ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾಗಿರುವ ತೆರಿಗೆ ಹಣದ ಬಗ್ಗೆ ಹೀಗಂದ್ರು ನಟ ಹಾಗೂ ಶಾಸಕ ಕುಮಾರ್ ಬಂಗಾರಪ್ಪ

ಆರ್ಥಿಕ ಸುಧಾರಣೆಯಲ್ಲಿ ಕರ್ನಾಟಕ ಎರಡನೇ ಸ್ದಾನ! ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಜನಪ್ರಿಯ ಶಾಸಕರಾಗಿರುವ ಕುಮಾರ್ ಬಂಗಾರಪ್ಪ ತನ್ನ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿದ್ದ ಸಾಕಷ್ಟು ಕಾಮಗಾರಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಅದರ ಜೊತೆಗೆ ತಾಲ್ಲೂಕಿನಾದ್ಯಂತ ಸ್ವತಃ ಸಂಚಾರ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಅಲಿಸಿ ಸರ್ಕಾರಿ ಕಛೇರಿಯಲ್ಲಿ ನಡೆಯುವ ಅಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಲೈವ್ ಮುಖಾಂತರ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ ಕೇಂದ್ರ ಸರ್ಕಾರದಿಂದ 760 ಕೋಟಿ ಜಿಎಸ್ಟಿ ಹಣ ರಾಜ್ಯ ಸರ್ಕಾರಕ್ಕೆ ಬಂದಿದೆ. ನಮಗೆ ಸೆಸ್ ಹಾಕುವ ಅಧಿಕಾರ ಇಲ್ಲವಾದ್ದರಿಂದ ತೆರಿಗೆ ಸಂಗ್ರಹಕ್ಕೆ ನಮಗೆ ಅವಕಾಶವಿಲ್ಲ. ಜಿಎಸ್ಟಿಯ ಶೇಕಡ 15% ರಷ್ಟು ಹಣ ಬರಬೇಕಾಗಿತ್ತು ಆದರೆ ಬಂದಿಲ್ಲ ಮುಂದಿನ ದಿನಗಳಲ್ಲಿ ಕೆಂದ್ರಸರ್ಕಾರ ಬಿಡುಗಡೆ ಮಾಡುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಹೇಳಿದರು.

ಇನ್ನು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ದಿತಿ ಕುರಿತು ಮಾತನಾಡಿದ ಕುಮಾರ್ ಬಂಗಾರಪ್ಪ ಸರ್ಕಾರದ ಆರ್ಥಿಕ ಪರಿಸ್ಥಿಥಿ ಕೊಂಚ ಹದಗೆಟ್ಟಿದ್ದರು ಸಹ ಮುಂದಿನ ದಿನಮಾನಗಳಲ್ಲಿ ಚೇತರಿಕೆ ಕಾಣುತ್ತದೆ, ಆರ್ಥಿಕ ಸುಧಾರಣೆಯಲ್ಲಿ ಗುಜರಾತ್ ನಂತರ ಕರ್ನಾಟಕ ನಂತರದ ಸ್ಥಾನ ಪಡೆದುಕೊಂಡಿದೆ.

ಮುಂದಿನ ನಾಲ್ಕನೆಯ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಇನ್ನು ರಾಜ್ಯದಲ್ಲಿ ಸಂಭವಿಸಿದ ಅನಿರೀಕ್ಷಿತ ಮಳೆ ಪ್ರವಾಹದಿಂದಾಗಿ 33,000 ಕೋಟಿಯಷ್ಟು ಆಸ್ತಿ ಪಾಸ್ತಿ ನಷ್ಟವಾಗಿತ್ತು ನಮ್ಮ ಮನವಿಗೆ ಕೇಂದ್ರಸರ್ಕಾರ ಆ ಸಂಪೂರ್ಣ ಮೊತ್ತವನ್ನು ನೀಡಲು ನಿರಾಕರಿಸಿತ್ತು ಮತ್ತು ಸದ್ಯಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ನೆರವು ದೊರೆತಿದೆ ಉಳಿದ ಪರಿಹಾರ ಮೊತ್ತ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು.

%d bloggers like this: