ಕೆಜಿಎಫ್ ಚಾಪ್ಟರ್2 ಸಂಭಾವನೆಯಲ್ಲಿ ದಕ್ಷಿಣ ಭಾರತದ ಯಾವ ನಟರಿಗೂ ಕಮ್ಮಿ ಇಲ್ಲ ರಾಕಿ ಭಾಯ್

ಇಡೀ ವಿಶ್ವದ ಚಿತ್ರರಂಗವೇ ಅಪಾರ ನಿರೀಕ್ಷೆ ಕಾಯುತ್ತಿರುವ ಕೆಜಿಎಫ್ ಚಾಪ್ಟರ್2 ಸಿನಿಮಾ ಥಿಯೇಟರ್ ಅಂಗಳಕ್ಕೆ ಬರಲು ಬೆಳ್ಳಿ ತೆರೆಗೆ ಅಪ್ಪಳಿಸಲು ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಇತ್ತೀಚೇಗೆ ತಾನೇ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಪ್ರಯುಕ್ತ ಕೆಜಿಎಫ್2 ಸಿನಿಮಾದಲ್ಲಿ ಯಶ್ ಕಾಣಿಸಿಕೊಂಡಿರುವ ಪೋಸ್ಟರ್ ವೊಂದನ್ನ ಬಿಡುಗಡೆ ಮಾಡಿತ್ತು. ಪೋಸ್ಟರ್ ಅಲ್ಲಿರುವ ರಾಕಿಬಾಯ್ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದರು. ಭಾರತೀಯ ಚಿತ್ರರಂಗ ಮಾತ್ರ ಅಲ್ಲದೆ ವಿಶ್ವದ ನಾನಾ ದೇಶಗಳಿಂದ ರಾಕಿಬಾಯ್ ಯಶ್ ಗೆ ಹುಟ್ಟು ಹಬ್ಬದ ವಿಶ್ ಮಾಡಿ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಶುಭ ಹಾರೈಸಿದ್ದರು. ಕೆಜಿಎಫ್ ಪಾರ್ಟ್ ಒನ್ ಕ್ಕಿಂತ ಭಾಗ2ಗೆ ಅತಿ ಹೆಚ್ಚು ಹೈಪ್ ಸಿಗಲು ಪ್ರಮುಖ ಕಾರಣ ಅಂದರೆ ಚಿತ್ರದ ಮೇಕಿಂಗ್.

ಕಳೆದ ವರ್ಷ ಬಿಡುಗಡೆಯಾದ ಟೀಸರ್ ಇಡೀ ವಿಶ್ವದ ಚಿತ್ರರಂಗದಲ್ಲಿ ಇದ್ದಂತಹ ಎಲ್ಲಾ ದಾಖಲೆಗಳನ್ನ ಧೂಳಿಪಟ ಮಾಡಿತು ಈ ಕೆಜಿಎಫ್ ಚಾಪ್ಟರ್2 ಚಿತ್ರದ ಟೀಸರ್. ಜೊತೆಗೆ ಈ ಪಾರ್ಟ್2 ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ರವೀನಾ ಟಂಡನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ ರಿಲೀಸ್ ಆದ ಒಂದೇ ದಿನದಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆದು ದಾಖಲೆ ನಿರ್ಮಾಣ ಮಾಡಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಗೂಗಲ್ ಅಲ್ಲಿ ಭಾರಿ ಪ್ರಮಾಣದ ಹುಡುಕಾಟ ಕೂಡ ನಡೆಸಲಾಗಿತ್ತು.

ಕೆಜಿಎಫ್ ಚಾಪ್ಟರ್2 ಸಿನಿಮಾ ಬಿಡುಗಡೆಗೆ ಮೊದಲು ಸಾಕಷ್ಟು ದಾಖಲೆ ಸುದ್ದಿಗಳನ್ನ ಮಾಡುವುದರ ಜೊತೆಗೆ ಚಿತ್ರತಂಡ ಹೊಸ ಹೊಸ ಅಪ್ಡೇಟ್ಸ್ ಗಳನ್ನ ನೀಡುತ್ತಲೇ ಬರುತ್ತಿತ್ತು. ಇದೀಗ ಕೆಜಿಎಫ್2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಂಭಾವನೆಯ ವಿಚಾರ ಸ್ಯಾಂಡಲ್ ವುಡ್ ಗಲ್ಲಿ ಗಲ್ಲಿಯಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಹೌದು ಕೆಜಿಎಫ್ ಚಿತ್ರದ ಅಭೂತಪೂರ್ವ ಯಶಸ್ಸು ಯಶ್ ಅವರನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತ್ತು.

ಹಾಗಾಗಿ ಸಹಜವಾಗಿಯೇ ಇಂದು ರಾಕಿಂಗ್ ಸ್ಟಾರ್ ಯಶ್ ನ್ಯಾಶನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದೇಶಾದ್ಯಂತ ಅಪಾರ ಜನಪ್ರಿಯತೆ ಹೊಂದಿರುವ ನಟ ಯಶ್ ಅವರ ಸಂಭಾವನೆ ಮೂರು ಪಟ್ಟು ಹೆಚ್ಚಾಗಿದೆಯಂತೆ. ಬಲ್ಲ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಯಶ್ ಅವರು ಕೆಜಿಎಫ್ ಚಾಪ್ಟರ್2 ಚಿತ್ರದಲ್ಲಿ ನಟಿಸಲು ಬರೋಬ್ಬರಿ 27 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇತ್ತ ಅಧೀರ ಪಾತ್ರದಲ್ಲಿ ಘರ್ಜಿಸಿರುವ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಹತ್ತು ಕೋಟಿ ಸಂಭಾವನೆ ಪಡೆದಿದ್ದಾರಂತೆ. ಸದ್ಯಕ್ಕೆ ಈ ವಿಚಾರ ಸ್ಯಾಂಡಲ್ ವುಡ್ ಗಲ್ಲಿ ಗಲ್ಲಿಯಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಒಟ್ಟಾರೆಯಾಗಿ ಇದೇ ಏಪ್ರಿಲ್ 14ರಂದು ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್2 ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ.

%d bloggers like this: