ಕರ್ನಾಟಕದಲ್ಲಿ ಶಾಲಾ ಕಾಲೇಜುಗಳು ತೆರೆಯುವ ದಿನಾಂಕ ಫಿಕ್ಸ್ ಮಾಡಿದ ಸರ್ಕಾರ, ಆದರೆ

ಕರ್ನಾಟಕದಲ್ಲಿ ಕೋವಿಡ್ ಕಾರಣಕ್ಕಾಗಿ ಮುಚ್ಚಿದ ಶಾಲೆಯ ಬಾಗಿಲು ತೆರೆಯುತ್ತಿದ್ದು ಮತ್ತೆ ವಿಧ್ಯಾಗಮ ಶುರು! ಶಾಲೆ ಪುನರಾರಂಭಕ್ಕಾಗಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶಾಲೆಗೆ ಮಕ್ಕಳು ಬರವುದು ಕಡ್ಡಾಯವೆನಿಲ್ಲ ಆನ್ಲೈನ್ ತರಗತಿ ಬೇಕಾದವರಿಗೆ ಅವಕಾಶ ಮಾಡಿಕೊಡ ಲಾಗುವುದು ಆದರೆ ಹಾಜರಾತಿ ಕಡ್ಡಾಯವಾಗಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಸರ್ಕಾರ, ಶಾಲೆ ಆಡಳಿತ ಮಂಡಳಿಗಿಂತ ಪೋಷಕರೇ ನಿರ್ಧಾರವೇ ಅಂತಿಮ ಎಂದು ಶಿಕ್ಷಣ ಸಚಿವ ಎಸ್.ಸುರೆಶ್ ಕುಮಾರ್ ತಿಳಿಸಿದ್ದಾರೆ.

ಜನವರಿ 1ರಿಂದ ರಾಜ್ಯದ ಎಲ್ಲಾ ಶಾಲೆಯ 1ರಿಂದ 10ನೇ ತರಗತಿ ಜೊತೆಗೆ ದ್ವಿತೀಯ ಪಿಯುಸಿ ತರಗತಿ ಮತ್ತು 6ರಿಂದ 9 ನೇಯ ತರಗತಿ ಯವರೆಗೆ ಪಾಠ ಪ್ರವಚನಗಳು ಆರಂಭವಾಗಲಿದೆ.

ಮಧ್ಯಾಹ್ನದ ವರೆಗೆ ಮಾತ್ರ ತರಗತಿ, ಆದರೆ ಈ ಶಾಲೆಯನ್ನು ಆಫ್ ಲೈನ್ ತರಗತಿ ನಡೆಸುವುದನ್ನು ಪ್ರಾಯೋಗಿಕವಾಗಿ ಮಾಡಲು ನಿರ್ಧರಿಸಿದೆ. ಅಂದರೆ ಹದಿನೈದು ದಿನಗಳ ಕಾಲ ಎಲ್ಲಾ ರೀತಿಯ ಸೂಕ್ಷ್ಮತೆಯನ್ನು ಅರಿತು ವಾತಾವರಣವನ್ನು ಅವಲೋಕಿಸಿ ತದನಂತರ ಕೋವಿಡ್ ಹರಡುವಿಕೆಯ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಪರಿಪೂರ್ಣವಾಗಿ ಅಧ್ಯಾಯನ ನಡೆಸಿದ ನಂತರ ಸಂಪೂರ್ಣವಾಗಿ ಶಾಲೆಯನ್ನು ತೆರೆದು ಎಲ್ಲಾ ಮಕ್ಕಳಿಗೆ ಶಾಲೆಗೆ ಹೋಗುವುದಕ್ಕೆ ಮುಕ್ತ ಅವಕಾಶ ನೀಡಲಾಗುವುದು. ಈಗ ಪ್ರಾರಂಭವಾಗುವ ಶಾಲೆಯು ಮಧ್ಯಾಹ್ನದ ವರೆಗೆ ಮಾತ್ರ ತರಗತಿಗಳು ನಡೆಯುತ್ತವೆ ಮತ್ತು ಒಂದು ತರಗತಿಯಲ್ಲಿ ಕೇವಲ 15 ವಿಧ್ಯಾರ್ಥಿಗಳು ಮಾತ್ರ ಕೂರವುದು ಕಡ್ಡಾಯ ಇರುತ್ತದೆ.

ಬಿಸಿಯೂಟ ಬಂದ್, ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿದ್ದ ಬಿಸಿಯೂಟ ಕಾರ್ಯಕ್ರಮವನ್ನು ತಾತ್ಕಲಿಕವಾಗಿ ತಡೆಯಿಡಲಾಗಿದೆ. ಆದರೆ ಅವರಿಗೆ ಬೇಕಾದ ಪರಿಕರಗಳನ್ನು ವಿಧ್ಯಾರ್ಥಿಗಳ ಮನೆಗೆ ನೇರವಾಗಿ ಕೊಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.

ಕೋವಿಡ್ ಪರೀಕ್ಷೆ ಜೊತೆಗೆ ನೆಗೆಟೀವ್ ಧೃಡೀಕರಣ ಪತ್ರ ಮತ್ತು ಶೀತ, ಕೆಮ್ಮು, ನೆಗಡಿ ಇಲ್ಲದಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಶಾಲೆಗೆ ರುವ ಹಾಸ್ಟೆಲ್ ನಲ್ಲಿ ತಂಗುವ ವಿಧ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸುವುದು ಕಡ್ಡಾಯ ನೆಗೆಟೀವ್ ವರದಿ ಪ್ರಮಾಣಪತ್ರ ಇದ್ದರೆ ಮಾತ್ರ ಹಾಸ್ಟೇಲ್ ನಲ್ಲಿ ಇರಲು ಅವಕಾಶ ಮತ್ತು ಶಾಲೆಗೆ ಹಾಜರಾಗುವ ಪ್ರತಿಯೊಬ್ಬ ವಿಧ್ಯಾರ್ಥಿ, ಶಿಕ್ಷಕರಿಗೆ, ಶಾಲಾ ಸಿಬ್ಬಂದಿಗೂ ಸಹ ಈ ನಿಯಮ ಅನ್ವಯವಾಗುತ್ತದೆ.

ವಾರದಲ್ಲಿ ಮೂರು ದಿನ ಮಾತ್ರ ವಿಧ್ಯಾಗಮ, ಶಾಲೆಯಲ್ಲಿ ನಡೆಸುವ ವಿಧ್ಯಾಗಮ ಕಾರ್ಯಕ್ರಮವು ದಿನಿನತ್ಯ ನಡೆಯುವುದಿಲ್ಲ ಎಲ್ಲಾ ಮುಂಜಾಗೃತ ಕ್ರಮದ ಜೊತೆಗೆ ಸುರಕ್ಷತೆಯ ನಿಟ್ಟಿನಲ್ಲಿ ಈ ವಿಧ್ಯಾಗಮ ಕಾರ್ಯಕ್ರಮವುವಾರದಲ್ಲಿ ಮೂರುದಿನ ಮಾತ್ರ ನಡೆಯುತ್ತದೆ. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳು ಶಾಲೆಗೆ ಬರದಿದ್ದರೂ ಆನ್ಲೈನ್ ತರಗತಿಯಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಸಮಯವಕಾಶ ಕೊರತೆಯ ಜೊತೆಗೆ ಒತ್ತಡ ನಿಯಂತ್ರಿಸುವ ಸಲುವಾಗಿ ಪಠ್ಯದ ವಿಷಯಗಳಲ್ಲಿ ಒಂದಷ್ಟು ಪಾಠಗಳನ್ನು ಕಡಿತಗೊಳಿಸಿದೆ. ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆ ಆರಂಭಿಸುವ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.

%d bloggers like this: