ಕೆಜಿಎಫ್ ಚಾಪ್ಟರ್2 ಜೊತೆ ತೆರೆಗೆ ಬರಲಿದ್ದಾನೆ ದಕ್ಷಿಣ ಭಾರತದ ಮತ್ತೊಬ್ಬ ಸ್ಟಾರ್ ನಟ, ಬಾಕ್ಸ್ ಆಫೀಸ್ ಅಲ್ಲಿ ಭಾರಿ ಪೈಪೋಟಿ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಈಗಾಗಲೇ ದಕ್ಷಿಣ ಭಾರತದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಇದಾದ ಮುಂದುವರಿದ ಸರಣಿಯಾಗಿ ಕೆಜಿಎಫ್ ಚಾಪ್ಟರ್2 ಚಿತ್ರದ ಟೀಸರ್ ಟ್ರೆಲರ್ ಅಂತೂ ವಿಶ್ವದ ಚಿತ್ರರಂಗವೇ ಬೆಚ್ಚಿ ಬೀಳುವಂತೆ ದಾಖಲೆ ಮಟ್ಟದ ವೀಕ್ಷಣೆ ಪಡೆದಿತ್ತು. ಇದು ಕೆಜಿಎಫ್ ಚಾಪ್ಟರ್2 ಚಿತ್ರದ ಬಗ್ಗೆ ಜಗತ್ತಿನಾದ್ಯಂತ ಅಪಾರ ನಿರೀಕ್ಷೆ ಹುಟ್ಟು ಹಾಕುವಂತೆ ಮಾಡಿದೆ. ಕೆಜಿಎಫ್ ಚಾಪ್ಟರ್2 ಸಿನಿಮಾ ನೋಡಲು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು, ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಚಾಪ್ಟರ್2 ಚಿತ್ರ ಇದೇ 2022ರ ಏಪ್ರಿಲ್ 14ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇದು ಸಂತಸದ ವಿಚಾರ. ಆದರೆ ಅದೇ ದಿನ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಕೂಡ ‌ರಿಲೀಸ್ ಆಗುತ್ತಿದೆ. ಇದಕ್ಕೂ ಮೊದಲು ಈ ಲಾಲ್ ಸಿಂಗ್ ಛಡ್ಡಾ ಸಿನಿಮಾ 2022ರ ಫೆಬ್ರವರಿ 14ರಂದು ರಿಲೀಸ್ ಆಗಲಿದೆ ಎಂದು ತಿಳಿಸಿತ್ತು ಚಿತ್ರತಂಡ. ಆದರೆ ಇದಾದ ಬಳಿಕ ಲಾಲ್ ಸಿಂಗ ಛಡ್ಡಾ ಚಿತ್ರದ ರಿಲೀಸಿಂಗ್ ಡೇಟ್ ಅನ್ನು ಪೋಸ್ಟ್ ಪೋನ್ ಮಾಡಲಾಯಿತು. ಇದು ಉದ್ದೇಶಪೂರ್ವಕವಾಗಿಯೇ ದಕ್ಷಿಣ ಭಾರತದ ಸಿನಿಮಾಗಳನ್ನ ತುಳಿಯುವುದಕ್ಕೆ ಈ ರೀತಿ ಮಾಡಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಅಷ್ಟೇ ಅಲ್ಲದೆ ಕನ್ನಡಿಗರು ಇದನ್ನ ವ್ಯಾಪಕವಾಗಿ ವಿರೋಧ ಮಾಡಿ ಜೊತೆಗೆ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಟ್ರೋಲ್ ಪೇಜಸ್ ಗಳು ಭಾರಿ ಟ್ರೋಲ್ ಕೂಡ ಮಾಡಿದವು.

ಲಾಲ್ ಸಿಂಗ್ ಛಡ್ಡಾ ಚಿತ್ರ ಏಪ್ರಿಲ್ 14ರಂದು ರಿಲೀಸ್ ಆಗುವುದರಿಂದ ಕೆಜಿಎಫ್2 ಚಿತ್ರಕ್ಕೆ ಉತ್ತರ ಭಾರತದ ಕಡೆ ಕೊಂಚ ಪೆಟ್ಟು ಬೀಳುವುದು ಸಹಜ. ಏಕೆಂದರೆ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಸಿನಿಮಾ ಅಂದರೆ ಉತ್ತರ ಭಾರತದ ಬಹುತೇಕ ಚಿತ್ರಮಂದಿರಗಳು ಅಮೀರ್ ಖಾನ್ ಅವರ ಚಿತ್ರವನ್ನೇ ಫುಲ್ ಫಿಲ್ ಮಾಡುತ್ತಾರೆ. ಇದರಿಂದ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿರುವ ಬಹುಕೋಟಿ ವೆಚ್ಚದ ಕೆಜಿಎಫ್ ಚಾಪ್ಟರ್2 ಚಿತ್ರಕ್ಕೆ ಕಲೆಕ್ಷನ್ ನಲ್ಲಿ ಹೊಡೆತ ಬಿದ್ದೇ ಬೀಳುತ್ತದೆ. ಇದು ಬಾಲಿವುಡ್ ನವರ ಅಡ್ಡಿಯಾದರೆ, ಇದೀಗ ಕನ್ನಡದ ಕೆಜಿಎಫ್2 ಚಿತ್ರಕ್ಕೆ ಪಕ್ಕದ ಕಾಲಿವುಡ್ ಸ್ಟಾರ್ ಇಳಯ ದಳಪತಿ ವಿಜಯ್ ಸಿನಿಮಾವೊಂದು ಕೂಡ ಏಪ್ರಿಲ್ 14 ರಂದೇ ರಿಲೀಸ್ ಆಗುತ್ತದೆ ಎಂಬ ಮಾತು ಕೇಳಿ ಬಂದಿದೆ.

ಹೌದು ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಮಾಡಿದೆ. ಇದರ ಜೊತೆಗೆ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನಿಮಾ ಕೂಡ ಅಂದೇ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್2 ಸಿನಿಮಾಗೆ ಬಾಲಿವುಡ್ ಸ್ಟಾರ್ ನಟನ ಸಿನಿಮಾ ಮಾತ್ರ ಅಲ್ಲ ಟಾಲಿವುಡ್ ಮತ್ತು ಕಾಲಿವುಡ್ ಸ್ಟಾರ್ ನಟರ ಸಿನಿಮಾಗಳು ಕೂಡ ಪೈಪೋಟಿ ನೀಡಲು ಸಿದ್ದವಾಗಿವೆ.

%d bloggers like this: