ಒಂದು ಯಾವುದಾದರೂ ವಿಷಯದ ಬಗ್ಗೆ ಅತೀವ ಒಲವು ಇದ್ದರೆ ಯಾವುದು ಅಸಾದ್ಯ ಇಲ್ಲ ಎಂಬ ಮಾತು ಎಷ್ಟು ಸತ್ಯ ಅಲ್ಲವೇ. ಹೌದು ಆಂಗ್ಲ ಭಾಷೆಯಲ್ಲಿ ಪ್ಯಾಶನ್ ಎಂದು ಕರೆಯಲ್ಪಡುವ ಈ ಗುಣಕ್ಕೆ ಎಲ್ಲಾ ಇತಿ ಮಿತಿಗಳನ್ನು ದಾಟುವ ಸಾಮರ್ಥ್ಯ ಇದೆ ಎಂಬುದನ್ನು ಹಲವರು ಹಲವಾರು ಬಾರಿ ಸಾಬೀತು ಮಾಡಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ಅದೆ ರೀತಿ ಈಗ ಬಿಜಾಪುರದ ಯುವಕರೊಬ್ಬರು ಒಂದು ಫೋಟೋ ಗಾಗಿ ಬರೋಬ್ಬರಿ 9000ನಿಮಿಷಗಳ ಕಾಲ ಒಂದೇ ರಸ್ತೆಯಲ್ಲಿ ಕಾದಿದ್ದಾರೆ ಎಂದರೆ ನೀವು ನಂಬಲೇಬೇಕು.

ನಿಜ ಅಷ್ಟಕ್ಕೂ ಆ ಫೋಟೋ ಯಾವುದು ಗೊತ್ತೇ. ಅದು ಒಂದು ಪ್ರಾಣಿಯ ಚಿತ್ರ ಹೌದು ಅತಿ ವಿರಳ ಪ್ರಾಣಿ ಆದ ಕಪ್ಪು ಚಿರತೆಯನ್ನು ಸೆರೆ ಹಿಡಿಯಲು ಒಂದೇ ರಸ್ತೆಯಲ್ಲಿ ಬಿಜಾಪುರದ ಯುವಕರಾದ ಧ್ರುವ ಪಾಟೀಲ್ ಎಂಬುವವರು ಬರೋಬ್ಬರಿ7 ದಿನಗಳ ಕಾಲ ಕಾದು ಕುಳಿತಿದ್ದಾರೆ. ಆ ಯುವಕ ಯಾರೆಂದು ಕೇಳಿದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೌದು ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಸಚಿವ ಹಾಲಿ ಶಾಸಕ ಎಂಬೀ ಪಾಟೀಲ್ ಅವರ ಸುಪುತ್ರ ದ್ರುವ.

ವನ್ಯ ಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದ್ರುವ ಅವರು ಕಬಿನಿ ಅಭಯಾರಣ್ಯದಲ್ಲಿ ಕಪ್ಪು ಚಿರತೆಯ ಫೋಟೋ ಅನ್ನು ಕ್ಲಿಕ್ಕಿಸಲು ಬಹಳ ಸಮಾಧಾನದಿಂದ ಒಂದು ವಾರ ಒಂದೇ ಜಾಗದಲ್ಲಿ ಕಾದಿದ್ದಾರೆ. ಕೊನೆಗೂ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಬ್ಲಾಕ್ ಪ್ಯಾಂಥರ್ ಚಿತ್ರವನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಪ್ರಾಣಿ ಮತ್ತು ಪಕ್ಷಿ ಪ್ರೇಮಿ ಆಗಿರುವ ದ್ರುವ ಅವರು ಮೈಸೂರಿನ ಮೃಗಾಲಯದ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ನೋಡಿ ಒಂದು ವಿಷಯದ ಬಗ್ಗೆ ಅತಿಯಾದ ಆಸಕ್ತಿ ಇದ್ದರೆ ಎಷ್ಟೇ ಸಮಯ ಕಾದರು ಅದು ಏನೂ ಅನ್ನುಮಿಸುವುದಿಲ್ಲ ಎಂಬುದಕ್ಕೆ ದ್ರುವ ಅವರೇ ಉತ್ತಮ ಉದಾಹರಣೆ ಆಗಿದ್ದಾರೆ.