ಕತ್ರಿನಾ ಕೈಫ್ ಹಾಗೂ ವಿಕ್ಕಿ ಹೊಸ ದಂಪತಿಗಳಿಗೆ ಹರಿದು ಬಂತು ಕೋಟಿ ಕೋಟಿ ಬೆಲೆಯ ಕಾರುಗಳು ಹಾಗೂ ವಜ್ರದ ಉಡುಗೊರೆಗಳು

ಇತ್ತೀಚೆಗೆ ತಾನೇ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಯುವ ಸ್ಟಾರ್ ನಟ ವಿಕ್ಕಿ ಕೌಶಲ್ ಅವರೊಟ್ಟಿಗೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಹೌದು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಡಿಸೆಂಬರ್ 9 ರಂದು ತಮ್ಮ ಕುಟುಂಬದ ಸಮ್ಮತಿ ಪಡೆದು ಬರೋಬ್ಬರಿ 1400 ವರ್ಷಗಳ ಇತಿಹಾಸ ಹೊಂದಿರುವ ರಾಜಸ್ತಾನದ ಜೈಪುರ ಕೋಟೆಯಲ್ಲಿ ಬಹಳ ವೈಭವವಾಗಿ ಸಪ್ತಪದಿ ತುಳಿದಿದ್ದಾರೆ‌. ಈ ತಾರಾ ಜೋಡಿಗಳ ಮದುವೆ ಐದು ದಿನಗಳ ಕಾಲ ಸಂಭ್ರಮದಿಂದ ನಡೆದಿದೆ‌. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹಕ್ಕೆ ಹಿಂದಿ ಚಿತ್ರರಂಗದ ದಿಗ್ಗಜ ನಟ-ನಟಿಯರು, ರಾಜಕೀಯ ಗಣ್ಯಾತಿಗಣ್ಯರು, ಪ್ರತಿಷ್ಟಿತ ಉದ್ಯಮಿಗಳು ಆಗಮಿಸಿ ನವ ವೈವಾಹಿಕ ಬದುಕಿಗೆ ಹೆಜ್ಜೆ ಇಟ್ಟಿರುವ ನವ ದಂಪತಿಗಳಿಗೆ ಶುಭ ಹಾರೈಸಿದರು.

ವಿಶೇಷ ಅಂದರೆ ಈ ತಾರಾ ಜೋಡಿಗಳ ಮದುವೆಯಲ್ಲಿ ಯಾರಿಗೂ ಕೂಡ ಮೊಬೈಲ್ ಬಳಸುವ ಅವಕಾಶ ನೀಡಿರಲಿಲ್ಲ. ಮೊದಲೇ ಸೂಚಿಸಿದಂತೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಬಹಳ ಸುರಕ್ಷತೆ ಯಿಂದ ಎಲ್ಲಿಯೂ ಕೂಡ ಫೋಟೋ, ವೀಡಿಯೋ ಚಿತ್ರೀಕರಣವಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದರು. ಇದೀಗ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿಗಳಿಗೆ ಅವರ ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಕರು ನೀಡಿರುವ ಮದುವೆ ಉಡುಗೊರೆಗಳನ್ನು ನೋಡುವುದರಲ್ಲಿ ಫುಲ್ ಬಿಝಿ಼ ಆಗಿದ್ದಾರೆ. ಅಚ್ಚರಿಯ ವಿಚಾರ ಅಂದರೆ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಕತ್ರಿನಾ ಕೈಫ್ ಅವರಿಗೆ ಮದುವೆಯ ಉಡುಗೊರೆಯಾಗಿ ಬರೋಬ್ಬರಿ ಮೂರು ಕೋಟಿ ಮೌಲ್ಯದ ರೇಂಜ್ ರೋವರ್ ಕಾರನ್ನು ನೀಡಿದ್ದಾರಂತೆ.

ಇದೀಗ ಈ ವಿಷಯ ಬಿ-ಟೌನ್ ನಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇಬ್ಬರು ಒಟ್ಟಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಜೋಡಿ ತೆರೆ ಮೇಲೆ ಸಿನಿ ಪ್ರೇಕ್ಷಕರಿಗೆ ಸಖತ್ ಮೋಡಿ ಮಾಡಿತ್ತು. ಇನ್ನು ರಣ್ ಬೀರ್ ಕಪೂರ್ ಕೂಡ ಬರೋಬ್ಬರಿ ಎರಡು ಕೋಟಿ ಎಪ್ಪತ್ತು ಲಕ್ಷ ಮೌಲ್ಯದ ವಜ್ರದ ನೆಕ್ಲೇಸ್ ನೀಡಿದ್ದಾರಂತೆ. ಇನ್ನು ನಟಿ ಆಲಿಯಾ ಭಟ್ ಲಕ್ಷಾಂತರ ರೂ ಬೆಲೆ ಬಾಳುವ ಸುಗಂದ ದ್ರವ್ಯದ ಬುಟ್ಟಿಯನ್ನ ಗಿಫ್ಟ್ ಆಗಿ ನೀಡಿದ್ದಾರೆ. ನಟಿ ಅನುಷ್ಕಾ ಶರ್ಮಾ ಕತ್ರಿನಾ ಕೈಫ್ ದಂಪತಿಗಳಿಗೆ ಆರುವರೆ ಲಕ್ಷ ಬೆಲೆ ಬಾಳುವ ವಜ್ರದ ಕಿವಿಯೋಲೆಗಳನ್ನು ನೀಡಿದ್ದಾರಂತೆ‌. ಇನ್ನು ಬಾಲಿವುಡ್ ಕಿಂಗ್ ಖಾನ್ ಶಾರುಖ್ ದಂಪತಿಗಳು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿಗಳಿಗೆ ಒಂದೂವರೆ ಲಕ್ಷ ಮೌಲ್ಯದ ಪೇಂಟಿಂಗ್ ವೊಂದನ್ನು ನೀಡಿದ್ದಾರಂತೆ.

ಇತ್ತ ವರ ವಿಕ್ಕಿ ಕೌಶಲ್ ಗೆ ಪ್ರತ್ಯೇಕವಾಗಿ ಬಾಲಿವುಡ್ ಹ್ಯಾಂಡ್ಸಮ್ ಹೀರೋ ನಟ ಹೃತಿಕ್ ರೋಶನ್ ಬಿಎಂಡಬ್ಲ್ಯೂ ಜಿ 310 ದುಬಾರಿ ಐಷಾರಾಮಿ ಕಾರ್ ವೊಂದನ್ನ ನೀಡಿದ್ದಾರೆ. ಹಾಗೇಯೇ ಕತ್ರಿನಾ ಕೈಫ್ ತನ್ನ ಪತಿ ವಿಕ್ಕಿ ಕೌಶಲ್ ಅವರಿಗೆ ಮುಂಬೈನಲ್ಲಿರುವ ಬರೋಬ್ಬರಿ ಹದಿನೈದು ಕೋಟಿ ಮೌಲ್ಯದ ಅಪಾರ್ಟ್ ಮೆಂಟ್ ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ವಿಕ್ಕಿ ಕೌಶಲ್ ಕೂಡ ತನ್ನ ಪ್ರೀತಿಯ ಪತ್ನಿಗೆ 1.3 ಕೋಟಿ ಮೌಲ್ಯದ ಡೈಮಂಡ್ ರಿಂಗ್ ನೀಡಿದ್ದಾರೆ. ಒಟ್ಟಾರೆಯಾಗಿ ಬಾಲಿವುಡ್ ಸ್ಟಾರ್ ದಂಪತಿಗಳಾಗಿರುವ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೆ ಅವರ ಆಪ್ತರಿಂದ ಕೋಟಿ ಕೋಟಿ ಮೌಲ್ಯದ ಉಡುಗೊರೆಗಳು ಸಿಕ್ಕಿವೆ.

%d bloggers like this: