ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಹೆದರಿದ ನಟ ಅಮೀರ್ ಖಾನ್, ತಮ್ಮ ಚಿತ್ರ ಮುಂದೂಡಿಕೆ

ನಮ್ಮ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್2 ಏಪ್ರಿಲ್ 14 ರಂದು ಬಿಡುಗಡೆಯಾಗುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೆಯೇ ಅದೇ ಏಪ್ರಿಲ್ 14 ರಂದು ಬೇರೆ ಭಾಷೆಯ ಸ್ಟಾರ್ ನಟರ ಸಿನಿಮಾಗಳು ಕೂಡ ರಿಲೀಸ್ ಆಗುವುದಾಗಿ ಹೇಳಿಕೊಂಡಿದ್ದವು. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ರಿಲೀಸ್ ಆದರೆ ಕ್ಲ್ಯಾಶ್ ಆಗುವುದಂತೂ ಖಂಡಿತ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಇಡೀ ದೇಶದ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್ 1 ಸಿನಿಮಾ ಕ್ರಿಯೇಟ್ ಮಾಡಿದ ಹವಾ ಗೊತ್ತೇ ಇದೆ. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ ಬಾಲಿವುಡ್ ನ ಸ್ಟಾರ್ ನಟರ ಸಿನಿಮಾಗಳು ಕೂಡ ಮುಗ್ಗುರಿಸಿ ಬಿದ್ದಿದ್ದವು. ಇಷ್ಟೆಲ್ಲಾ ಕ್ರೇಜ್ ಹುಟ್ಟುಹಾಕಿದ ಕೆಜಿಎಫ್ ಸಿನಿಮಾದ ಚಾಪ್ಟರ್ 2 ಕೂಡ ಬಹು ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಇದೆಲ್ಲಾ ತಿಳಿದಿದ್ದರೂ ಹಲವು ನಟರು ತಮ್ಮ ಸಿನಿಮಾವನ್ನು ಏಪ್ರಿಲ್ 14 ರಂದೇ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಆದರೆ ಈಗ ಬಾಲಿವುಡ್ ನ ಸ್ಟಾರ್ ನಟರೊಬ್ಬರು ತಮ್ಮ ಸಿನಿಮಾವನ್ನು ಮುಂದೂಡುವುದಾಗಿ ಹೇಳಿಕೊಂಡಿದ್ದಾರೆ. ಹೌದು ಬಾಲಿವುಡ್ ನ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾ ಏಪ್ರಿಲ್ 14 ರಂದೇ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಈಗ ತಮ್ಮ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಅವರ ಜೊತೆಗೆ ಹಿಂದಿ ನಟರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ನಟಿಸಿರುವುದರಿಂದ ಈ ಸಿನಿಮಾಗೆ ದೊಡ್ಡ ಮೈಲೇಜ್ ಸಿಕ್ಕಿದೆ. ಹೀಗಾಗಿ ಹಿಂದಿಯಲ್ಲೂ ಈ ಸಿನೆಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ.

ಕೆಜಿಎಫ್ 2 ಚಿತ್ರದ ಎದುರು ಲಾಲ್ ಸಿಂಗ್ ಛಡ್ಡಾ ಸಿನಿಮಾ ತೆರೆಗೆ ತರುತ್ತಿರುವುದಕ್ಕಾಗಿ ಅಮೀರ್ ಖಾನ್ ಕ್ಷಮೆ ಕೇಳಿದ್ದರು. ನಮ್ಮ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಹೇಳಿಕೊಂಡಿದ್ದರು. ಆದರೆ ಹಲವರು ಕೆಜಿಎಫ್ 2 ಸಿನಿಮಾದ ಎದುರು ಅಮೀರ್ ಖಾನ್ ಅವರ ಸಿನಿಮಾ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದರು. ಇಷ್ಟೆಲ್ಲಾ ಅಂಶಗಳನ್ನು ಗಮನಿಸಿದ ಮೇಲೆ ಲಾಲ್ ಸಿಂಗ್ ಛಡ್ದಾ ಚಿತ್ರತಂಡವು ನಮ್ಮ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿಲ್ಲ. ಸಿನಿಮಾದ ಕೆಲಸಗಳು ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ.

ಸಿನಿಮಾದ ಕೆಲಸಗಳು ಏಪ್ರಿಲ್ ಹದಿನಾಲ್ಕರ ಒಳಗೆ ಮುಗಿಯಲು ಸಾಧ್ಯವಾಗದೇ ಇರುವುದರಿಂದ ಲಾಲ್ ಸಿಂಗ್ ಛಡ್ದಾ ಸಿನಿಮಾವನ್ನು ಆಗಸ್ಟ್ 11 2022 ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಇದರಿಂದ ಕೆಜಿಎಫ್ 2 ಚಿತ್ರದ ರೇಸ್ ಜೊತೆ ಅಮೀರ್ ಖಾನ್ ಹಿಂದೆ ಸರಿಯುವುದು ಖಾತರಿಯಾಯಿತು. ಅಮೀರ್ ಖಾನ್ ಚಿತ್ರದ ರೇಸ್ ನಿಂದ ಹಿಂದೆ ಸರಿಯುವ ಘೋಷಣೆ ಮಾಡಿದ ಬೆನ್ನಲ್ಲೇ ಶಾಹಿದ್ ಕಪೂರ್ ನಟನೆಯ ಜರ್ಸಿ ಸಿನಿಮಾ ಏಪ್ರಿಲ್ 14 ರಂದು ತೆರೆಗೆ ಬರುವ ವಿಚಾರವನ್ನು ಸ್ಪಷ್ಟಪಡಿಸಿದೆ. ಕೆಜಿಎಫ್ 2 ಚಿತ್ರದ ಜೊತೆಗೆ ಜರ್ಸಿ ಸಿನೆಮಾ ಸ್ಪರ್ಧೆ ನೀಡಲು ಸಜ್ಜಾಗಿದೆ. ಈ ಸ್ಪರ್ಧೆಯಲ್ಲಿ ಯಾವ ಸಿನಿಮಾ ಗೆಲ್ಲುತ್ತದೆ ಎಂಬುದನ್ನು ಕಾದುನೋಡಬೇಕು.

%d bloggers like this: