ಭಾರತ ತಂಡದ ಖ್ಯಾತ ಮಾಜಿ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಎಂದು ಕೂಡಲೇ ಮೊದಲು ಕಣ್ಣಿಗೆ ಬರುವುದು 2007 ರ ಟಿ20 ವಿಶ್ವಕಪ್ ಫೈನಲ್ ಮತ್ತು 2011ರ ಏಕದಿನ ಕ್ರಿಕೆಟ ಫೈನಲ್ ಪಂದ್ಯಗಳಲ್ಲಿ ಅವರು ಅಮೋಘವಾಗಿ ಆಡಿದ ರೀತಿ. ಹೌದು ನಮ್ಮ ತಂದುಕೊಡುವಲ್ಲಿ ಅತಿ ಮುಖ್ಯ ಪಾತ್ರ ವಹಿಸಿದ ಆಟಗಾರ ಎಂದರೆ ಅದು ಗೌತಮ್ ಗಂಭೀರ್. ಕೆಲವರ್ಷಗಳ ಹಿಂದೆ ಕ್ರಿಕೆಟ್ ಆಟದಿಂದ ನಿವೃತ್ತಿ ಪಡೆದ ಗಂಭೀರ್ ನೇರವಾಗಿ ಮುಖಮಾಡಿತದ್ದು ರಾಜಕೀಯದತ್ತ. ಅವರ ಅದೃಷ್ಟ ನೋಡಿ ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ವಿಜಯಶಾಲಿಯಾಗಿ ಸದ್ಯ ಪೂರ್ವ ದೆಹಲಿಯ ಸಂಸದನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಗಂಭೀರ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಇದು ಯಾವುದೊ ರಾಜಕೀಯ ಅಥವಾ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದ ವಿಷಯವಲ್ಲ ಬದಲಾಗಿ ಎಲ್ಲರಿಗೂ ಸ್ಫೂರ್ತಿಯಾಗುವ ಅವರ ಸಮಾಜಸೇವೆಗಾಗಿ. ಹೌದು ಹಸಿದವರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡುವ ತಮಿಳುನಾಡಿನ ಅಮ್ಮ ಹಾಗೂ ಕರ್ನಾಟಕದ ಇಂದಿರಾ ಕ್ಯಾಂಟೀನ್ ಗಳ ಮಾದರಿಯಲ್ಲಿ ಗೌತಮ್ ಗಂಭೀರ್ ಅವರು ತಮ್ಮ ಪೂರ್ವ ದೆಹಲಿಯ ಸಂಸದೀಯ ಕ್ಷೇತ್ರದಲ್ಲಿ ಬಡವರಿಗೆ ಕೇವಲ ಒಂದು ರೂಪಾಯಿ ದರದಲ್ಲಿ ಊಟ ನೀಡುವ ಜನ್ ರಸೋಯಿ ಕ್ಯಾಂಟೀನ್ ಗಳನ್ನು ಆರಂಭಿಸಿದ್ದಾರೆ.

ಹೌದು ಗಾಂಧಿನಗರದಲ್ಲಿ ಮೊದಲ ಕ್ಯಾಂಟೀನ್ ಅನ್ನು ಗಂಭೀರ್ ಅವರು ಗುರುವಾರ ಉದ್ಘಾಟನೆ ಮಾಡಿದ್ದು ಗಣ ರಾಜ್ಯೋತ್ಸವದ ದಿನ ಅಶೋಕನಗರದಲ್ಲಿ ಮತ್ತೊಂದು ಕ್ಯಾಂಟೀನ್ ಆರಂಭಗೊಳ್ಳಲಿದೆ. ಈ ಕುರಿತು ಮಾತನಾಡಿದ ಗಂಭೀರ್ ಜಾತಿ ಧರ್ಮ ಆರ್ಥಿಕ ಸ್ಥಿತಿಗತಿಗಳನ್ನು ಮೀರಿ ಆರೋಗ್ಯ ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುವ ಹಕ್ಕು ಎಲ್ಲರಿಗೂ ಇದೆ, ನಿರಾಶ್ರಿತರು ಕಡುಬಡವರು ದಿನಕ್ಕೆ ಒಂದು ಹೊತ್ತು ಕೂಡ ಸರಿಯಾಗಿ ಊಟ ಮಾಡದ್ದನ್ನು ನೋಡಿ ಬೇಸರಗೊಂಡಿದ್ದೆ.

ಹೀಗಾಗಿ ಕೇವಲ ಒಂದು ರೂಪಾಯಿ ದರದಲ್ಲಿ ಅಗತ್ಯವಿರುವವರು ಇಲ್ಲಿಗೆ ಬಂದು ಊಟ ಮಾಡಬಹುದು ಎಂದು ಹೇಳಿದರು. ಈ ಸಮಾಜಸೇವೆಗಾಗಿ ಗೌತಮ್ ಗಂಭೀರ್ ಅವರು ಸರ್ಕಾರದಿಂದ ಯಾವುದೇ ರೀತಿಯ ನೆರವು ಪಡೆದುಕೊಂಡಿಲ್ಲ ಬದಲಾಗಿ ಗೌತಮ ಗಂಭೀರ್ ಫೌಂಡೇಶನ್ ಇಂದ ಬಂದ ಹಣ ಹಾಗೂ ತಮ್ಮ ವೈಯಕ್ತಿಕ ಹಣದಿಂದ ಈ ಕೆಲಸ ಮಾಡುತ್ತಿದ್ದಾರೆ. ಒಂದು ಊಟದಲ್ಲಿ ಅಣ್ಣ ಕಾಳು ತರಕಾರಿ ಪದಾರ್ಥಗಳನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಗೌತಮ್ ಅವರ ಈ ಸಮಾಜಸೇವೆ ಅನುಕರಣೀಯವಾದುದು ಮತ್ತು ಶ್ಲಾಘನೀಯ ಎಂದು ಹೇಳಬಹುದು.