ಕರ್ನಾಟಕಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಜೋಶಿ, ದೇವದತ್ ಪಡಿಕ್ಕಲ್

ಸಯ್ಯದ್ ಮುಫ್ತಾರಕ್ ಅಲಿ ಟ್ರೋಫಿ, ಟಿಟ್ವೆಂಟಿ ಎಲೈಟ್ ಗ್ರೂಪ್ ‘ಎ’ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್ ತಂಡದ ಎದುರು ಎರಡು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದಲ್ಲಿ ರೈಲ್ವೇಸ್ ತಂಡ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ತದ ನಂತರ ಬ್ಯಾಟಿಂಗ್ ಶುರುಮಾಡಿದ ರೇಲ್ವೇಸ್ ತಂಡದ ಪ್ರಥಮ್ ಸಿಂಗ್ 41, ಶಿವಂ ಚೌಧರಿ 48, ದೃಶಾಂತ್ ಸೋನಿ 12, ಹರ್ಷತ್ಯಾಗಿ 33, ಪ್ರದೀಪ್ ಪೂಜಾರ್ 2, ಮೃಣಾಲ್ ದೇವದರ್ 2 ಗಳಿಸಿದರು. ಒಟ್ಟು ರೈಲ್ವೇಸ್ ತಂಡ ಇಪ್ಪತ್ತು ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ ಪಡೆದಿತ್ತು. ಈ ರನ್ ಮೊತ್ತವನ್ನು ಹಿಂಬಾಲಿಸಿದ ಕರ್ನಾಟಕ ತಂಡ 19.4 ಓವರ್ ಗಳಲ್ಲಿ 158 ರನ್ ಗಳಿಸಿ ಭರ್ಜರಿಯಾಗಿ ಗೆಲುವನ್ನು ಸಾಧಿಸಿತ್ತು. ಕರ್ನಾಟಕ ತಂಡದ ಆಟಗಾರರಾದ ರೋಶನ್ ಕದಮ್ 14, ದೇವದತ್ ಪಡಿಕ್ಕಲ್ 37, ಕರುಣ್ ನಾಯರ್ 15, ಅನಿರುದ್ದ್ ಜೋಶಿ 40 ಎಸೆತಗಳಲ್ಲಿ 64 ರನ್ ಗಳಿಸಿ ಗಮನ ಸೆಳೆದರು.

ರೈಲ್ವೇಸ್ ತಂಡಕ್ಕೆ ಬೌಲಿಂಗ್ ನಲ್ಲಿ ಪರಿಣಾಮಕಾರಿಯಾಗಿ ಆಟ ಆಡಿಸಿದ್ದು ಶ್ರೇಯಸ್ ಗೋಪಾಲ್, ಪ್ರಸಿದ್ದ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ದೃಶಾಂನ್ ಸೋನಿ ಜೊತೆಗೆ ಶಿವೆಂದ್ರ ಸಿಂಗ್ ಕೂಡ ತಲಾ ಎರಡು ವಿಕೆಟ್ ಪಡೆದರು. ಕರ್ನಾಟಕ ತಂಡದ ಅನಿರುಧ್ದ್ ಜೋಶಿಯವರ ಅರ್ಧ ಶತಕ ತಂಡವನ್ನು ಗೆಲ್ಲುಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇನ್ನು ಈ ಸಯ್ಯದ್ ಮುಫ್ತಾರಕ್ ಅಲಿ ಟ್ರೋಫಿ ಟಿ ಟ್ವೆಂಟಿ ಶನಿವಾರ (ನಿನ್ನೆ)ಪಂದ್ಯ ಬೆಂಗಳೂರಿನ ಆಲೂರಿನಲ್ಲಿರುವ ಕೆ.ಎಸ್.ಸಿ.ಎ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.

%d bloggers like this: