ಕೆಜಿಎಫ್ ಚಾಪ್ಟರ್2 ದೃಶ್ಯದಲ್ಲಿ ಆಸ್ಟ್ರೇಲಿಯಾದ ಖ್ಯಾತ ಆಟಗಾರ ಡೇವಿಡ್ ವಾರ್ನರ್

ರಾಕಿಂಗ್ ಸ್ಟಾರ್ ಯಶ್ ಗೆಟಪ್ ಫಾಲೋ ಮಾಡಿದ ಆಸ್ಟ್ರೇಲಿಯಾ ತಂಡದ ಖ್ಯಾತ ಆಟಗಾರ! ಕೆಜಿಎಫ್ ಚಾಪ್ಟರ್2 ಚಿತ್ರದಲ್ಲಿ ಯಶ್ ಅವರ ಸ್ಟೈಲೀಶ್ ಲುಕ್, ಚಿತ್ರದ ಮೇಕಿಂಗ್, ಯಶ್ ಬಂದೂಕಿನ ಕಿಡಿಯಿಂದ ಸಿಗರೇಟ್ ಅಂಟಿಸಿಕೊಳ್ಳುವ ದೃಶ್ಯ ಸನ್ನಿವೇಶ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸ್ಟೈಲೀಶ್ ಲುಕ್, ಅವರ ಹೇರ್ ಸ್ಟೈಲ್ ಅನುಕರಣೆ ಮಾಡುವುದನ್ನು ನೋಡಿರುತ್ತೇವೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಖ್ಯಾತ ಆಟಗಾರರಾದ ಡೇವಿಡ್ ವಾರ್ನರ್ ಕೆಜಿಎಫ್ ಚಾಪ್ಟರ್2 ಚಿತ್ರದಲ್ಲಿ ಯಶ್ ಗೆಟಪ್ ಅಂತೆಯೇ ವಾರ್ನರ್ ಕೂಡ ರೀಫೇಸ್ ಆಪ್ ಮೂಲಕ ವೀಡಿಯೋ ಮಾಡಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜೊತೆಗೆ ನನಗೆ ಈ ವೀಡಿಯೋ ಕಳಿಸಿಕೊಟ್ಟು ಶೇರ್ ಮಾಡುವಂತೆ ಹೇಳಿದ್ದರು, ಅದರಂತೆಯೇ ನಾನು ಭರವಸೆ ಕೊಟ್ಟಿದ್ದೆ ಎಂದು ವೀಡಿಯೋ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಡೇವಿಡ್ ವಾರ್ನರ್ ಈ ಹಿಂದೆ ಭಾರತೀಯ ಚಿತ್ರರಂಗದ ಪ್ರಸಿದ್ದ ನಟರನ್ನು ಕೂಡ ರೀಫೇಸ್ ಆಪ್ ಮೂಲಕ ತಮ್ಮ ವೀಡಿಯೋ ಹಾಕಿ ಅನುಕರಣೆ ಮಾಡಿದ್ದರು. ದಕ್ಷಿಣ ಭಾರತದ ಖ್ಯಾತ ನಟರಾದ ಸೂಪರ್ ಸ್ಟಾರ್ ರಜಿನಿಕಾಂತ್, ಪ್ರಭಾಸ್ ಅವರ ಬಾಹುಬಲಿ ಲುಕ್ ಅನುಕರಣೆ ಮಾಡಿದ್ದರು. ಅದೆ ರೀತಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಹೃತಿಕ್ ರೋಷನ್ ಅವರನ್ನು ಸಹ ಕಾಪಿಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಜನಪ್ರಿಯರಾಗಿದ್ದರು.

ಇದೀಗ ಕೆಜಿಎಫ್ ಚಾಪ್ಟರ್2 ಚಿತ್ರದ ಟೀಸರ್ ಅಲ್ಲಿ ಯಶ್ ಅವರು ಬಂದೂಕಿನ ಕಿಡಿಯಲ್ಲಿ ಸಿಗರೇಟ್ ಹತ್ತಿಸಿಕೊಳ್ಳುವ ದೃಶ್ಯದಂತೆ ತಾವು ಕೂಡ ರೀಫೇಸ್ ಆಪ್ ನಲ್ಲಿ ವೀಡಿಯೋ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಟೀಸರ್ ವಿಚಾರವಾಗಿ ಕೆಜಿಎಫ್ ಚಿತ್ರತಂಡಕ್ಕೆ ಮತ್ತು ನಾಯಕ ನಟ ಯಶ್ ಅವರಿಗೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಕೂಡ ನೀಡಿ, ಪೋಸ್ಟರ್ ಮತ್ತು ಟೀಸರ್ ಅಲ್ಲಿ ಸಿಗರೇಟ್ ಸೇದುವುದನ್ನು ಪ್ರಚೋದಿಸುವುದು ತಂಬಾಕು ಉತ್ಪನ್ನಗಳ ಕಾಯ್ದೆಯ ಉಲ್ಲಂಘನೆಯಲ್ಲವೆ ಎಂದು ಚಿತ್ರತಂಡಕ್ಕೆ ಪ್ರಶ್ನೆ ಹಾಕಿತ್ತು. ಡೇವಿಡ್ ವಾರ್ನರ್ ಅವರ ಇನ್ಸ್ಟಾಗ್ರಾಮ್ ಅಲ್ಲಿ ನೀವು ಈ ಕೆಜಿಎಫ್ ಹಾಸ್ಯ ವಿಡಿಯೋ ನೋಡಬಹುದು.

%d bloggers like this: