ಕೆಜಿಎಫ್ ಅಂದರೆನೇ ಭಯ ಪಡುವ ವಿಷಯ, ಕೆಜಿಎಫ್ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್ ಅವರು

ಹೌದು ಕನ್ನಡದ ಕೆಜಿಎಫ್2 ಸಿನಿಮಾ ಇಡೀ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲು ಎಂದು ಹೇಳಬಹುದು. ಇದುವರೆಗೆ ಕನ್ನಡದ ಯಾವ ಸಿನಿಮಾ ಕೂಡ ನೂರು ಕೋಟಿ ಬಾಚಿರಲಿಲ್ಲ. ಕೆಜಿಎಫ್ ಚಿತ್ರ ನೂರು ಕೋಟಿ ಬಾಚಿ ಭಾರತಾದ್ಯಂತ ಕನ್ನಡ ಸಿನಿಮಾದ ತಾಕತ್ತು ಏನೆಂಬುದನ್ನು ನಿರೂಪಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್2 ಸಿನಿಮಾ ಭಾರತ ಮಾತ್ರ ಅಲ್ಲದೆ ಇಡೀ ವಿಶ್ವದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಅಚ್ಚರಿ ಪಟ್ಟು ದಿಟ್ಟಿಸಿ ನೋಡುವಂತೆ ಮಾಡಿದೆ. ಚಿತ್ರದ ಮೇಕಿಂಗ್, ಬಿಜಿಎಮ್, ಕ್ಯಾಮೆರಾ ವರ್ಕ್ ಕಂಡು ಯಾವ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲದಂತೆ ದುಬಾರಿ ಬೆಲೆಯ ಸೆಟ್ ಹಾಕಿ ಅಮೋಘವಾದ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟರು, ನಿರ್ದೇಶಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಬಾಲಿವುಡ್ ನ ಕೆಲವು ಸ್ಟಾರ್ ನಟರು ಕನ್ನಡದ ಕೆಜಿಎಫ್2 ಚಿತ್ರದ ಈ ಅಭೂತಪೂರ್ವ ಯಶಸ್ಸನ್ನು ಕಂಡು ಹೊಟ್ಟೆ ಕಿಚ್ಚು ಪಟ್ಟಿದ್ದೇ ಹೆಚ್ಚು. ಇನ್ನೂ ಕೆಲವರು ಕೆಜಿಎಫ್2 ಚಿತ್ರದ ಬಿಡುಗಡೆಯಾಗುತ್ತಿದೆ ಎಂದು ಭಯಬಿದ್ದು ತಮ್ಮ ಚಿತ್ರದ ರಿಲೀಸ್ ಡೇಟ್ ಅನ್ನು ಮುಂದೂಡಿಕೊಂಡರು. ಅಷ್ಟರ ಮಟ್ಟಿಗೆ ಕೆಜಿಎಫ್2 ಚಿತ್ರದ ಭಯ ಬಾಲಿವುಡ್ ಮಂದಿಯನ್ನು ಕಂಗೆಡಿಸಿತ್ತು. ಅಂತೆಯೇ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಅವರಿಗೆ ಕೂಡ ಕೆಜಿಎಫ್2 ಚಿತ್ರದ ಅಬ್ಬರ ಕಂಡು ಹೆದರಿಕೆ ಆಗಿತ್ತಂತೆ. ಇದನ್ನ ಅವರೇ ಸ್ವತಃ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕೆಜಿಎಫ್2 ಚಿತ್ರದ ಕಥೆಯೇ ಆ ರೀತಿ ಇದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏಕೆಂದರೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿತ್ತು.

ಆದರೆ ಅಂತಿಮ ಕ್ಷಣದಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಏನಾದ್ರು ಕೆಜಿಎಪ್2 ಚಿತ್ರದ ಮಂದೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಚಿತ್ರ ಬಂದಿದ್ರೆ ಏನಾಗ್ತಿತ್ತು ಎಂಬುದನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಚಿತ್ರ ಇದೀಗ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ಇನ್ನು ನಮ್ಮ ಕನ್ನಡದ ಕೆಜಿಎಫ್2 ಚಿತ್ರ ಸಾವಿರ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತಿದೆ. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಇದೇ ಅಮೀರ್ ಖಾನ್ ನಟನೆಯ ದಂಗಲ್ ಚಿತ್ರ ಎರಡು ಸಾವಿರ ಕೋಟಿ ಗಳಿಕೆ ಮಾಡಿ ಸಾರ್ವಕಾಲಿಕ ದಾಖಲೆ ಮಾಡಿದೆ. ಇದೀಗ ಈ ದಾಖಲೆಯನ್ನ ಪುಡಿಗಟ್ಟಲು ಕೆಜಿಎಫ್2 ಚಿತ್ರ ಹಿಂಬಾಲಿಸುತ್ತಿದೆ. ಇನ್ನೂ ಒಂದು ವಾರ ಕಳೆದರೆ ಕೆಜಿಎಫ್2 ಚಿತ್ರ ದಂಗಲ್ ಚಿತ್ರದ ದಾಖಲೆಯನ್ನು ಮುರಿಯುವ ಎಲ್ಲಾ ಲಕ್ಷಣ ಇದೆ ಎಂದು ಸಿನಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

%d bloggers like this: