ಸಾಕಷ್ಟು ಸರ್ಪ್ರೈಸ್ ಪ್ಯಾಕೇಜ್ ಗಳಿಂದ ಕೂಡಿದ ಕೆಜಿಎಫ್ ಚಾಪ್ಟರ್ ಟು ಚಿತ್ರ ಸಿನಿಪ್ರೇಕ್ಷಕರ ಕಣ್ಣಿಗೆ ಹಬ್ಬದಂತೆ. ಕೆಜಿಎಫ್ ಚಾಪ್ಟರ್1 ಚಿತ್ರ ರಿಲೀಸ್ ಆಗಿ ಹಲವು ವರ್ಷಗಳೇ ಕಳೆದರೂ ಇನ್ನೂ ಕೂಡ ಸಿನಿಮಾದ ಬಗ್ಗೆ ಇರುವ ಕ್ರೇಜ್ ಕಡಿಮೆಯಾಗಿಲ್ಲ. ಸುಮಾರು ಮುರು ನಾಲ್ಕು ವರ್ಷಗಳಿಂದ ಕೆಜಿಎಫ್2 ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರೇಕ್ಷಕರು ಕಾದುಕುಳಿತಿದ್ದಾರೆ. ಹಾಗೆಯೇ ಕೆಜಿಎಫ್ ಚಿತ್ರತಂಡ ತನ್ನ ಅಭಿಮಾನಿಗಳಿಗೆ ಯಾವತ್ತೂ ಕೂಡ ನಿರಾಸೆ ಉಂಟು ಮಾಡಿಲ್ಲ. ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಹೊಸ ಹೊಸ ಸರ್ಪ್ರೈಸ್ ಗಳನ್ನು ಕೊಡುತ್ತಲೇ ಇದೆ. ಇದುವರೆಗೂ ಕೆಜಿಎಫ್ ಚಿತ್ರತಂಡದಿಂದ ಒಂದಾದಮೇಲೊಂದರಂತೆ ಅಪ್ಡೇಟ್ಗಳು ಬರುತ್ತಲೇ ಇದ್ದವು. ಹಾಗೂ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಬಗ್ಗೆ ಹಲವಾರು ಸುದ್ದಿಗಳು ಹುಟ್ಟುತ್ತಲೇ ಇದ್ದವು.

ಇದೀಗ ದೇಶಾದ್ಯಂತ ಕೆಜಿಎಫ್2 ಚಿತ್ರದ ಬಿಡುಗಡೆಗೆ ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಅವರು ಹಲವಾರು ಸಂಗತಿಗಳನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಕೆಜಿಎಫ್2 ಚಿತ್ರದ ಟ್ರೈಲರ್ ನ್ನು ಜನರು ತುಂಬಾ ಇಷ್ಟ ಪಟ್ಟಿದ್ದಾರೆ. ಕೆಜಿಎಫ್ 2 ಚಿತ್ರದ ಬಗ್ಗೆ ಇರುವ ಕ್ರೇಜ್ ಟ್ರೈಲರ್ ನೋಡಿದ ಮೇಲೆ ಇನ್ನೂ ದುಪ್ಪಟ್ಟಾಗಿದೆಯೆಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರದ ಮಾಸ್ ಡೈಲಾಗ್ ಗಳಂತೂ ಎಲ್ಲರ ಫೆವರಿಟ್. ಟ್ರೈಲರ್ ನಲ್ಲಿ ಯಶ್ ಅವರ ವಯಲೆನ್ಸ್ ಡೈಲಾಗ್ಗಳು ಅತ್ಯಂತ ಜನಪ್ರಿಯವಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿವೆ.



ಒಂದು ಸಿನಿಮಾದಲ್ಲಿ ಹೀರೋನ ಪಾತ್ರ ಎಲ್ಲರನ್ನು ಆಕರ್ಷಿಸಬೇಕಾದರೆ ಡೈಲಾಗ್ಗಳು ಅತಿ ಅವಶ್ಯಕ. ಅದೇ ಡೈಲಾಗ್ ಗಳಿಂದ ಸಿನಿಮಾ ಜನಪ್ರಿಯವಾಗುತ್ತದೆ ಎಂದರೆ ತಪ್ಪಾಗಲಾರದು. ಸದ್ಯಕ್ಕೆ ಡೈಲಾಗ್ ಗಳ ಬಗ್ಗೆ ಮಾತನಾಡುತ್ತಿರುವುದಕ್ಕೆ ಕಾರಣವಿದೆ. ಹೌದು ಇತ್ತೀಚೆಗೆ ಪ್ರಶಾಂತ್ ನೀಲ್ ಅವರು ಒಂದು ಗುಟ್ಟನ್ನು ರಟ್ಟು ಮಾಡಿದ್ದಾರೆ. ಅದೇನೆಂದರೆ ಯಶ್ ಅವರು ಈ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲದೆ ಡೈಲಾಗ್ ಗಳನ್ನು ತಾವೇ ಬರೆದಿದ್ದಾರಂತೆ. ಹೌದು ಕೆಜಿಎಫ್2 ಚಿತ್ರದ ಬಹುತೇಕ ಡೈಲಾಗುಗಳನ್ನು ಯಶ್ ಅವರು ಖುದ್ದು ತಾವೇ ಬರೆದು ಅಭಿನಯಿಸಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳಿಗೆ ಯಶ್ ಅವರ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು.