ಕೆಜಿಎಫ್ ಚಾಪ್ಟರ್ 2, ತಂಡದೊಂದಿಗೆ ಮಾತನಾಡಿರುವ ನಟ ಅಮೀರ್ ಖಾನ್ ಅವರು. ಒಂದೇ ದಿನ ಎರಡೂ ಚಿತ್ರ ಬಿಡುಗಡೆ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಾಗಿರುವ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಮತ್ತು ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳು ಏಕಕಾಲಕ್ಕೆ ವರ್ಲ್ಡ್ ವೈಡ್ 2022 ಏಪ್ರಿಲ್ 14 ರಂದು ಬಿಡುಗಡೆ ಆಗುತ್ತಿವೆ. ಈ ಹಿನ್ನೆಲೆ ಬಾಲಿವುಡ್ ನಟ ಅಮೀರ್ ಖಾನ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ನನ್ನ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲು ಇನ್ನೊಬ್ಬ ಸಿನಿಮಾ ನಿರ್ಮಾಪಕರ ಅನುಮತಿ ಕೇಳುವ ಅಗತ್ಯ ಇಲ್ಲ ಎಂದು ಹೇಳಿದ್ದರು. ನಟ ಅಮೀರ್ ಖಾನ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ನೆಟ್ಟಿಗರು ಅಮೀರ್ ಖಾನ್ ಹೇಳಿಕೆಗೆ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದ್ದರು.

ಇನ್ನು ಈ ಬಗ್ಗೆ ನಟ ಅಮೀರ್ ಖಾನ್ ನಾನು ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಟ ಯಶ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಳಿ ಈ ಬಗ್ಗೆ ಮಾತನಾಡಿದ್ದೇನೆ. ಯಶ್ ಅವರು ನನ್ನ ಜೊತೆ ಉತ್ತಮವಾಗಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ನಡೆದುಕೊಂಡ ರೀತಿ ನನಗೆ ಇಷ್ಟವಾಗಿದೆ. ನಾನು ಕೆಜಿಎಫ್ ಚಿತ್ರ ತಂಡದವರಿಗೆ ಕ್ಷಮೆ ಕೇಳುತ್ತೇನೆ. ನನ್ನ ಸಿನಿಮಾದ ಜೊತೆಗೆ ಕೆಜಿಎಫ್ 2 ಚಿತ್ರದ ಬಗ್ಗೆಯೂ ಕೂಡ ಪ್ರಚಾರ ಮಾಡುತ್ತೇನೆ. ಇನ್ನು 2022 ಏಪ್ರಿಲ್ 14 ರಂದೇ ನಮ್ಮ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಿಡುಗಡೆ ಮಾಡಲು ಪ್ರಮುಖ ಕಾರಣ ಅಂದರೆ ಅಂದು ಕಾಲಾ ಬೈಸಾಕಿ ಹಬ್ಬವಿದೆ.

ಅಂದು ಬಿಡುಗಡೆಯಾದ ನನ್ನ ಎಲ್ಲಾ ಸಿನಿಮಾಗಳು ಕೂಡ ಯಶಸ್ಸು ಪಡೆದಿವೆ. ಆದ್ದರಿಂದಾಗಿ ಲಾಲ್ ಸಿಂಗ್ ಛಡ್ಡಾ ಚಿತ್ರವನ್ನು ಅಂದೇ ರಿಲೀಸ್ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಅಮೀರ್ ಖಾನ್ ನಟನೆಯ ಈ ಲಾಲ್ ಸಿಂಗ್ ಛಡ್ಡಾ ಸಿನಿಮಾ ಹಾಲಿವುಡ್ ನ ಕ್ಲಾಸಿಕ್ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದೆ. ಇನ್ನು ಕನ್ನಡದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಈಗಾಗಲೇ ತನ್ನ ಟೀಸರ್, ಟ್ರೇಲರ್ ಯಿಂದಾಗಿ ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ.

ಹೊಂಬಾಳೆ ಪ್ರೊಡಕ್ಷನ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಬಾಲಿವುಡ್ ಸ್ಟಾರ್ ನಟರು ಕೂಡ ನಟಿಸಿರುವ ಕಾರಣ ಈ ಕೆಜಿಎಫ್ 2 ಚಿತ್ರದ ಬಗ್ಗೆ ಮತ್ತಷ್ಟು ಹೈಪ್ ಹೆಚ್ಚಾಗಿದೆ. ರವಿ ಬಸ್ರೂರ್ ಅವರ ಸಂಗೀತ, ಭುವನ್ ಗೌಡ ಅವರ ಕ್ಯಾಮೆರಾ ಕೈ ಚಳಕ ಈಗಾಗಲೇ ಮೇಕಿಂಗ್ ನಲ್ಲಿ ಗೊತ್ತಾಗಿದೆ. ಇನ್ನು 2022 ಏಪ್ರಿಲ್ 14 ರಂದು ಬಿಡುಗಡೆಯಾಗುವ ಈ ಎರಡು ಚಿತ್ರಗಳಿಗೆ ಸಿನಿ ಪ್ರೇಕ್ಷಕ ಪ್ರಭು ಯಾವ ಸಿನಿಮಾಗೆ ಜೈಕಾರ ಹಾಕಲಿದ್ದಾರೆ ಎಂಬುದನ್ನ ಕಾದು ನೋಡಬೇಕಾಗಿದೆ.

%d bloggers like this: