ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಿಕ್ತು ಭರ್ಜರಿ ಕೊಡುಗೆ

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಮಹತ್ವದ ಕೊಡುಗೆ! ಒಂದೆಡೆ ನೂತನ ರೈತ ಮಸೂದೆ ಕಾಯ್ದೆಯಿಂದಾಗಿ ರೈತರ ಭವಿಷ್ಯಕ್ಕೆ ಕುತ್ತು ತರುತ್ತಿದ್ದಾರೆ ಎಂದು ರಾಜ್ಯದಲ್ಲಿಯೂ ಸೇರಿ ಹಲವಾರು ರಾಜ್ಯಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ, ದೇಶದರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಗೊಂಡಿದ್ದು ಅದರ ವಿಚಾರವಾಗಿ ನಿನ್ನೆ ರೈತ ಮುಖಂಡರ ಜೊತೆ ಒಂದು ಸುತ್ತಿನ ಸಭೆ ನಡೆಸಿದರು ಕೂಡ ಸಂಧಾನ ಸಭೆ ರೈತರಿಗೆ ತೃಪ್ತಿಯಾಗದೆ ವಿಫಲಗೊಂಡಿದೆ. ಇದರ ಮಧ್ಯೆ ಮೋದಿ ಸರ್ಕಾರ ವಿವಿಧ ರಾಜ್ಯಗಳ ನೂತನ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡಿದೆ. ಅದರಲ್ಲಿ ಕರ್ನಾಟಕ ರಾಜ್ಯದ ಯೋಜನೆಯು ಸಹ ಒಂದಿದೆ ಎಂಬುದು ರಾಜ್ಯದ ಜನರಿಗೆ ಸಂತಸದ ವಿಚಾರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಯವರು ವೀಡಿಯೋ ಕಾನ್ಫೆರನ್ಸ್ ಮೂಲಕ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ, ಹಾಗಾದರೆ ಯಾವ ಯೋಜನೆ, ರಾಜ್ಯದ ಯಾವ ಜಿಲ್ಲೆಗಳಿಗೆ ಅನುಕೂಲ ಆಗಲಿದೆ ಎಂಬುದನ್ನು ತಿಳಿಯಬೇಕಾದರೆಈ ವರದಿಯನ್ನು ಸಂಪೂರ್ಣವಾಗಿ ಓದಿ. ಮಂಗಳೂರು ಮತ್ತು ಕೊಚ್ಚಿ ಮಾರ್ಗವಾಗಿ 450 ಕಿಮೀ ಉದ್ದದ ನೈಸರ್ಗಿಕ ಅನಿಲ ಕೊಳವೆ ಪೈಪ್ ಅನ್ನು ಅಳವಡಿಸಲಾಗುತ್ತಿದೆ. ಇದರಿಂದಮಾಲಿನ್ಯಮುಕ್ತ ಅಡುಗೆ ಅನಿಲ ಪೂರೈಸಬಹುದು. ಜೊತೆಗೆ ಕೈಗಾರಿಕೆಗಳಿಗೆ, ಸಾರಿಗೆ ಮತ್ತು ಪೆಟ್ರೋ ಕೆಮಿಕಲ್ ಮತ್ತು ಕಮರ್ಷಿಯಲ್ ಉದ್ಯಮಗಳಿಗೆ ನೈಸರ್ಗಿಕ ಅನಿಲವನ್ನು ನಿರಂತರವಾಗಿ ಸರಬರಾಜು ಮಾಡಲಾಗಬಹುದಾಗಿದೆ.

ಅದಲ್ಲದೆ ಈ ಯೊಜನೆಯಿಂದ ಕರಾವಳಿ ಕರ್ನಾಟಕದ ನಿರುದ್ಯೋಗ ಸಮಸ್ಯೆ ಸುಧಾರಿಸಬಹುದು, ಈ ಯೋಜನೆಯ ಒಟ್ಟು ನಿರ್ಮಾಣ ವೆಚ್ಚ ಸರಿ ಸುಮಾರು ಮೂರು ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಈ ನೈಸರ್ಗಿಕ ಅನಿಲ ಉಡುಪಿ, ದಕ್ಷಿಣ ಕನ್ನಡ, ಕೋಯಿಕೋಡ್, ಪಾಲಕ್ಕಡ್, ತ್ರಿಶೂರು ಕಣ್ಣೂರು, ಕಾಸರಗೋಡು, ವಯನಾಡು ಜಿಲ್ಲೆಗಳಿಗೆ ಪೂರೈಕೆಯಾಗುತ್ತದೆ. ಮತ್ತು ಈ ನೈಸರ್ಗಿಕ ಅನಿಲ ಪೈಪ್ ಅಳವಡಿಕೆ ಯೋಜನೆಯಿಂದಾಗಿ ಕೈಗಾರಿಕೋದ್ಯಮಗಳಿಗೆ ಮತ್ತು ವಾಹನಗಳಿಗೆ ಕಡಿಮೆ ವೆಚ್ಛದಲ್ಲಿ ಅನಿಲ ಪೂರೈಕೆ ಮಾಡ ಬಹುದಾಗಿದೆ ಎಂದು ತಿಳಿದುಬಂದಿದೆ.

%d bloggers like this: