ಕರ್ನಾಟಕದ ಬೆಡಗಿಗೆ ಒಲಿಯಿತು ‘ಲಿವಾ ಮಿಸ್ ದಿವಾ ಯುನಿವರ್ಸ್’ ಪ್ರಶಸ್ತಿ

ಮಂಗಳೂರು ಮೂಲದ ಬೆಡಗಿ ಲಿವಾ ಮಿಸ್ ದಿಯಾ ಯುನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಊರು ಬಿಟ್ರು ಊರಿನ ನಂಟು ಬಿಟ್ಟೀತೆ ಅನ್ನೋ ಹಾಗೇ ಹುಟ್ಟೂರು ಬಿಟ್ಟು ಎಲ್ಲೇ ಹೋಗಿ ಎಷ್ಟೇ ದೂರ ಹೋಗಿ ಸಾಧನೆ ಮಾಡಿದ್ರು ಅದೂ ತವರಿನ ಮನೆಯ ಹೆಸರನ್ನ ಹೇಳಲೇಬೇಕು. ದಿವಿತಾ ರೈ ಅವರು ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ದಿಲೀಪ್ ರೈ ಮತ್ತು ಪವಿತ್ರಾ ರೈ ಅವರು ಉದ್ಯೋಗದ ನಿಮಿತ್ತ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗುತ್ತಿದ್ದ ಕಾರಣ ದಿವಿತಾ ರೈ ಅವರು ನಿರ್ದಿಷ್ಟ ಒಂದು ಊರಿನಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿರೋ ದಿವಿತಾ ರೈ ಅವರು ಮುಂಬೈನ ಜೆ.ಜೆ.ಕಾಲೇಜ್ ಆಫ್ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದಿದ್ದಾರೆ. ಹೌದು ಇತ್ತೀಚೆಗೆ ಮುಂಬೈನಲ್ಲಿ ನಡೆದ ಲಿವಾ ಮಿಸ್ ದಿವಾ ಯುನಿವರ್ಸ್ ಅವಾರ್ಡ್ ಅನ್ನ ನಮ್ಮ ಕನ್ನಡದ ದಿವಿತಾ ರೈ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ದಿವಿತಾ ರೈ ಅವರು 2019ರಲ್ಲಿ ಫೆಮಿನಾ ಮಿಸ್ ಇಂಡಿಯಾ ದಲ್ಲಿ ಕರ್ನಾಟಕದಿಂದ ಅಗ್ರ ಮೂರು ಜನರ ಪೈಕಿ ಸ್ಥಾನ ಗಿಟ್ಟಿಸಿಕೊಂಡಿದ್ದರು. 2022ರ ಮಿಸ್ ಯೂನಿವರ್ಸ್ ಅವಾರ್ಡ್ ನಲ್ಲಿ ದಿವಿತಾ ರೈ ಅವರು ಎರಡನೇ ರನ್ನರ್ ಅಪ್ ಆಗಿದ್ದರು. ಅದಲ್ಲದೇ ದಿವಿತಾ ರೈ ಅವರು ಇದೇ ವರ್ಷ 2022 ಅಂತ್ಯದಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದು ನಿಜಕ್ಕೂ ಕೂಡ ಸಂತೋಷದ ವಿಚಾರ ಅಂತ ಹೇಳ್ಬೋದು. ಇದರ ನಡುವೆ ದಿವಿತಾ ರೈ ಅವರು ಲಿವಾ ಮಿಸ್ ದಿವಾ ಯೂನಿವರ್ಸ್ ಅವಾರ್ಡ್ ಗೆದ್ದಿದ್ದಾರೆ. ಇಪ್ಪತ್ಮೂರು ವರ್ಷದ ದಿವಿತಾ ಅವರು ಮುಂಬೈನಲ್ಲಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ದಿವಿತಾ ರೈ ಅವರು ಈ ಲಿವಾ ಮಿಸ್ ದಿವಾ ಅವಾರ್ಡ್ ಅನ್ನ ಹರ್ನಾಝ್ ಸಂಧು ಅವರಿಂದ ಸ್ವೀಕರಿಸಿದ್ದಾರೆ. ಹರ್ನಝ್ ಸಂಧು ಅವರು 2021ರ ಮಿಸ್ ಯುನಿವರ್ಸ್ ಆಗಿದ್ದಾರೆ. ಮುಂಬೈ ನಗರದ ಮಹಾಲಕ್ಷ್ಮಿ ಯಲ್ಲಿರೋ ಸುಪ್ರಸಿದ್ದ ಸ್ಟೂಡಿಯೋದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ 2022ರ ಮಿಸ್ ಯೂನಿವರ್ಸ್ ಆಗಿದ್ದ ಹರ್ನಾಝ್ ಕೌರ್ ಸಂಧು ಮತ್ತು ಮಾಜಿ ಮಿಸ್ ಯೂನಿವರ್ಸ್ ಆಗಿದ್ದ ಲಾರಾ ದತ್ತಾ ಇವರಿಬ್ಬರು ಕೇಂದ್ರ ಬಿಂದುವಾಗಿ ಆಕರ್ಷವಾಗಿ ಕಾಣಿಸುತ್ತಿದ್ದರು. ಇದೇ ಕಾರ್ಯಕ್ರಮದಲ್ಲಿ ಮಿಸ್ ಯೂನಿವರ್ಸ್ ಹರ್ನಝ್ ಕೌರ್ ಸಂಧು ಅವರಿಗೆ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

%d bloggers like this: