ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಇದು ಹೆಸರಿಗಷ್ಟೇ ಸೀಮಿತವಾಗಿದೆ ಕಾರಣ ಯಾವುದಾದರು ಬ್ಯಾಂಕುಗಳಿಗೆ ವ್ಯವಹಾರ ಮಾಡಲು ಹೊರಟರೆ ಹಣ ತುಂಬುವ ಚಲನ್ ನಿಂದ ಹಿಡಿದು ಹಣ ಪಡೆಯುವ ಚೆಕ್ ವರೆಗೂ ನಾವು ಕನ್ನಡ ಭಾಷೆಯ ಒಂದು ಪದವನ್ನೂ ನೋಡಲು ಸಾಧ್ಯವಾಗುವುದಿಲ್ಲ, ಅದಿರಲಿ ಸೇವೆಯಂತೂ ಆ ದೇವರಿಗೆ ಪ್ರೀತಿ ಯಾರಾದರೂ ಅನಕ್ಷರಸ್ಥರು ಬ್ಯಾಂಕುಗಳಿಗೆ ಹೋದರೆ ಅವರಿಗೆ ವಿದೇಶಿ ಭಾವನೆಯ ಅನುಭವ ಆಗುವುದು ವಿಪರ್ಯಾಸ. ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಕೆಳ ದರ್ಜೆಯ ಸಿಬ್ಬಂದಿಯನ್ನು ಹೊರತು ಪಡಿಸಿ ಉಳಿದ ಸಿಬ್ಬಂದಿಗಳು ಎತೇಚ್ಛವಾಗಿ ಪರಭಾಷಿಕರೆ ಇರುತ್ತಾರೆ. ಸ್ಥಳೀಯ ಭಾಷೀಕರು ಹೋಗಿ ಏನಾದರು ಸಮಸ್ಯೆಗಳಿಗೆ ಪರಿಹಾರ ಕೇಳಿದರೆ ಮುಗೀತು. ಪ್ರಾದೆಶಿಕ ಭಾಷೆಬಾರದ ಅಧಿಕಾರಿಗಳು ಗೊತ್ತಾದಷ್ಟು ಕೇಳಿಸಿಕೊಂಡು ತನ್ನದೇ ಭಾಷೆಯಲ್ಲಿ ಉತ್ತರ ನೀಡುತ್ತಾನೆ.

ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಅರಿಯದ ನಮ್ಮವರು ಒದ್ದಾಡಿ, ಉರುಳಾಡಿ ಅವರಿವರ ಬಳಿ ಕೇಳಿ ಅವನು ಕೇಳಿದ ದಾಖಲೆ ನೀಡಿ ಹೊರಬರುವಷ್ಟರಲ್ಲಿ ಹೈರಾಣಾಗಿಬಿಡುತ್ತಾನೆ. ಈ ರೀತಿಯ ಘಟನೆಗಳು ಅಲ್ಲಿಲ್ಲಿ ಗಲಾಟೆಯ ವಿಕೋಪಕ್ಕೂ ಹೋಗಿವೆ. ಇದಕ್ಕೆಲ್ಲ ಮುಖ್ಯ ಕಾರಣ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆ.ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ ಆಗಿರುವುದಿರಂದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಧಾನ್ಯತೆ ದೊರೆಯಬೇಕು ಇದು ಕಡ್ಡಾಯ. ಹಾಗೇಯೇ ಅಲ್ಲಿನ ಪ್ರಾಧೇಶಿಕ ಭಾಷೆಗಳಲ್ಲಿ ಈ ಐಬಿಪಿಎಸ್ ಪರೀಕ್ಷೆ ನಡೆಸಬೇಕು ಆಗ ಸ್ಥಳೀಯ ಭಾಷೆಯ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ ಉದ್ಯೋಗವು ಸಹ ಸ್ಥಳೀಯ ಭಾಷೀಕರಿಗೆ ದೊರೆಯುತ್ತದೆ. ಆದರೆ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಹಿಂದಿ,ಇಂಗ್ಲೀಷ್ ಭಾಷೆಯ ಜೊತೆಗೆ ಇನ್ನೊಂದಷ್ಟು ಪ್ರಭಾವ ಪ್ರಾದೇಶಿಕ ಭಾಷೆಗಳಿಗೆ ಒತ್ತನ್ನು ನೀಡಿ ಕನ್ನಡ ಭಾಷೆಗೆ ಮಲತಾಯಿ ಧೋರಣೆ ಮಾಡುತ್ತಿದೆ ಕೇಂದ್ರಸರ್ಕಾರ.



ಇದೇ ವಿಚಾರವಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿಎಸ್.ನಾಗಭರಣ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಸತತವಾಗಿ ಮನವಿಮಾಡಿದರೂ ಇದಕ್ಕೆ ಮೊದಲು ಸಕರಾತ್ಮಕವಾಗಿ ಸ್ಪಂದಿಸಿ ಇದೀಗ ತಮ್ಮ ನಿಲುವಿಗೆ ವಿರುದ್ದವಾಗಿ ನಡೆದು ಕೊಂಡಿದ್ದಾರೆ. ಸಂವಿಧಾನದ ಪರಿಚ್ಛೇದ-8ರಲ್ಲಿ ಎಲ್ಲಾ ರಾಜ್ಯ ಭಾಷೆಗಳಿಗೂ ಸಮಾನ ಪ್ರಾಧಾನ್ಯತೆ ದೊರೆಯಬೇಕೆಂದು ವಿವರಣೆ ಇದ್ದರೂ ಸಹ ಈ ವಿಚಾರವಾಗಿ ಯಾವೊಬ್ಬ ನಾಯಕರು ಸಹ ಧ್ವನಿ ಎತ್ತಿಲ್ಲ, ಎತ್ತುತ್ತಿಲ್ಲ ಕಾರಣ ಗೊತ್ತಿಲ್ಲ. ಒಟ್ಟಿನಲ್ಲಿ ಕನ್ನಡ ಭಾಷೀಕರಿಗೆ ಅದರಲ್ಲೂ ಗ್ರಾಮೀಣ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಕನಸಾಗಿ ಉಳಿಯುವಂತಿದೆ.