ಬಾಗಲಕೋಟೆಯ ಇಲಕಲ್ಲು ತಾಲ್ಲೂಕಿನ ಹಿರೇಸಿಂಗನಗುತ್ತಿ ಗ್ರಾಮದ ಮಹಮ್ಮದ್ ಹುಸೇನ್ ಎಂಬುವವರು ಡಿಗ್ರೂಪ್ ದರ್ಜೆಯ ಸರ್ಕಾರಿ ನೌಕರರಾಗಿದ್ದು,ತನ್ನ ಪುತ್ರನ ಹುಟ್ಟು ಹಬ್ಬಕ್ಕಾಗಿ ಅದೇ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಾಸಿದ ಗೋಡೆಗೆ ಸುಣ್ಣ ಬಣ್ಣ ಒಡೆಸಿ ಶಾಲೆಯ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದು ಇದೇ ಮಹಮ್ಮದ್ ಹುಸೇನ್ ಅವರು. ಹೌದು ಇದರಲ್ಲಿ ಅಂತಾದ್ದೇನಿದೆ ಎಂಬುದು ಹಲವರ ಅಭಿಪ್ರಾಯ ಆದರೆ ಕೋಟಿ ಕೋಟಿ ಕೊಳೆಯುವಷ್ಟು ಹಣ ಹೊಂದಿರುವ ಎಷ್ಟೋ ವ್ಯಕ್ತಿಗಳು ಬಿಡಿಗಾಸು ಬಿಚ್ಚದೇ ಬೊಗಳೆ ಮಾತು ಆಡುವ ಇಂತಹವರ ಮಧ್ಯೆ ತನ್ನ ಮಗನ ಜನುಮದಿನವನ್ನು ಬಹಳ ಅರ್ಥಪೂರ್ಣವಾಗಿರಬೇಕು ಎಂದು ಯೋಚಿಸಿದ್ದಾರೆ.

ತನ್ನ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ದಿಯ ಕಡೆಗೆ ಗಮನಹರಿಸಿ ಬಣ್ಣ ಮಾಸಿದ ಗೋಡೆಗಳಿಗೆ ಮೂವತ್ತು ಸಾವಿರ ರುಪಾಯಿಗಳನ್ನು ಖರ್ಚುಮಾಡಿ ಇಡೀ ಶಾಲೆಯ ಗೋಡೆಗೆ ಬಣ್ಣ ಒಡೆಸಿದ್ದಾರೆ. ಈ ವಿಚಾರ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರಿಗೆ ತಿಳಿದು ಅವರ ಈ ನಿಸ್ವಾರ್ಥ ಸೇವೆಗೆ, ಉದಾತ್ತ ಮನೋಭಾವದ ಅವರ ಸಮಾಜದ ಕಳಕಳಿಯ ವ್ಯಕ್ತಿತ್ವಕ್ಕೆ ಮನಸೋತು ಅವರಿಗೆ ಅಭಿನಂದನಾ ಪತ್ರವನ್ನು ಅವರಿಗೆ ತಲುಪಿಸಿದ್ದಾರೆ.



ಇದರಿಂದ ಮಹಮ್ಮದ್ ಹುಸೇನ್ ಅವರು ಧನ್ಯವಾದ ತಿಳಿಸಿ ಇದು ನನ್ನ ಕರ್ತವ್ಯ ಎಂಬ ಭಾವ ವ್ಯಕ್ತಪಡಿಸಿದ್ದಾರೆ, ಇದರ ನಂತರ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿ.ಇ.ಓ. ಭೂಬಾಲಿನ ಅವರು ಹುಸೇನ್ ಅವರನ್ನು ಭೇಟಿ ಮಾಡಿ ಅಭಿನಂದನೆ ಪತ್ರ ವಿತರಿಸಿ ಅವರ ಸಾಮಾಜಿಕ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ಅವರ ಕುಟುಂಬವನ್ನು ಗೌರವಿಸಿದ್ದಾರೆ. ಅದರ ಜೊತೆಗೆ ಅವರ ಮಗನ ಹುಟ್ಟುಹಬ್ಬದ ಉಡುಗೊರೆಯಾಗಿ ಶಾಲಾ ಸಮವಸ್ತ್ರ ಮತ್ತು ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.