ಕೆಲವೇ ತಿಂಗಳಲ್ಲಿ ಉಡಾವಣೆ ಆಗಲಿದೆ ಪುನೀತ್ ರಾಜಕುಮಾರ್ ಸ್ಯಾಟೆಲೈಟ್

ಇತ್ತೀಚೆಗೆ ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಅಂದರೆ ಆಗಸ್ಟ್ 15ರಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶಾಲಾ ವಿಧ್ಯಾರ್ಥಿಗಳಿಂದಾನೇ 75 ಉಪಗ್ರಹಗಳನ್ನ ಅಭಿವೃದ್ದಿ ಪಡಿಸುವ ಯೋಜನೆಯನ್ನ ಘೋಷಣೆ ಮಾಡಿದ್ದರು. ಈ ಕೆಜಿಎಸ್3 ಸ್ಯಾಟ್ ಉಪಗ್ರಹವನ್ನು ಬರೋಬ್ಬರಿ 1.90 ಕೋಟಿ ವೆಚ್ಚ ವಿನಿಯೋಗ ಮಾಡಲಾಗುತ್ತಿದೆ. ಇನ್ನು ಉಪ ಮುಖ್ಯ ಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ ನಾರಾಯಣ ಅವರು ಮಾತನಾಡಿ ಶಾಲಾ ಮಕ್ಕಳಲ್ಲಿ ಶೈಕ್ಷಣಿಕ ವಿಚಾರಗಳ ಜೊತೆ ಜೊತೆಗೆ ಬಾಹ್ಯಾಕಾಶ, ಖಗೋಳ ವಿಜ್ಞಾನ, ಅಂತರಿಕ್ಷ ಇತ್ಯಾದಿಗಳ ಬಗ್ಗೆ ವೈಜ್ಞಾನಿಕವಾಗಿ ಕುತೂಹಲ ಆಸಕ್ತಿ ಬೆಳೆಸಲು ಉಪಗ್ರಹ ಉಡಾವಣೆ ಮತ್ತು ಇನ್ನಿತರೆ ಸ್ಪರ್ಧೆಗಳನ್ನ ಏರ್ಪಡಿಸಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಅಪ್ಪು ಅವರು ಮಾಡಿದ ಸಾಧನೆ ಮತ್ತು ಅವರು ಮಾಡಿದ ಸಮಾಜಸೇವೆ ಪರಿಗಣಿಸಿ ಅವರ ಗೌರವಿಸುವ ಸಲುವಾಗಿ ಕೆಜಿಎಸ್ 3ಸ್ಯಾಟ್ ಉಪಗ್ರಹಕ್ಕೆ ಪುನೀತ್ ಅವರ ಹೆಸರನ್ನ ಇಡಲಾಗಿದೆ.

ಈ ಕೆಜಿಎಸ್3 ಸ್ಯಾಟ್ ಉಪಗ್ರಹವನ್ನು1.90 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸುತ್ತಿದ್ದು, ಮಲ್ಲೇಶ್ವರಂನಲ್ಲಿರೋ ಸರ್ಕಾರಿ ಪ್ರೌಢಶಾಲೆಯಲ್ಲಿ ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗಿದೆಯಂತೆ. ಇನ್ನು ಶಾಲಾ ಮಕ್ಕಳಿಗೆ ಈ ಉಪಗ್ರಹ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಲು ರಾಜ್ಯಮಟ್ಟದಲ್ಲಿ ಸ್ಪರ್ಧೆಗಳನ್ನ ನಡೆಸಿ ಅಲ್ಲಿ ಆಯ್ಕೆಯಾದ ಒಂದು ಸಾವಿರ ವಿಧ್ಯಾರ್ಥಿಗಳನ್ನು ಉಪಗ್ರಹ ಉಡಾವಣೆ ಕಾರ್ಯಕ್ರಮ ನಡೆಯುವ ಆಂಧ್ರ ಪ್ರದೇಶದ ಶ್ರೀ ಹರಿಕೋಟಾಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಆನ್ಲೈನ್ ರಸ ಪ್ರಶ್ನೆ, ಚಿತ್ರ ಕಲಾ ಸ್ಪರ್ಧೆ, ಸೈನ್ಸ್ ವಿಧ್ಯಾರ್ಥಿಗಳಿಗೆ ಪ್ರಬಂಧ ರಚನೆ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪೋಸ್ಟರ್ ರಚನೆ ಅಂತಹ ಸ್ಪರ್ಧೆಗಳನ್ನ ಏರ್ಪಡಿಸಲಾಗಿದೆಯಂತೆ. ಈ ಸ್ಪರ್ಧೆಯ ಬಗ್ಗೆ ಈಗಾಗಲೇ 31 ಜಿಲ್ಲೆಗಳ ಡಿಡಿಪಿಐ ಗಳಿಗೆ ಸೂಚನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಕೆಜಿಎಸ್3 ಸ್ಯಾಟ್ ಉಪಗ್ರಹ ಕ್ಕೆ ಪುನೀತ್ ಅವರ ಹೆಸರಿಟ್ಟಿರುವುದಕ್ಕೆ ನಿಜಕ್ಕೂ ಕೂಡ ನಾಡಿನ ಜನತೆ ಅದರಲ್ಲಿಯೂ ಅಪ್ಪು ಅಭಿಮಾನಿಗಳು ಸಂತೋಷ ಪಡಬಹುದಾಗಿದೆ.

%d bloggers like this: