ಕಾರು ಗ್ರಾಹಕರಿಗೆ ಮಹತ್ತರ ಸುದ್ದಿ ನೀಡಿದ ಟಾಟಾ ಮೋಟಾರ್ಸ್

ಸಂಕುಚಿತ ನೈಸರ್ಗಿಕ ಅನಿಲ ಕಾರು ಆರಂಭ ಮಾಡಲು ಸಜ್ಜಾದ ಟಾಟಾ ಮೋಟಾರ್ಸ್, ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಅನೇಕಾನೇಕ ಹೊಸ ಹೊಸ ವೈಶಿಷ್ಟ್ಯತೆಗಳು ಹೊಂದಿರುವ ವಾಹನಗಳು ಭಾರತೀಯ ಮಾರುಕಟ್ಟೆಗೆ ಬರುತ್ತಿವೆ. ಅದರಂತೆ ಕೆಲವು ವರ್ಷಗಳಿಂದ ಸಿ ಎನ್ ಜಿ (ಸಂಕುಚಿತ ನೈಸರ್ಗಿಕ ಅನಿಲ) ವಾಹನಗಳಿಗೆ ಭಾರಿ ಬೇಡಿಕೆ ಕೇಳಿ ಬರುತ್ತಿದೆ. ಹಾಗಾಗಿ ಪ್ರತಿಷ್ಟಿತ ಕಾರು ತಯಾರಕ ಸಂಸ್ಥೆಗಳು ಕೂಡ ಗ್ರಾಹಕರ ಬೇಡಿಕೆಯಂತೆ ಸಿಎನ್ ಜಿ ವಾಹನಗಳಿಗೇನೇ ಪ್ರಾಶಸ್ತ್ಯ ನೀಡುತ್ತಿವೆ. ಅದೇ ರೀತಿಯಾಗಿ ಇದೀಗ ಟಾಟಾ ಆಲ್ಟ್ರೋಜ್ ಸಿ.ಎನ್.ಜಿ. ಕಾರು ಪರಿಚಯ ಮಾಡಲು ಟಾಟಾ ಮೋಟಾರ್ಸ್ ಯೋಜನೆ ಹಾಕಿಕೊಂಡಿದೆ.

ಈಗಾಗಲೇ ಟಾಟಾ ಮೋಟಾರ್ಸ್ ಭಾರತೀಯ ಕಾರು ಮಾರುಕಟ್ಟೆಗೆ ಹೊಸ ಹೊಸ ಎಡಿಶನ್ ನಲ್ಲಿ ತನ್ನ ಕಂಪನಿಯ ಕಾರುಗಳನ್ನ ಪರಿಚಯಿಸಿದೆ. ಈ ಹಿಂದೆ ಮಾರುತಿ ಸುಜುಕಿ ಸ್ವಿಫ್ಟ್ ಎಸ್ ಸಿ ಎನ್ ಜಿ ಎಡಿಶನ್ ತಂದಿತ್ತು. ಈ ಮೂಲಕ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಭಾರಿ ಗಮನ ಸೆಳೆದಿತ್ತು. ಸದ್ಯಕ್ಕೆ ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ಟಿಯಾಗೊ, ಟಾಟಾ ಟಿಗೋರ್, ಟಾಟಾ ಪೋರ್ಟ್ ಪೋಲಿಯೋ ಕಾರುಗಳಲ್ಲಿ ಸಿ ಎನ್ ಜಿ ಎಡಿಶನ್ ದೊರೆಯುತ್ತಿದೆ. ಈ ಸಿ ಎನ್ ಜಿ ವಾಹನಗಳು ಪೆಟ್ರೋಲ್ ಎಡಿಶನ್ ಕಾರುಗಳಿಗೆ ಹೋಲಿಸಿದರೆ ಕಾರ್ಯಕ್ಷಮತೆ ಕೊಂಚ ಕಡಿಮೆ ಎಂದು ಹೇಳಲಾಗುತ್ತದೆ.

ಆದರೂ ಕೂಡ ಗ್ರಾಹಕರು ಸಿ ಎನ್ ಜಿ ವಾಹನಗಳನ್ನೇ ಹೆಚ್ಚಾಗಿ ಖರೀದಿ ಮಾಡುತ್ತಿರುವ ಕಾರಣ ಟಾಟಾ ಮೋಟಾರ್ಸ್ ಇದೀಗ ತಮ್ಮ ಕಂಪನಿಯ ಟಾಟಾ ನೆಕ್ಸಾನ್ ಮತ್ತು ಟಾಟಾ ಪಂಚ್ ರಿಯಲ್ ಕಾರುಗಳನ್ನ ಕೂಡ ಸಿ ಎನ್ ಜಿ ಎಡಿಶನ್ ನಲ್ಲಿ ನೋಡಬಹುದಾಗಿದೆ. ಈ ಟಾಟಾ ಆಲ್ಟ್ರೋಜ್ ಕಾರಿನಲ್ಲಿ ಏಳು ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ , ಇನ್ಫೋಟೈನ್ ಮೆಂಟ್ ಸಿಸ್ಟಮ್ಸ್ ಸೇರಿದಂತೆ ಆಂಬಿಯೆಂಟ್ ಲೈಟಿಂಗ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಂಡ್ ಐ ಆರ್ ಎ ಲಿಂಕ್ಡ್ ಟೆಕ್ನಾಲಜಿ ಅಂತಹ ಅತ್ಯಾಧುನಿಕ ಫೀಚರ್ ಗಳನ್ನ ಒಳಗೊಂಡಿರಲಿದೆ ಎಂದು ಟಾಟಾ ಕಂಪನಿ ತಿಳಿಸಿದೆ. ಒಟ್ಟಾರೆಯಾಗಿ ಇದೀಗ ಟಾಟಾ ಆಲ್ಟ್ರೋಜ್ ಕಾರು ಕೂಡ ಸಿ ಎನ್ ಜಿ ಎಡಿಶನ್ ನಲ್ಲಿ ಬರುತ್ತಿರುವುದು ಗ್ರಾಹಕರಿಗೆ ಒಂದೊಳ್ಳೆ ಸುದ್ದಿ ನೀಡಿದಂತಾಗಿದೆ.

%d bloggers like this: