ಕರ್ನಾಟಕದಲ್ಲಿ ಮೊದಲು 5ಜಿ ನೆಟ್ ವರ್ಕ್ ಸೌಲಭ್ಯ ಸಿಗುವುದು ಯಾವ ನಗರದ ಜನಕ್ಕೆ ಗೊತ್ತೇ

2022ರ ವರ್ಷದಲ್ಲಿ ಭಾರತಕ್ಕೆ ಬರಲಿದೆ 5ಜಿ ನೆಟ್ ವರ್ಕ್ ಸೇವೆ, ಟೆಲಿಕಾಂ ಕ್ಷೇತ್ರದಲ್ಲಿ ಪರಸ್ಪರ ಭಾರಿ ಪೈಪೋಟಿ ನಡೆಸುತ್ತಿರುವ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಇಂಡಿಯಾ ಈ ಮೂರು ಟೆಲಿಕಾಂ ಕಂಪನಿಗಳು ತಾವೇ ಮೊದಲು 5ಜೀ ಸೇವೆ ನೀಡಬೇಕು ಎಂದು ಭಾರಿ ಪೈಪೋಟಿ ನಡೆಸುತ್ತಿವೆ‌. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಉಂಟುಮಾಡಿದ ಜಿಯೋ ಸಂಸ್ಥೆಯು ಬೃಹತ್ ಪ್ರಮಾಣದಲ್ಲಿ ಬಳಕೆದಾರರನ್ನು ಹೊಂದಿದೆ. ಭಾರ್ತಿ ಏರ್ಟೆಲ್ ಭಾರತದ ಹಳೆಯ ಟೆಲಿಕಾಂ ಕಂಪನಿ ಆಗಿರುವುದರಿಂದ ಭಾರತದಲ್ಲಿ ಉತ್ತಮ ಮಟ್ಟದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು ಅತಿ ಹೆಚ್ಚು ಗ್ರಾಹಕರನ್ನ ಹೊಂದಿರುವ ಎರಡನೇ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ವೊಡಾಫೋನ್ ಕಂಪನಿಯು ಐಡಿಯಾ ಸೆಲ್ಯೂಲರ್ ಕಂಪನಿಯೊಂದಿಗೆ ಸಂಯೋಜನೆಗೊಂಡಿದೆ. ಈಗಾಗಲೇ ಈ ಮೂರು ಟೆಲಿಕಾಂ ಕಂಪನಿಗಳು ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್ ನಗಗರ, ಕೊಲ್ಕತ್ತಾ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಪುಣೆ ಅಂತಹ ಪ್ರತಿಷ್ಟಿತ ನಗರಗಳಲ್ಲಿ 5ಜಿ ಸೇವೆ ನೀಡಲು ಪ್ರಾಯೋಗಿಕ ಸೈಟ್ ಗಳನ್ನು ಸ್ದಾಪನೆ ಮಾಡಿಕೊಂಡಿವೆ. ಆದರೆ ಪ್ರಥಮ ಬಾರಿಗೆ ಯಾವ ಟೆಲಿಕಾಂ ಕಂಪನಿಯು ಭಾರತದಲ್ಲಿ 5ಜಿ ಸೇವೆ ನೀಡಲಿದೆ ಎಂಬುದನ್ನ ಭಾರತ ಸರ್ಕಾರ ಸ್ಪಷ್ಟ ಪಡಿಸಿಲ್ಲ. ಆದರೆ ದೂರ ಸಂಪರ್ಕ ಇಲಾಖೆಯ ಪ್ರಕಾರ ಈ 2022ರ ವರ್ಷದಲ್ಲಿ ಮಾತ್ರ ಭಾರತದಲ್ಲಿ 5ಜೀ ಸೇವೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನ ತಿಳಿಸಿದೆ.

ಭಾರತದಲ್ಲಿ 5ಜೀ ನೆಟ್ ವರ್ಕ್ ಸೇವೆ ಆರಂಭಿಸುವ ಆಲೋಚನೆ 2018 ರಿಂದಾನೇ ಆರಂಭವಾಗಿದ್ದು, 2021ರ ಡಿಸೆಂಬರ್ ಅಂತ್ಯದ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿತ್ತು. ಈ 224 ಕೋಟಿ ವೆಚ್ಚದ ಯೋಜನೆಗಾಗಿ ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿಯ ಐಐಟಿ, ಹೈದರಾಬಾದ್ ಐಐಟಿ, ಮದ್ರಾಸ್ ಐಐಟಿ, ಕಾನ್ಪುರ ಐಐಟಿ, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಂಡ್ ರಿಸರ್ಚ್ ಮತ್ತು ವೈರ್ ಲೆಸ್ ಟೆಕ್ನಾಲಜಿ ಶ್ರೇಷ್ಟತೆ ಕೇಂದ್ರ ಹೀಗೆ ಎಂಟು ಡಿ ಓಟಿಯ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಇನ್ನು ಈ ಮೂರು ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲು ಎಲನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಸಂಸ್ಥೆಯಿಂದ ಸ್ಯಾಟ್ ಲೈಟ್ ಆಧಾರಿತ ಬ್ರಾಡ್ ಬ್ಯಾಂಡ್ ಸೇವೆಯನ್ನ 2022ರ ಡಿಸೆಂಬರ್ ಅಂತ್ಯದಿಂದ ಪ್ರಾರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಬ್ರಾಡ್ ಬ್ಯಾಂಡ್ ಸೇವೆ ನೀಡಲು ಭಾರತ ಸರ್ಕಾರದಿಂದ ಸರಿ ಸುಮಾರು ಎರಡು ಲಕ್ಷ ಸಕ್ರೀಯ ಟರ್ಮಿನಲ್ ಗಳಿಗಾಗಿ ಅನುಮತಿ ಪಡೆದುಕೊಂಡಿದೆ. ಈಗಾಗಲೇ ಭಾರತದಲ್ಲಿ ಸರಿ ಸುಮಾರು ಐದು ಸಾವಿರ ಬ್ರಾಡ್ ಬ್ಯಾಂಡ್ ಬೇಡಿಕೆ ಇದೆ ಎಂದು ಸ್ಟಾರ್ ಲಿಂಕ್ ಕಂಪನಿ ತಿಳಿಸಿದೆ.

%d bloggers like this: