ಚೀನಾ ದೇಶದಿಂದ ಭಾರತಕ್ಕೆ ಸೇರಿದಂತೆ ವಿಶ್ವಾದ್ಯಂತ ಈ ಕರೋನ ವೈರಸ್ ಎಂಬ ಹೆಮ್ಮಾರಿ ಹರಡಿ ಜಗತ್ತು ಕಂಡುಕೇಳರಿಯದ ಸಾವು ನೋವುಗಳನ್ನು ಕಾಣುವಂತೆ ಮಾಡಿತ್ತು. ಕಣ್ಣಿಗೆ ಕಾಣದ ಮಾರಣಾಂತಿಕ ವೈರಸ್ಸಿನಿಂದ ಇಡೀ ಮನುಕುಲವೇ ಆತಂಕದಲ್ಲಿ 2020ರ ವರ್ಷವನ್ನು ಕಳೆಯಿತು. ಆದರೆ ಈಗ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಇದರ ಅಟ್ಟಹಾಸ ಕಡಿಮೆಯಾಗುತ್ತಾ ಸಾಗುತ್ತಿದೆ ಎಂಬುದು ಖುಷಿಯ ವಿಚಾರ, ಅಕ್ಷರಶಹ ಬೆಚ್ಚಿ ಬೆಚ್ಚಿದ್ದ ದೇಶದ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಸಂಪೂರ್ಣವಾಗಿ ನೆಲಕಚ್ಚಿದ ಎಲ್ಲ ರೀತಿಯ ಉದ್ಯಮಗಳು ಈಗ ಒಂದೊಂದಾಗಿ ಮೊದಲಿನ ಸ್ಥಿತಿಗೆ ಬರುತ್ತಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ದಿನಕಳೆದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಕೋರೋಣ ಪ್ರಕರಣಗಳ ಸಂಖ್ಯೆ ಇಳಿಮುಖದತ್ತ ಸಾಗಿದೆ. ಕೊವ್ಯಾಕ್ಸಿನ್ ಮತ್ತು ಕೋವಿ ಶೀಲ್ಡ್ ಎಂಬ ಲಸಿಕೆ ಹಾಕುವ ಕಾರ್ಯಕ್ರಮಗಳು ದೇಶದ ವಿವಿಧ ಭಾಗಗಳಲ್ಲಿ ತುರ್ತಾಗಿ ನಡೆಯುತ್ತಿವೆ. ಈ ನಡುವೆ ನಮ್ಮ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ವಿಶೇಷವೆಂಬಂತೆ ಯಾವುದೊಂದು ಕೋರೋಣ ಪ್ರಕರಣಗಳು ಪತ್ತೆಯಾಗದೇ ದಾಖಲೆ ಮಾಡಿವೆ.

ಹೌದು ಜನವರಿ 27 ಪ್ರಕಾರ 24 ಗಂಟೆಗಳಲ್ಲಿ 428 ಹೊಸ ಕರುಣ ಪ್ರಕರಣಗಳು ಪತ್ತೆಯಾಗಿದ್ದು 759 ಜನ ಸೋಂಕಿತರು ಆಸ್ಪತ್ರೆಗಳಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ವಿಶೇಷವೆಂಬಂತೆ ಬಾಗಲಕೋಟೆ ಹಾವೇರಿ ಕೊಪ್ಪಳ ಮತ್ತು ರಾಮನಗರ ಜಿಲ್ಲೆಗಳಲ್ಲಿ ಯಾವುದೇ ಒಂದು ಪ್ರಕರಣಗಳು ಕೂಡ ಕಂಡು ಬಂದಿಲ್ಲ. ಕಳೆದ ಕೆಲ ತಿಂಗಳುಗಳಿಂದ ಈ ರೀತಿಯ ವಿಷಯ ಈ ಜಿಲ್ಲೆಗಳಲ್ಲಿ ಮೂಡಿಬಂದಿರಲಿಲ್ಲ.

ಆದರೆ ರಾಜ್ಯದಂತ ಅಲ್ಲಲ್ಲಿ ಇನ್ನೂ ಕೆಲವು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಜನರು ಸರ್ಕಾರದ ನಿಯಮಗಳನ್ನು ಇನ್ನೂ ಸ್ವಲ್ಪ ದಿನಗಳ ಕಾಲ ಪಾಲಿಸುವುದು ಆರೋಗ್ಯ ದೃಷ್ಟಿಯಿಂದ ಅನಿವಾರ್ಯವಾಗಿದೆ. ಒಟ್ಟಾರೆಯಾಗಿ ಮನುಕುಲದ ವಿನಾಶದ ಮುನ್ಸೂಚನೆ ತೋರಿದ್ದ ಕೋರೋಣ ಹೆಮ್ಮಾರಿಯನ್ನು ಸಂಪೂರ್ಣವಾಗಿ ಮಟ್ಟಹಾಕುವವರೆಗೂ ಸಾಮಾಜಿಕ ಅಂತರ ಮತ್ತು ಮಾಸ್ಕ ಧರಿಕೆ ಅಂತಹ ಸಾಮಾನ್ಯ ನಿಯಮಗಳನ್ನು ಪಾಲಿಸಬೇಕಾಗಿರುವದು ನಾಗರಿಕರ ಕರ್ತವ್ಯವಾಗಿದೆ.