ಕೆಜಿಎಫ್ ಚಾಪ್ಟರ್2 ಕ್ಲೈಮಾಕ್ಸ್ ದೃಶ್ಯ ಒಂದಕ್ಕೆ ಖರ್ಚು ಮಾಡಿರುವ ಹಣ ಇಷ್ಟು

ಕೆಜಿಎಫ್ ಶೂಟಿಂಗ್ ಸ್ಪಾಟ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ಸ್ಟಾರ್ ನಟನ ನಡುವೆ ವಾರ್! ಹೌದು ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಅದ್ದೂರಿ ಸಿನಿಮಾ ಕೆಜಿಎಫ್.ಕೆಜಿಎಫ್ ಚಾಪ್ಟರ್ 1ರಲ್ಲಿ ಅದ್ದೂರಿ ಮೇಕಿಂಗ್ ಮೂಲಕ ಇಡೀ ಚಿತ್ರರಂಗವನ್ನು ಬೆರಗಾಗಿಸಿತ್ತು. ಇದೀಗ ಕೆಜಿಎಫ್ ಪಾರ್ಟ್ 2ರಲ್ಲೂ ಕೂಡ ಭಾಗ ಒಂದಕ್ಕಿಂತ ಇದರಲ್ಲಿ ಬಹುಭಾಷಾ ನಟರು ಅಭಿನಯಿಸಲಿದ್ದಾರೆ. ಜೊತೆಗೆ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್ ಕೂಡ ನಟಿಸಿದ್ದಾರೆ. ಕೆಜಿಎಫ್ ಸರಣಿಯ ಕೊನೆಯ ಭಾಗವಾಗಿರುವ ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್ ನಲ್ಲಿ ರಾಕಿ ಬಾಯ್ ಮತ್ತು ಅಧೀರ ಇಬ್ಬರು ಮುಖಾಮುಖಿಯಾಗಿ ಭರ್ಜರಿಯಾಗಿ ವಾರ್ ನಡೆಸಲಿದ್ದಾರೆ.

ಈ ಕ್ಲೈಮ್ಯಾಕ್ಸ್ ಗಾಗಿ ನಿರ್ಮಾಪಕ ವಿಜಯ್ ಕಿರಂಗದೂರ್ ಹಣದ ಹೊಳೆಯನ್ನೇ ಹರಿಸಿದ್ದಾರೆ ಎನ್ನಬಹುದು. ಐಷರಾಮಿ ಕಾರುಗಳು, ಸಾವಿರಾರು ಜ್ಯುನಿಯರ್ ಆರ್ಟಿಸ್ಟ್, ಬೃಹತ್ ಸೆಟ್ ನಿರ್ಮಾಣ, ವಾಹನಗಳು ಹೀಗೆ ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿಬರಲು ನಿರ್ಮಾಪಕ ವಿಜಯ್ ಕಿರಂಗದೂರ್ ಎಲ್ಲಾ ರೀತಿಯಲ್ಲೂ ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಗೆ ದಕ್ಕೆ ಬರದಂತೆ ಸಹಕಾರ ನೀಡಿದ್ದಾರೆ. ರಾಕಿ ಬಾಯ್ ಮತ್ತು ಅಧೀರನ ಈ ಅಂತಿಮ ದೃಶ್ಯ ಸಿನಿಮಾಗಳು ರೋಚಕವಾಗಿ ಮೂಡಿಬರುತ್ತಿದೆ ಎನ್ನಲಾಗುತ್ತಿದೆ, ಈ ಒಂದು ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಬರೋಬ್ಬರಿ ಹನ್ನೆರಡು ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಜನಪ್ರಿಯವಾಗಲು ಚಿತ್ರದ ಮೇಕಿಂಗ್ ಪ್ರಮುಖ ಕಾರಣ ಎನ್ನಬಹುದಾಗಿದ್ದು ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಎಲ್ಲವು ಅಂದುಕೊಂಡಂತೆ ಆದರೆ ಇನ್ನು ಕೆಲವೇ ತಿಂಗಳಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಥಿಯೇಟರ್ ಅಂಗಳಕ್ಕೆ ಬರಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಕೆಜಿಎಫ್ ಚಿತ್ರದ ಚಿತ್ರೀಕರಣ ಮೈಸೂರಿನ ದೈತ್ಯ ಇನ್ಫೋಸಿಸ್ ಕಂಪನಿಯಲ್ಲಿ ನಡೆಸಲಾಗಿತ್ತು. ಕೆಲ ತಿಂಗಳುಗಳ ಹಿಂದೆ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು ಹಾಗೂ ಅದಾಗಲೇ ಎಪ್ಪತ್ತು ಶೇಕಡ ಚಿತ್ರೀಕರಣ ಮುಗಿದಿತ್ತು. ನಾವು ಬೇರೆ ಭಾಷೆಗಳಲ್ಲಿ ಆ ಚಿತ್ರಕ್ಕೆ ಅಷ್ಟು ಖರ್ಚು ಮಾಡಿದ್ದಾರೆ ಇಷ್ಟು ಖರ್ಚು ಮಾಡಿದ್ದಾರೆ ಅಂತ, ಆದರೆ ಈಗ ನಮ್ಮ ಕನ್ನಡ ಚಿತ್ರಗಳೇ ಎಲ್ಲಾ ಚಿತ್ರರಂಗಗಳನ್ನು ಮೀರಿಸುತ್ತಿದೆ.

%d bloggers like this: