ಕರ್ನಾಟಕದಲ್ಲಿ ರಚನೆಯಾಗುತ್ತಿದೆ ಹೊಸ ಜಿಲ್ಲೆ, ಬೆಂಬಲ ಕೊಟ್ರು ಕನ್ನಡದ ಪ್ರಮುಖ ನಟ

ನಿಮಗೆಲ್ಲಾ ಗೊತ್ತೇ ಇದೆ ಕರ್ನಾಟಕದಲ್ಲಿ ಇನ್ನು ಮುಂದೆ 31 ಜಿಲ್ಲೆಗಳು ನೋಡಸಿಗುತ್ತವೆ, ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಹೊರಹೊಮ್ಮಲಿದೆ. ಕಳೆದ ಕೆಲವರ್ಷಗಳಿಂದ ಬಳ್ಳಾರಿ ಜಿಲ್ಲೆಯಲ್ಲಿರುವ ವಿಜಯನಗರವನ್ನು ಜಿಲ್ಲೆಯಾಗಿ ಮಾಡಬೇಕೆಂದು ಬೇರೆಯಾಗುವುದು ಬೇಡ ಎಂಬ ವಾದಗಳು ಸಹ ಕೇಳಿಬರುತ್ತಿದ್ದವು. ಕಳೆದ ತಿಂಗಳು ಕರ್ನಾಟಕ ಸರ್ಕಾರ ಈ ಹೊಸ ವಿಜಯನಗರ ಜಿಲ್ಲೆ ರಚನೆ ಆಗಲು ಅಸ್ತು ಎಂದಿದೆ. ಅದರಂತೆ ವಿಜಯನಗರ ಜಿಲ್ಲೆಯ ಪ್ರತ್ಯೇಕ ಜಿಲ್ಲಾ ಮ್ಯಾಪ್ ಸದ್ಯದಲ್ಲೇ ತಯಾರಾಗಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸದ್ಯಕ್ಕಿರುವ ಐದಾರು ತಾಲೂಕುಗಳು ಹೊಸ ಜಿಲ್ಲೆಯಾಗಿ ರಚನೆಯಾದ ಜಿಲ್ಲೆಗೆ ಬರುತ್ತವೆ.

ಹೊಸ ವಿಜಯನಗರ ಜಿಲ್ಲೆ ರಚನೆಯ ಆಗುತ್ತಿರುವುದಕ್ಕೆ ಕನ್ನಡದ ಪ್ರಮುಖ ನಟರೊಬ್ಬರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ, ಕನ್ನಡ ನಟ ಬೇರೆ ಯಾರು ಅಲ್ಲ ಅಜಯ್ ರಾವ್. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರಾಗಿದ್ದು ಚಿತ್ರರಂಗಕ್ಕೆ ಬಂದು ಬೆಂಗಳೂರಲ್ಲಿ ಸೆಟಲ್ ಆದವರು. ತಮ್ಮದೇ ಜಿಲ್ಲೆಯಲ್ಲಿ ಹೊಸ ಜಿಲ್ಲೆಯೆಂದು ರಚನೆಯಾಗುತ್ತಿರುವುದು ರ ಬಗ್ಗೆ ಮಾತನಾಡಿದ ನಟ ಅಜಯ್ ರಾವ್ ಅವರು ಖುಷಿಯನ್ನು ವ್ಯಕ್ತಪಡಿಸಿ ಹೊಸ ವಿಜಯನಗರ ಜಿಲ್ಲೆಗೆ ಬೆಂಬಲ ಸೂಚಿಸಿದ್ದಾರೆ.ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಮುಖ್ಯ ನಗರವಾಗಿರಲಿದೆ, ಹಾಗೂ ಕಂಪ್ಲಿ ಕೊಟ್ಟೂರು ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಹೊಸ ವಿಜಯನಗರ ಜಿಲ್ಲೆಯಲ್ಲಿ ತಾಲೂಕುಗಳಾಗಿ ಸೇರಿಕೊಳ್ಳಲಿವೆ.

%d bloggers like this: