಯನ್ನು ವಹಿಸಬೇಕು ಅದರಲ್ಲು ಈ ಕಣ್ಣು, ನಾಲಿಗೆಯು ಹೆಚ್ಚು ಪರಿಣಾಮ ಕಾರಿಯಾದ ಅಂಗಗಳು. ಕಣ್ಣಿನ ಸಮಸ್ಯೆಗಳು ಇತ್ತೀಚೆಗೆ ಕಂಡುಬರುವುದು ಸಾಮಾನ್ಯ ಎಂಬ ರೀತಿಯಲ್ಲಿ ನೂರರಲ್ಲಿ ಅರವತ್ತುರಷ್ಟು ಜನ ಈ ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಮಕ್ಕಳಿರುವಾಗಲೇ ಅಂದರೆ ಹದಿನೈದು, ಇಪ್ಪತ್ತು ವಯೋಮಾನದ ಯುವಕರಿಗೆ ಕಣ್ಣಿನ ಸಮಸ್ಯೆ ಉಲ್ಬಣಿಸಿ ಕನ್ನಡಕ ಹಾಕುವ ಪರಿಸ್ಥಿತಿ ಎದುರಾಗಿದೆ. ಕಾರಣ ಹೆಚ್ಛು ಮೊಬೈಲ್, ಲ್ಯಾಪ್ ಟ್ಯಾಪ್ ಬಳಕೆ, ಕಂಪ್ಯೂಟರ್ ಮುಂದೆ ಕೂತು ಹೆಚ್ಚು ಕೆಲಸ ಮಾಡುವುದು, ಸರಿಯಾದ ಸಮಯಕ್ಕೆ ನಿದ್ದೆ ಮಾಡದೆ, ಕಣ್ಣುಗಳಿಗೆ ವಿಶ್ರಾಂತಿಯಿಲ್ಲದ ರೀತಿಯಲ್ಲಿ ಜೀವನಶೈಲಿ ರೂಢಿಸಿಕೊಂಡಿರುವುದರಿಂದ ಕಣ್ಣಿನಪೊರೆ ಮತ್ತು ಕಣ್ಣಿನ ಅಕ್ಷಿಪಟಲಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಂಡ ಆರಂಭದ ದಿನಗಳಲ್ಲೆ ಎಚ್ಚೆತ್ತುಕೊಂಡು ಒಂದಷ್ಞು ಆಹಾರಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಕಣ್ಣಿನ ಸಮಸ್ಯೆಗಳ ಪರಿಹಾರವಾಗಿ ಹಸಿರು ತರಕಾರಿಗಳು, ಡ್ರೈಪ್ರೂಟ್ಸ್, ಪ್ರೋಟೀನ್ ಅಂಶಗಳ ಪಾತ್ರ ಮಹತ್ವವಾದದ್ದು. ಮೊಟ್ಟೆಗಳು ಕಣ್ಣಿನ ಪೊರೆಯ ಲಕ್ಷಣ ಕಾಣಿಸಿಕಂಡಾಗಲೇ ಮೊಟ್ಟೆಯ ಸೇವನೆ ಆರಂಭಿಸುವುದು ಉತ್ತಮ ಈ ಮೊಟ್ಟೆಯಲ್ಲಿ ವಿಟಮಿನ್ ಮತ್ತು ಎವಿಟಮಿನ್ ಬಿ ಜೊತೆಗೆ ಜಿಯಾಟಿನ್ ಅಂಶ ಹೊಂದಿರುತ್ತದೆ. ಆದ್ದರಿಂದ ಮೊಟ್ಟೆಯು ಕಣ್ಣಿನ ಸಮಸ್ಯೆಗೆ ಉತ್ತಮ ಪರಿಣಾಮಕಾರಿಯಾದ ಆಹಾರವಾಗಿದೆ. ಕ್ಯಾರೇಟ್ ನಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿರುವುದಿರಿಂದ ಇದರಲ್ಲಿ ಲೂಟೈನ್ ಮತ್ತು ಜಿಪ್ಸ್ ಸತ್ವಾಂಶ ಹೇರಳವಾಗಿದ್ದು ಕಣ್ಙಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಇದು ರಾಮಭಾಣವಾಗಿ ಕೆಲಸ ಮಾಡುತ್ತದೆ.

ಕಣ್ಣಿನ ತೊಂದರೆಗಳಿಗೆ ಕ್ಯಾರೇಟ್ ಹೆಚ್ಛು ಉಪಯುಕ್ತ ಪ್ರೋಟೀನ್ ಅಂಶಗಳನ್ನು ಒದಗಿಸುತ್ತದೆ ಆದ್ದರಿಂದ ನಿಮ್ಮ ಆಹಾರದಲ್ಲಿ ಕ್ಯಾರೇಟ್ ಬಳಕೆ ಮಾಡುವುದು ಅವಶ್ಯಕವಾಗಿರುತ್ತದೆ. ಬಾದಾಮಿ ಡ್ರೈಪ್ರೂಟ್ಸ್ ಗಳಲ್ಲಿ ಒಂದಾಗಿದ್ದು ಹೆಚ್ಚು ಪ್ರೋಟೀನ್ ಅಂಶ ಹೊಂದಿರುವ ಪಧಾರ್ಥವಾಗಿದೆ. ಅದಕ್ಕಾಗಿಯೇ ಇದು ದುಬಾರಿಯೂ ಹೌದು ಬಾದಾಮಿಗಳಲ್ಲಿ ವಿವಿಧ ರೀತಿಯಲ್ಲಿದ್ದು ಅದರಲ್ಲಿ ಮಾಮ್ರಾ ಬಾದಾಮಿ ವಿಶೇಷವಾದದ್ದು. ಏಕಪರಿಯಾಕ್ತ ಮತ್ತು ಕೊಬ್ಬಿನಾಂಶಗಳು ಬಾದಾಮಿಯಲ್ಲಿ ಇರುವುದರಿಂದ ಕಣ್ಣಿನ ಕಾಂತಿಗೆ ಇದು ಸಹಾಯ ಮಾಡುತ್ತದೆ. ಅದಲ್ಲದೆ ದೈಹಿಕ ಆರೋಗ್ಯದಿಂದಲ್ಲೂ ಇದು ಉಪಯುಕ್ತ ಪಧಾರ್ಥವಾಗಿದೆ.

ದಿನಕ್ಕೆ 8 ಅಥವಾ 10ಬಾದಾಮಿ ಸೇವನೆಯಿಂದ ಕಣ್ಣಿನ ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುವಂತದ್ದು. ಕೊನೆಯದಾಗಿ ಹುರುಳಿ ಮೊಳಕೆ ಕಾಳು ಮತ್ತು ಮೀನು ಕಣ್ಣಿನ ರಕ್ಷಣೆಯಲ್ಲಿ ಪ್ರಮುಖವಾದ ಆಹಾರವಾಗಿದೆ ಪ್ರೋಟೀನ್ ಯುಕ್ತ ಸ್ಲ್ಮಾನಿನ್ ಪ್ರೋಟೀನ್ ಇರುವುದರಿಂದ ಮೊಳಕೆಕಾಳು ಸೇವನೆ ಆರೋಗ್ಯ ದೃಷ್ಠಿಯಿಂದ ಉತ್ತಮ ವಾದದ್ದು ಇದರ ಜೊತೆಗೆ ಒಮೇಗಾ3 ಪ್ರೋಟೀನ್ ಅಂಶ ಹೊಂದಿರುವ ಮೀನಿನ ಸೇವನೆಯು ಕೂಡ ಕಣ್ಣಿನ ಪೊರೆಯಂತಹ ಮತ್ತು ಕಣ್ಣಿನ ರಕ್ಷಣೆ ಪರಿಣಾಮಕಾರಿಯಾದ ಪ್ರೋಟೀನಯುಕ್ತ ಆಹಾರವಾಗಿದೆ. ಇದರ ಜೊತೆಗೆ ಹಣ್ಣುಗಳಲ್ಲಿ ಕಿತ್ತಳೆ, ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ನಿಮ್ಮ ಕಣ್ಣಿನ ಆರೋಗ್ಯ,ಮತ್ತು ರಕ್ಷಣೆಯನ್ನು ಉತ್ತಮವಾದ ರೀತಿಯಲ್ಲಿ ನಿರ್ವಹಿಸಬಹುದಾಗಿದೆ.

%d bloggers like this: