ಅಬ್ಬಾ ಕೊನೆಗೂ ಪಾಪ್ ಕಾರ್ನ್ ತಿನ್ನೋ ಹಾಗು 3D ಗ್ಲಾಸಸ್ ಹಾಕೋ ಕಾಲ ಬಂದೇ ಬಿಡ್ತು. ಹೌದು, ಪಾಪ್ ಕಾರ್ನ್ ಅಂದ ತಕ್ಷಣ ನೆನಪಾಗೋದು ಥಿಯೇಟರ್ಸ್, ಎಷ್ಟೋ ದಿನದಿಂದ ಸಿನಿಮಾ ಪ್ರಿಯರು, ವೀಕೆಂಡ್ ಸಿಕ್ಕಾಗೆಲ್ಲ ಕೊಲೀಗ್ಸ್ ಮತ್ತೆ ಸ್ನೇಹಿತರೊಂದಿಗೆ ಸಿನಿಮಾ ಟಿಕೆಟ್ಸ್ ಬುಕ್ ಮಾಡೋದನ್ನು ಮಿಸ್ ಆದ ಎಷ್ಟೋ ಹುಡುಗರು, ಹುಡುಗಿಯರು, ಕಾಲೇಜ್ ವಿಧ್ಯಾರ್ಥಿಯರು ಇವರೆಲ್ಲರೂ ಕೊವಿಡ್ ನಿಂದಾಗಿ ಥಿಯೇಟರ್ ದಾರಿಯನ್ನು ಕಷ್ಟಪಟ್ಟು ಮರೆತಿದ್ದವರಿಗೆಲ್ಲ ಇಲ್ಲಿದೆ ಭಾರೀ ಧಮಾಕ.

(ಎಸ್‌ಒಪಿಗಳು) ಚಿತ್ರಮಂದಿರಗಳ ಪುನರಾರಂಭಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದೆ. ಆದರೆ ಕಂಡೀಶನ್ ಏನಂದ್ರೆ ಡೆಲ್ಲಿ ಸರ್ಕಾರ ಚಲನಚಿತ್ರಗಳನ್ನು ಕಡ್ಡಾಯವಾಗಿ ವೀಕ್ಷಿಸಲು ಬರುವ ಜನರ ನಡುವೆ ಕನಿಷ್ಠ 6ಫೀಟ್ ಅಂತರವನ್ನು ಕಾಯ್ದಿರಿಸಲು ಮನ್ನಣೆ ನೀಡಿದೆ. ಡೆಲ್ಲಿಯಲ್ಲಿ, ಕರೋನವೈರಸ್ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟಲು ಮಾರ್ಚ್25 ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ಬರುವ ಮೊದಲು, ಮಾರ್ಚ್12 ರಿಂದ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳನ್ನು ಮುಚ್ಚಲಾಗಿದೆ.

ದೆಹಲಿಯಲ್ಲಿ ಗುರುವಾರದಿಂದ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಆದರೆ ಸೀಮಿತ ಸೀಟ್ ಗಳ ಸಾಮರ್ಥ್ಯ ಮತ್ತು ಕೋವಿಡ್19 ಇಂದ ಸುರಕ್ಷತೆಯನ್ನು ಮುಂದಿಟ್ಟುಕೊಂಡು, ಕಳೆದ ವಾರ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ಯಿಂದ ಸೂಚಿಸಲ್ಪಟ್ಟ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ. ಇತರ ಕ್ರಮಗಳ ಸರಣಿಯೊಂದಿಗೆ ಥಿಯೇಟರ್ ಹಾಗು ಮಲ್ಟಿಪ್ಲೆಕ್ಷ್ನಲ್ಲಿ ಶೋ ವೀಕ್ಷಿಸಲು ಮನ್ನಣೆ ನೀಡುವುದರ ಮೂಲಕ ಸಿನಿ ಪ್ರೇಕ್ಷಕರ ಮನಸನ್ನು ಬಾರಿ ಸಂತೋಷಕ್ಕೆ ಗುರಿಮಾಡಿದೆ.

ಸಿನಿಮಾ ವೀಕ್ಷಿಸಲು ಮಾಡಬೇಕಾದ ಮೊದಲ ಕಾರ್ಯ, ಪ್ರತಿ ಸ್ಕ್ರೀನಿಂಗ್ ನಂತರ ಸಭಾಂಗಣಗಳ ಸ್ಯಾನಿಟೈಸೇಶನ್ ಸಹ ಕಡ್ಡಾಯವಾಗಿದೆ. ಸಾಮಾಜಿಕ ದೂರವಿರಲು ಆಸನಗಳನ್ನು ಖಾಲಿ ಬಿಡಬೇಕು ಮತ್ತು ಪ್ರತಿದೀಪಕ ಗುರುತು(fluorescent markers)ಗಳಿಂದ ಗುರುತಿಸಬೇಕು. ಲಾಬಿಗಳು, ಸಾಮಾನ್ಯ ಪ್ರದೇಶಗಳು ಮತ್ತು ಲಿಫ್ಟ್‌ಗಳಲ್ಲಿ ಜನಸಂದಣಿಯನ್ನು ನಿರ್ಬಂಧಿಸಲಾಗಿದೆ. ವಿಭಿನ್ನ ಸಾಲುಗಳಲ್ಲಿ ಕುಳಿತಿರುವ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಚಲಿಸಲು ಅನುವು ಮಾಡಿಕೊಡಲು ಮಾರ್ಗಸೂಚಿಗಳು ದೀರ್ಘ ಮಧ್ಯಂತರಗಳನ್ನು ಸೂಚಿಸುತ್ತವೆ.

ನೋಡಿ ವೀಕ್ಷಕರೆ ಈ ಕೊರೊನ ಸಮಯದಲ್ಲಿ ನಮಗೆ ಎಂಟರ್ಟೈನ್ಮೆಂಟ್ ಗಿಂತ ಮಿಗಿಲಾದದ್ದು, ನಮ್ಮ ಪ್ರಾಣ, ಆರೋಗ್ಯ, ಆದ್ದರಿಂದ ಮೊದಲು ಸೇಫ್ ಆಗಿ ಸೋಂಕು ಹರಡುವ ಸಮಯದಲ್ಲಿ ಮನೆಲಿದ್ದು, ಸೋಂಕಿನ ತೊಂದರೆಗಳ ನಂತರ ನಮ್ಮ ಜೀವನದ ಎಂಟರ್ಟೈನ್ಮೆಂಟ್ ಎಂಬ ಚಿಕ್ಕ ಮನೋರಂಜನೆಗಾಗಿ ಜೀವವನ್ನು ಲೆಕ್ಕಿಸದೇ ಇರೋದು ದಡ್ಡತನ, ಹೇಳೋದು ನಮ್ ಧರ್ಮ, ಕೇಳದೆ ಇದ್ರೆ ಅದು ನೀವಾಗಿ ನೀವೇ ತಂದ್ಕೊಲೋ ಕೊರೊನ.