ಕೆಜಿಎಫ್ ಚಾಪ್ಟರ್2 ಚಿತ್ರಕ್ಕೆ ಸಕ್ಕತ್ ಹಾಡು ಬರೆದು ಕ್ರೇಜ್ ಸೃಷ್ಟಿಸಿದ್ದಾರೆ ಕನ್ನಡದ ಹೆಸರಾಂತ ನಟನ ಮಗಳು

ಕೆಜಿಎಫ್2 ಚಿತ್ರದ ಮಾನ್ ಸ್ಟಾರ್ ಸಾಂಗ್ ಬರೆದು ಸಖತ್ ಕ್ರೇಜ಼್ ಹುಟ್ಟು ಹಾಕಿದ್ದಾರೆ ಕನ್ನಡದ ಈ ಖ್ಯಾತ ನಟನ ಮಗಳು. ನೂಲಿನಂತೆ ಸೀರೆ ಅಮ್ಮನಂತೆ ಮಗಳು ಎಂಬ ಗಾದೆಯಿದೆ. ಆದ್ರೆ ಈ ಪ್ರತಿಭೆ ತನ್ನ ತಂದೆಯಂತೆ ಕಲಾ ಕ್ಷೇತ್ರದಲ್ಲಿ ತನ್ನ ವಿಭಿನ್ನವಾದ ಪ್ರತಿಭೆಯ ಮೂಲಕ ಹೆಸರು ಮಾಡುತ್ತಿದ್ದಾರೆ. ಅವರು ಯಾರು ಅಂತೀರಾ. ಅವರು ಬೇರಾರು ಅಲ್ಲ. ಕನ್ನಡದ ಖ್ಯಾತ ನಟ, ನಿರೂಪಕ, ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅಧಿತಿ ಸಾಗರ್. ಹೌದು ಅಧಿತಿ ಸಾಗರ್ ಈ ಹಿಂದೆ ಶರಣ್ ಅಭಿನಯದ ರ್ಯಾಂಬೋ2 ಚಿತ್ರದಲ್ಲಿ ದಮ್ಮ್ ಮಾರೋ ದಮ್ ಎಂಬ ಹಾಡನ್ನ ಹಾಡಿದ್ದರು. ಅಧಿತಿ ಸಾಗರ್ ಅವರ ಕಂಚಿನ ಕಂಠದಲ್ಲಿ ಬಂದಂತಹ ಈ ಹಾಡು ಸಿನಿ ಪ್ರೇಕ್ಷಕರಿಗೆ ಭಾರಿ ಇಷ್ಟವಾಗಿತ್ತು.

ಇದಾದ ಬಳಿಕ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಸಾವಧಾನ ಬೆಂದಕಾಳೂರು ಅಂತ ರ್ಯಾಪ್ ಸಾಂಗ್ ವೊಂದನ್ನ ಹಾಡಿದ್ದರು. ಹೀಗೆ ಗಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಅಧಿತಿ ಸಾಗರ್ ಇದೀಗ ಶಿವಣ್ಣ ಅವರೊಟ್ಟಿಗೆ ವೇದ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗಾಯಕಿಯಾಗಿ, ನಟಿಯಾಗಿ ಮಿಂಚುವುದು ಅಷ್ಟೇ ಅಲ್ಲ ಇದೀಗ ಗೀತ ರಚನಾಕಾರ್ತಿಯಾಗಿ ಕೂಡ ಹೊರ ಹೊಮ್ಮಿದ್ದಾರೆ ಅಧಿತಿ ಸಾಗರ್. ಹೌದು ವರ್ಲ್ಡ್ ವೈಡ್ ಸೌಂಡ್ ಮಾಡ್ತಾ ಇರೋ ಕೆಜಿಎಫ್2 ಚಿತ್ರದ ಬಗ್ಗೆ ಈಗಾಗಲೇ ನಿಮಗೆ ತಿಳಿದೇ ಇದೆ. ಇದೀಗ ಅಧಿತಿ ಸಾಗರ್ ಬರೆದಿರುವ ಕೆಜಿಎಫ್2 ಚಿತ್ರದ ಮಾನ್ ಸ್ಟಾರ್ ರ್ಯಾಪ್ ಸಾಂಗ್ ಯೂಟ್ಯೂಬ್ ನಲ್ಲಿ ಸಖತ್ ಕ್ರೇಜ಼್ ಉಂಟು ಮಾಡುತ್ತಿದೆ. ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಕಳೆದ ವಾರ ರಿಲೀಸ್ ಆಗಿರುವ ಈ ಮಾನ್ ಸ್ಟರ್ ರ್ಯಾಪ್ ಸಾಂಗ್ ಬರೋಬ್ಬರಿ ಹನ್ನೆರಡು ಲಕ್ಷ ವೀಕ್ಷಣೆ ಪಡೆದು ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

ಈ ಮೂಲಕ ಇದೀಗ ಅರುಣ್ ಸಾಗರ್ ಅವರ ಪುತ್ರಿ ಅಧಿತಿ ಸಾಗರ್ ಲಿರಿಕ್ಸಿಸ್ಟ್ ಆಗಿಯೂ ಕೂಡ ಪರಿಚಯ ಆಗಿದ್ದಾರೆ. ಈ ಹಾಡು ಬರೆಯಲು ಅಧಿತಿ ಸಾಗರ್ ಅವರು ಒಂದು ವಾರ ಸಮಯ ತೆಗೆದುಕೊಂಡಿದ್ದಾರಂತೆ. ತಾನು ಬರೆಯುತ್ತಿದ್ದ ಸಾಲುಗಳನ್ನು ಯಶ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಕಳುಹಿಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ತಿದ್ರಂತೆ ಅಧಿತಿ. ಅವರು ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಪ್ರೋತ್ಸಾಹ ನೀಡಿದ ಕಾರಣ ಅಧಿತಿ ಸಾಗರ್ ಅವರು ಈ ಮಾನ್ ಸ್ಟರ್ ರ್ಯಾಪ್ ಸಾಂಗ್ ಮಾಡಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಇದೀಗ ಅಧಿತಿ ಸಾಗರ್ ಕನ್ನಡ ಚಿತ್ರರಂಗದಲ್ಲಿ ಗಾಯನ, ನಟನೆ ಜೊತೆಗೆ ಗೀತೆ ರಚನಾಕಾರ್ತಿಯಾಗಿ ಸಹ ಗುರುತಿಸಿಕೊಂಡಿದ್ದಾರೆ.

%d bloggers like this: