ಇಂದು ದಿನ ಬಳಕೆಯ ವಸ್ತುಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ವಸ್ತುಗಳಲ್ಲಿ ಶ್ಯಾಂಪೂ ಕೂಡ ಒಂದು, ಮಾರುಕಟ್ಟೆಗಳಲ್ಲಿ ಅನೇಕ ಶ್ಯಾಂಪೂಗಳಿವೆ. ಇತ್ತೀಚೆಗಂತೂ ಕೂದಲು ಕಪ್ಪಾಗುವುದಕ್ಕೆ, ನೀಳವಾಗಿ ಬೆಳೆಯುವುದಕ್ಕೆ, ಡ್ಯಾಂಡ್ರಫ್ ಹೋಗಲಾಡಿಸುವುದಕ್ಕೆ ಹೀಗೆ ಒಂದೊಂದು ಬಗೆಯ ಶ್ಯಾಂಪೂಗಳು ಮಾರುಕಟ್ಟೆಗೆ ಪರಿಚಯವಾಗಿವೆ. ಆದರೆ ಉತ್ತಮ ಗುಣಮಟ್ಟದ ಜೊತೆಗೆ ಎಲ್ಲಾರಿಗೂ ಕೈಗೆಟುಕುವ ದರದಲ್ಲಿ ಸಿಗುವಂತಹ ಶ್ಯಾಂಪೂ ಅಂದರೆ ಅದು ಚಿಕ್ ಶ್ಯಾಂಪೂ. ಇಂದು ಬಡ ಮತ್ತು ಮಧ್ಯಮ ವರ್ಗದ ಶೇಕಡಾವಾರು ಜನರು ಬಳಸುವ ಶ್ಯಾಂಪೂ ಅಂದರೆ ಅದು ಚಿಕ್ ಶ್ಯಾಂಪೂ. ಚಿಕ್ ಶ್ಯಾಂಪೂ ಕಂಪನಿಯ ಸ್ಥಾಪಕರಾದ ಸಿಕೆ ರಂಗನಾಥ್ ಅವರ ತಂದೆಯ ಹೆಸರು ಚಿನ್ನಿ ಕೃಷ್ಣನ್. ಅವರು ತಮ್ಮ ತಂದೆಯ ಹೆಸರಿನ ಮೊದಲ ಎರಡು ಅಕ್ಷರಗಳನ್ನೇ ಬಳಸಿಕೊಂಡು ತಮ್ಮ ಸಂಸ್ಥೆಯ ಶ್ಯಾಂಪೂವಿಗೆ ಚಿಕ್ ಎಂದು ಹೆಸರಿಟ್ಟುಕೊಂಡರು.

ಇವರ ತಂದೆ ಚಿನ್ನಿ ಕೃಷ್ಣನ್ ಅವರು ಉತ್ಪಾದಕ ವಸ್ತುಗಳನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡುವಂತಹ ಕೆಲಸ ಮಾಡುತ್ತಿರುತ್ತಾರೆ. ತದನಂತರ ಆರು ಜನ ಮಕ್ಕಳಿರುವ ಇವರು ತಮ್ಮದೇ ಒಂದು ಶ್ಯಾಂಪು ಸಂಸ್ಥೆಯನ್ನ ಹುಟ್ಟು ಹಾಕುತ್ತಾರೆ. ಈ ಆರು ಜನ ಮಕ್ಕಳಲ್ಲಿ ಸಿಕೆ ರಂಗನಾಥ್ ಅವರು ಕೊನೆಯವರಾಗಿರುತ್ತಾರೆ. ಇವರಿಗೆ ನಾನು ಬೇರೆ ಏನನ್ನಾದರು ಮಾಡಬೇಕು ಎಂದು ಕೋಳಿ ಫಾರ್ಮ್ ಆರಂಭ ಮಾಡುವುದಾಗಿ ಆಲೋಚನೆ ಮಾಡುತ್ತಾರೆ. ಆದರೆ ಸಿಕೆ ರಂಗನಾಥ್ ಅವರಿಗೆ ಶ್ಯಾಂಪೂವಿನ ಬಗ್ಗೆ ಆಳ ಅರಿವು ಗೊತ್ತಿದ್ದ ಕಾರಣ ಮತ್ತೆ ತಾವು ವಿಭಿನ್ನ ಬಗೆಯ ಶ್ಯಾಂಪೂವನ್ನು ಪರಿಚಯಿಸಲು ಆರಂಭಿಸುತ್ತಾರೆ. ಆಗ ಸಿಕೆ ರಂಗನಾಥ್ ಅವರ ವಯಸ್ಸು ಕೇವಲ ಇಪ್ಪತ್ತೆರಡು.



ರಂಗನಾಥ್ ಅವರು ಅಣ್ಣಾಮಲೈ ವಿಶ್ವ ವಿಧ್ಯಾಲಯದಿಂದ ಬಿ.ಎಸ್ಸಿ ಕೆಮಿಸ್ಟ್ರಿ ಪದವಿ ಪಡೆದಿದ್ದ ಇವರು ಮನೆಯಿಂದ ಹೊರಬಂದು ಹಲವು ಕಂಪನಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಆಗ ಚಿಕ್ ಶ್ಯಾಂಪು ಕಂಪನಿ ಆರಂಭ ಮಾಡುತ್ತಾರೆ. ಮಾರುಕಟ್ಟೆ ತಂತ್ರಗಾರಿಕೆ ಅರಿತಿದ್ದ ಸಿ.ಕೆ.ರಂಗನಾಥ್ ಅವರು ಐದು ಚಿಕ್ ಶ್ಯಾಂಪುವಿನ ಖಾಲಿ ಪ್ಯಾಕೆಟ್ ಅನ್ನು ಹಿಂದಿರುಗಿ ನೀಡಿದರೆ ಒಂದು ಚಿಕ್ ಶ್ಯಾಂಪೂ ಉಚಿತ ಎಂಬ ವಿನೂತನವಾದ ಮಾರ್ಕೆಟಿಂಗ್ ಸ್ಟ್ರಾಟಜಿ ಮಾಡುತ್ತಾರೆ. ಇದಾದ ಬಳಿಕ ಈ ಉಚಿತ ಯೋಜನೆಯನ್ನ ಹತ್ತು ತಿಂಗಳ ಬಳಿಕ ನಿಲ್ಲಿಸುತ್ತಾರೆ. ಅಷ್ಟೊತ್ತಿಗೆ ಚಿಕ್ ಶ್ಯಾಂಪೂ ಜಗತ್ತಿನ ಅನೇಕ ದೇಶಗಳಲ್ಲಿ ಭಾರಿ ಜನಪ್ರಿಯವಾಗಿರುತ್ತದೆ.



1983 ರಲ್ಲಿ ಸಿಕೆ ರಂಗನಾಥ್ ಅವರು ಆರಂಭಿಸಿದ ಈ ಚಿಕ್ ಶ್ಯಾಂಪೂ ಕಂಪನಿ ಇಂದು ಹನ್ನೆರಡು ದೇಶಗಳಲ್ಲಿ ತನ್ನ ಚಿಕ್ ಶ್ಯಾಂಪೂವಿನ ಮಾರುಕಟ್ಟೆಯನ್ನೊಂದಿದೆ. ಶ್ರೀಲಂಕಾ ಮತ್ತು ಬಾಂಗ್ಲಾ ದೇಶದಲ್ಲಿ ವಿಭಾಗೀಯ ಕಛೇರಿಯನ್ನು ಸಹ ಹೊಂದಿದೆ. ಇಂದು ಚಿಕ್ ಶ್ಯಾಂಪೂ ಕಂಪನಿಯನ್ನ ಕವಿನ್ ಕೇರ್ ಎಂಬ ಸಂಸ್ದೆಯಾಗಿ ಪರಿವರ್ತಿಸಿ ವಾರ್ಷಿಕವಾಗಿ ಬರೋಬ್ಬರಿ ಮುನ್ನೂರು ಕೋಟಿ ಆದಾಯ ಗಳಿಸುತ್ತಿದೆ. ಈ ಮೂಲಕ ಸಿಕೆ ರಂಗನಾಥ್ ಅವರು ಬುದ್ದಿವೊಂದಿದ್ದರೆ ವ್ಯಕ್ತಿಯೊಬ್ಬ ಜೀವನದಲ್ಲಿ ಏನು ಬೇಕಾದರು ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.