ಕರ್ನಾಟಕದ ಜನತೆಗೆ ಗೋಪಿಯನ್ನು ಪರಿಚಯಿಸಲಿದ್ದಾರೆ ಪುನೀತ್ ರಾಜ್‍ಕುಮಾರ್

ನಿಮಗೆ ಪುನೀತ್ ರಾಜ್‍ಕುಮಾರ್ ಅವರ ಪ್ರೊಡಕ್ಷನ್ಸ್ ಹೌಸ್‌ ಆಗಿರುವ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಬಗ್ಗೆ ಗೊತ್ತೇ ಇದೆ, ಸ್ವತಃ ಎರಡು ವರ್ಷಗಳ ಹಿಂದೆ ಪುನೀತ್ ರಾಜ್‍ಕುಮಾರ್ ಅವರೇ ಶುರು ಮಾಡಿದ ಸ್ವಂತ ಪ್ರೊಡಕ್ಷನ್ ಹೌಸ್ ಇದು.ಈಗಾಗಲೇ ಮಾಯಾಬಜಾರ್ ಹಾಗೂ ಕವಲುದಾರಿಯಂತಹ ಅದ್ಭುತ ಚಿತ್ರಗಳನ್ನು ಕೊಟ್ಟಿರುವ ಈ ಹೌಸ್ ಕಳೆದ ವರ್ಷವಷ್ಟೇ ನಟ ದಾನಿಶ್ ಸೇಠ್ ಅಭಿನಯದ ಫ್ರೆಂಚ್ ಬಿರಿಯಾನಿ ಚಿತ್ರವನ್ನೂ ಸಹ ನಿರ್ಮಾಣ ಮಾಡಿತ್ತು.ಆದರೆ ಇದೀಗ ಪುನೀತ್ ಅವರು ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಈ ಮೂಲಕ ಅವರ ನಿರ್ಮಾಣ ಸಂಸ್ಥೆಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಲಿದೆ,ಈ ಚಿತ್ರದ ಹೆಸರು ‘ಒನ್ ಕಟ್ ಟೂ ಕಟ್’.ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಶೇಷ ಹಾಸ್ಯದ ಮೂಲಕ ಗುರುತಿಸಿಕೊಂಡಿರುವ ನಟ ದಾನಿಶ್ ಸೇಠ್ ಅವರು ಬೇರೆ ಯಾರೂ ಅಲ್ಲ ಈ ಚಿತ್ರದ ಗೋಪಿ.

ಈ ಗೋಪಿ ಎಂಬುದು ನಟ ದಾನಿಶ್ ಸೇಠ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಹಾಸ್ಯಮಯ ವಿಡಿಯೋ ಅಲ್ಲಿ ಬರುವ ಒಂದು ಹಾಸ್ಯಭರಿತ ಪಾತ್ರ.ದಾನಿಶ್ ಅವರ ಈ ಗೋಪಿ ಪಾತ್ರ ಒಂದು ಅದ್ಭುತವಾದ ಹಾಸ್ಯ ಪಾತ್ರವಾಗಿದ್ದು ಇದನ್ನು ಸ್ವತಃ ಪುನೀತ್ ರಾಜ್‍ಕುಮಾರ್ ಅವರು ತೆರೆಯ ಮೇಲೆ ತರುತ್ತಿರುವುದು ಎಲ್ಲರಿಗೂ ಬಲು ಕುತೂಹಲ ಮೂಡಿಸಿದೆ. ಪುನೀತ್ ಅವರ ಜೊತೆ ದಾನಿಶ್ ಸೇಠ್ ಅವರು ಮಾಡಿದ್ದ ಫ್ರೆಂಚ್‌ ಬಿರಿಯಾನಿ ಚಿತ್ರ ಬಹಳ ಸುದ್ದಿ ಮಾಡಿತ್ತಾದರೂ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ ಎಂಬುದು ಅಭಿಮಾನಿಗಳ ವಾದ, ಆದರೆ ಈಗ ಬರುತ್ತಿರುವ ‘ಒನ್ ಕಟ್ ಟೂ ಕಟ್, ಚಿತ್ರದ ಗೋಪಿ ಪಾತ್ರ ಕನ್ನಡಿಗರನ್ನ ರಂಜಿಸುವುದರಲ್ಲಿ ಎರಡು ಮಾತಿಲ್ಲ.

%d bloggers like this: