ಕರ್ನಾಟಕದಲ್ಲಿ ಇಳಿಮುಖದತ್ತ ಸಾಗುತ್ತಿದೆ ಕೊರೊನ, ಮೂಡಿದೆ ಹೊಸ ಆಶಾಕಿರಣ

ನಮ್ಮ ರಾಜ್ಯದಲ್ಲಿ ದಿನೇದಿನೇ ಕೊರೋನಾ ಹೆಮ್ಮಾರಿಯ ಆರ್ಭಟ ಕಡಿಮೆಯಾಗುತ್ತಿದ್ದು ಸೋಂಕು ಪ್ರಕರಣಗಳು ಇಳಿಕೆಯ ಮಾರ್ಗದಲ್ಲಿ ಸಾಗುತ್ತಿವೆ. ಇಡೀ ಜಗತ್ತಿಗೆ ಕಂಟಕವಾಗಿದ್ದ ಈ ಹೆಮ್ಮಾರಿ ವೈರಸ್ ನಿಧಾನವಾಗಿ ನಮ್ಮಿಂದ ದೂರವಾಗುತ್ತದೆ.

ಜೊತೆಗೆ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಕಾರಣವಾಗಿದ್ದ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಸಹ ಗಣನೀಯವಾಗಿ ಪ್ರಕರಣಗಳು ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ. ದಿನ ಒಂದಕ್ಕೆ 10000 ಬರುತ್ತಿದ್ದ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 3130 ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಸೋಂಕಿನಿಂದ ಚೇತರಿಕೆ ಆದವರ ಪ್ರಮಾಣವೂ ಕೂಡ ಗಣನೀಯವಾಗಿ ಏರಿಕೆಯಾಗಿದೆ.

ಇದುವರೆಗೆ 8 ಲಕ್ಷ ಜನ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹಲವು ತಿಂಗಳಗಳ ಸಂಕಷ್ಟಕ್ಕೆ ಈಗ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಆದರೂ ಕೂಡ ಇನ್ನೂ ಕೆಲವು ದಿನಗಳು ಒಳ್ಳೆಯವರಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಮುಂದುವರಿಸುವ ಅನಿವಾರ್ಯತೆ ನಮಗೆ ಇದೆ.

%d bloggers like this: