ಕೆಜಿಎಫ್ ಚಾಪ್ಟರ್2 ಚಿತ್ರದ ದೃಶ್ಯಗಳನ್ನು ನೋಡಿ ಮನಸೋತ ದಕ್ಷಿಣ ಚಿತ್ರರಂಗದ ಖ್ಯಾತ ನಟ ಹಾಗೂ ವಿತರಕ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ಚಿತ್ರ ಮಾಡಿದ ದಾಖಲೆ ಅಷ್ಟಿಷ್ಟಲ್ಲ. ಪ್ರಶಾಂತ್ ನೀಲ್ ಅವರ ಅದ್ಭುತವಾದ ಕಲ್ಪನೆಯಲ್ಲಿ ಮೂಡಿಬಂದ ಈ ಕೆಜಿಎಫ್ ಚಿತ್ರ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಅವರನ್ನು ರಾಕಿಬಾಯ್ ಆಗಿ ನ್ಯಾಶನಲ್ ಸ್ಟಾರ್ ಆಗುವಂತೆ ಮಾಡಿತು. ಇದೀಗ ಯಶ್ ಅವರ ಸ್ಟಾರ್ ಪಟ್ಟ ಮುಗಿಲೆತ್ತರಕ್ಕೆ ಮುಟ್ಟಿದೆ. ಕೆಜಿಎಫ್ ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ರೋಚಕ ತಿರುವು ನೋಡಿದ ನಂತರ ಸಿನಿ ಪ್ರೇಕ್ಷಕರು ಕೆಜಿಎಫ್ ಸಿನಿಮಾ ಪಾರ್ಟ2 ಬರುತ್ತದೆ ಎಂದು ಊಹೆ ಮಾಡಿಕೊಂಡರು. ಅದರಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾದ ಮುಂದುವರಿದ ಭಾಗವಾಗಿ ಕೆಜಿಎಫ್ ಚಾಪ್ಟರ್2 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಕೆಜಿಎಫ್ ಮೊದಲ ಭಾಗಕ್ಕಿಂತ ಅದ್ದೂರಿಯಾಗಿ ಮೂಡಿ ಬಂದಿದೆ.

ಅದಕ್ಕ ಸಾಕ್ಷಿಯಾಗಿ ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದ ಟೀಸರ್ ನಲ್ಲಿ ಕಂಡ ಮೇಕಿಂಗ್ ಯಾವ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲದಂತೆ ರಿಚ್ ಆಗಿ ಕಾಣಿಸಿದೆ.ಈ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ಬರೋಬ್ಬರಿ ನೂರು ಮಿಲಿಯನ್ ವೀಕ್ಷಣೆ ಪಡೆದು ವಿಶ್ವದ ಚಿತ್ರರಂಗದಲ್ಲಿ ದಾಖಲೆ ನಿರ್ಮಾಣ ಮಾಡಿತು. ಅಷ್ಟರ ಮಟ್ಟಿಗೆ ಕೆಜಿಎಫ್2 ಸಿನಿಮಾ ತನ್ನ ಟೀಸರ್ ಮೂಲಕ ಸದ್ದು ಮಾಡಿದೆ. ಇದೀಗ ಚಿತ್ರ ತಂಡದಿಂದ ಕೆಜಿಎಫ್ ಚಾಪ್ಟರ್2 ಸಿನಿಮಾದ ಟ್ರೇಲರ್ ಇದೇ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿದೆ ಎಂಬ ಖಚಿತ ಮಾಹಿತಿ ಹೊರ ಬಿದ್ದಿದೆ. ಇತ್ತೀಚೆಗಷ್ಟೇ ಬಿಡುಗಡೆ ಆದ ಕೆಜಿಎಪ್2 ಚಿತ್ರದ ಪೋಸ್ಟರ್ ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.

ಇದರ ನಡುವೆ ಮಲೆಯಾಳಂ ಸೂಪರ್ ಸ್ಟಾರ್ ನಟ, ನಿರ್ದೇಶಕ ಮತ್ತು ಸಿನಿಮಾ ವಿತರಕ ಆಗಿರುವ ಪೃಥ್ವಿರಾಜ್ ಅವರು ಕೆಜಿಎಫ್2 ಸಿನಿಮಾವನ್ನು ನೋಡಿ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನ ಹಾಡಿ ಹೊಗಳಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಪೃಥ್ವಿರಾಜ್ ಅವರು ನಿರ್ಮಾಪಕರಾದ ವಿಜಯ್ ಕಿರಗಂದೂರ್ ಅವರೊಟ್ಟಿಗೆ ಸಿನಿಮಾ ಮಾಡುವುದು ಖುಷಿ ಆದ ವಿಚಾರ. ಕೆಜಿಎಫ್2 ಸಿನಿಮಾ ನೋಡಿ ಮನಸ್ಸಿಗೆ ಮುದವಾಗಿದೆ. ಪ್ರಶಾಂತ್ ನೀಲ್ ಅವರು ಹೊಸ ಸ್ಟಾಂಡರ್ಡ್ ಕ್ರಿಯೇಟ್ ಮಾಡಿದ್ದಾರೆ ಎಂದು ಕೆಜಿಎಫ್2 ಚಿತ್ರ ವಿಮರ್ಶೆ ಮಾಡಿದ್ದಾರೆ ಪೃಥ್ವಿರಾಜ್.

ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಕೆಜಿಎಫ್2 ಚಿತ್ರದ ಮಲೆಯಾಳಂ ಅವತರಣಿಕೆಯ ವಿತರಣೆಯ ಹಕ್ಕನ್ನು ನಟ ಪೃಥ್ವಿರಾಜ್ ಅವರು ಪಡೆದುಕೊಂಡಿದ್ದಾರೆ. ಅದರಂತೆ ತೆಲುಗು ಮತ್ತು ತಮಿಳಿನಲ್ಲಿ ನಟ ವಿಶಾಲ್ ಅವರು ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಕೆಜಿಎಫ್ ಚಾಪ್ಟರ್2 ಚಿತ್ರ ಕಣ್ತುಂಬಿಕೊಳ್ಳಲು ಇಡೀ ವಿಶ್ವದ ಚಿತ್ರರಂಗವೇ ಭಾರಿ ಕುತೂಹಲದಿಂದ ಕಾಯುತ್ತಿದೆ. ಈ ಭಾಗದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಧೀರನಾಗಿ ಅಬ್ಬರಿಸಿದ್ದು, ರವೀನಾ ಟಂಡನ್ ಬಹು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಪಾರ್ಟ್1 ನಲ್ಲಿ ಇದ್ದಂತಹ ಬಹುತೇಕ ನಟರು ಇದ್ದಾರೆ. ಇನ್ನು ಕೆಜಿಎಫ್2 ಚಿತ್ರ ಏಪ್ರಿಲ್ 14ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ. ಇದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ ಎನ್ನಬಹುದು.

%d bloggers like this: