ಕೆಜಿಎಫ್ ಚಾಪ್ಟರ್2 ಗೆ ಸೆಡ್ಡು ಹೊಡೆಯಲು ಬರುತ್ತಿದೆ ತಮಿಳು ದೊಡ್ಡ ನಟನ ಚಿತ್ರ, ರಾಕಿಭಾಯ್ ಬಿರುಗಾಳಿ ಮುಂದೆ ಯಾರೂ ನಿಲ್ಲಲ್ಲ ಅಂದ ಅಭಿಮಾನಿಗಳು

ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಇದೀಗ ಸ್ಟಾರ್ ನಟರ ಸಿನಿಮಾಗಳ ರಿಲೀಸ್ ದಿನಾಂಕದ ವಿಷಯದಲ್ಲಿ ಸ್ಪರ್ಧೆ ಶುರುವಾಗಿದೆ. ಕೇವಲ ರಿಲೀಸ್ ದಿನಾಂಕದ ಬಗ್ಗೆ ಅಷ್ಟೇ ಅಲ್ಲದೆ, ಯಾವ ಸ್ಟಾರ್ ನಟರ ಸಿನಿಮಾ ಬಾಕ್ಸಾಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂಬ ವಿಷಯದ ಚರ್ಚೆ ಸದ್ಯಕ್ಕೆ ಭಾರತದ ಸಿನಿರಂಗದಲ್ಲಿ ಜೋರಾಗಿದೆ. ತೆಲುಗು ಇಂಡಸ್ಟ್ರಿಯ, ರಾಜಾಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ತ್ರಿಬಲ್ ಆರ್ ಇದೇ ಮಾರ್ಚ್ 25ರಂದು ರಿಲೀಸ್ ಆಗಲಿದೆ. ನಮ್ಮ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಕೆಜಿಎಫ್2 ಚಿತ್ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಆದರೆ ಈ ಹಿಂದೆ ವಿಜಯ್ ನಟನೆಯ ಬೀಸ್ಟ್ ಚಿತ್ರ ಕೂಡ ಏಪ್ರಿಲ್ 14ರಂದು ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾಗಿತ್ತು.

ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರ ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುವುದರಿಂದ ಕಲೆಕ್ಷನ್ ನಲ್ಲಿ ಕ್ಲಾಶ್ ಏರ್ಪಡುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಕೆಜಿಎಫ್ 2 ಚಿತ್ರ ಭಾರತದಾದ್ಯಂತ ಹುಟ್ಟುಹಾಕಿರುವ ಕ್ರೇಜ್ ನೋಡಿದರೆ ಕೆಜಿಎಫ್2 ಚಿತ್ರ ಯಶಸ್ವಿ ಪ್ರದರ್ಶನ ಕಾಣುವಲ್ಲಿ ಅನುಮಾನವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟರೆ, ತಮಿಳಿನ ಖ್ಯಾತ ನಟ ವಿಜಯ್ ಅವರ ಬೀಸ್ಟ್ ಚಿತ್ರವು ಕೂಡ ಸುದ್ದಿಯಲ್ಲಿದೆ. ಹೀಗಾಗಿ ಯಾವ ಚಿತ್ರ ಅತಿ ಹೆಚ್ಚು ಗಳಿಕೆ ಮಾಡಬಲ್ಲದು ಎಂದು ಚರ್ಚೆ ನಡೆಯುತ್ತಿದೆ. ಆದರೆ ಇದೀಗ ಬೀಸ್ಟ್ ಸಿನಿಮಾದಿಂದ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ. ಅದೇನೆಂದರೆ ಏಪ್ರಿಲ್ 14 ರಂದು ರಿಲೀಸ್ ಮಾಡುವುದಾಗಿ ಹೇಳಿಕೊಂಡಿದ್ದ ಬೀಸ್ಟ್ ಚಿತ್ರತಂಡ ಇದೀಗ ಒಂದು ದಿನ ಮೊದಲು ಅಂದರೆ ಏಪ್ರಿಲ್ 13ರಂದು ರಿಲೀಸ್ ಮಾಡುವುದಾಗಿ ಘೋಷಿಸಿದೆ.

ಇದರ ಬಗ್ಗೆ ಬೀಸ್ಟ್ ನಿರ್ಮಾಣ ಸಂಸ್ಥೆ ಸನ್ ಪಿಚ್ಚರ್ಸ್ ಟ್ವೀಟ್ ಮಾಡಿಕೊಂಡಿದ್ದು ಹೊಸ ಪೋಸ್ಟರ್ ಮೂಲಕ ಪೋಸ್ಟರ್ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಪೂಜಾ ಹೆಗಡೆ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿದ್ದು ಹಿಟ್ ಆಗಿವೆ. ಬಿಡುಗಡೆಯಾದ ಹೊಸ ಪೋಸ್ಟರ್ನಲ್ಲಿ ವಿಜಯ್ ಗನ್ ಹಿಡಿದು ಮಾಸ್ ಅವತಾರದಲ್ಲಿ ನಿಂತಿದ್ದಾರೆ. ಬೀಸ್ಟ್ ಚಿತ್ರದ ಹೊಸ ರಿಲೀಸ್ ದಿನಾಂಕ ಘೋಷಣೆಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಚರ್ಚೆ ಜೋರಾಗಿದೆ. ಅದೇನೆಂದರೆ ಭಾರತದಾದ್ಯಂತ ಕೆಜಿಎಫ್ ಚಿತ್ರ ಮೆಚ್ಚುಗೆ ಪಡೆದಿದೆ.

ಕೆಜಿಎಫ್ ಭಾಗ2 ಗಾಗಿ ಬಹುದಿನಗಳಿಂದ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಬೀಸ್ಟ್ ಎದುರಿನ ಬಾಕ್ಸಾಫೀಸ್ ಗಳಿಕೆಯಲ್ಲಿ ಕೆಜಿಎಫ್2 ಚಿತ್ರ ಜಯಭೇರಿ ಬಾರಿಸಲಿದೆ ಎಂದು ಹಲವಾರು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದಷ್ಟೇ ಅಲ್ಲದೆ ಇದೇ ಸೋಮವಾರ ರಿಲೀಸ್ ಆಗಿದ್ದ ಕೆಜಿಎಫ್2 ಚಿತ್ರದ ಲಿರಿಕಲ್ ಹಾಡು ತೂಫಾನ್ ಎಲ್ಲ ಭಾಷೆಗಳಲ್ಲೂ ಧೂಳೆಬ್ಬಿಸಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಜಿಎಫ್2 ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುವುದರಿಂದ ತಮಿಳುನಾಡಿನಲ್ಲಿ ಬೀಸ್ಟ್ ಹಾಗೂ ಕೆಜಿಎಫ್2 ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಕ್ಲಾಶ್ ಏರ್ಪಡಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಸ್ಪರ್ಧೆಯಲ್ಲಿ ಕೆಜಿಎಫ್2 ಚಿತ್ರವೇ ಜಯಭೇರಿ ಬಾರಿಸಲಿದೆ ಎಂಬುದು ಹಲವಾರು ಅಭಿಮಾನಿಗಳ ಅನಿಸಿಕೆ.

%d bloggers like this: