ನಮ್ಮ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್2 ಚಿತ್ರವನ್ನು ಕೇವಲ ಅಭಿಮಾನಿಗಳಷ್ಟೇ ಅಲ್ಲದೆ ಚಿತ್ರರಂಗದ ನಟ-ನಟಿಯರು ಕೂಡ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಎಲ್ಲಾ ನಟನಟಿಯರಿಗೂ ತಮ್ಮದೇ ಆದ ಒಂದು ಕನಸಿನ ಪಾತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಇರುತ್ತದೆ. ಆದರೆ ನಟ ನಟಿಯರು ಆಸೆ ಪಡುವಂತೆ ಚಿತ್ರದ ಕಥೆ, ಮೇಕಿಂಗ್ ಎಲ್ಲವೂ ಹೊಂದಾಣಿಕೆಯಾಗಬೇಕು. ಕಂಡ ಕನಸು ನನಸಾಗುವುದು ಅಷ್ಟು ಸುಲಭದ ಮಾತೇನಲ್ಲ. ಇದನ್ನು ಸ್ವತಹ ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಎಲ್ಲರಿಗೂ ಒಂದು ಕನಸಿನ ಪಾತ್ರ ಇದ್ದೇ ಇರುತ್ತದೆ. ನನಗೂ ಕೂಡ ನಾನು ಇಂತಹ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇತ್ತು.

ನನ್ನ ಕನಸಿಗೆ ರೆಕ್ಕೆ ಕಟ್ಟಿ ಬಣ್ಣ ಹಚ್ಚಿದ್ದು ಪ್ರಶಾಂತ್ ನೀಲ್ ಹಾಗೂ ಕೆಜಿಎಫ್ ಚಿತ್ರತಂಡ. ಇವರಿಗೆ ನಾನು ಎಷ್ಟು ಧನ್ಯವಾದ ತಿಳಿಸಿದರು ಕಡಿಮೆ.ಇದು ಕೇವಲ ನನ್ನ ಚಿತ್ರವಲ್ಲ. ಈ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಈ ಚಿತ್ರ ಸಮರ್ಪಣೆ ಎಂದು ತಿಳಿಸಿದ್ದರು. ಈ ಹಿಂದೆ ಕೆಜಿಎಫ್ ಚಾಪ್ಟರ್1 ಚಿತ್ರನೋಡಿದ ಹಲವಾರು ನಟ ನಟಿಯರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಅವರು ಸಹ ಅಭಿಮಾನಿಗಳಂತೆ ಕೆಜಿಎಫ್ ಚಾಪ್ಟರ್2 ಚಿತ್ರಕ್ಕಾಗಿ ಕಾಯುತ್ತಿದ್ದರು. ಇತ್ತೀಚೆಗೆ ಕೆಜಿಎಫ್2 ಚಿತ್ರದ ಟ್ರೈಲರ್ ಬಿಡುಗಡೆ ಯಾಗಿದೆ. ಮೊದಲೇ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದ್ದ ಈ ಸಿನಿಮಾವನ್ನು ನೋಡಿದ ಹಲವಾರು ನಟ ನಟಿಯರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೈಲರ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಕೆಜಿಎಫ್2 ಚಿತ್ರದ ಟ್ರೈಲರ್ ಅನ್ನು ನಮ್ಮ ಕರ್ನಾಟಕದ ರಶ್ಮಿಕಾ ಮಂದಣ್ಣ ಅವರು ಕೂಡ ಮೆಚ್ಚಿಕೊಂಡಿದ್ದಾರೆ. ಹೌದು ಕೆಜಿಎಫ್ ಚಾಪ್ಟರ್ ಟು ಸಿನಿಮಾದ ಟ್ರೈಲರ್ ವೀಕ್ಷಿಸಿದ ರಶ್ಮಿಕಾ ಮಂದಣ್ಣ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ಕೆಜಿಎಫ್ ಚಿತ್ರದ ಬಗ್ಗೆ ಹೇಳುವುದೇನಿಲ್ಲ. ನನಗೆ ತುಂಬಾ ಇಷ್ಟ ಆಯ್ತು. ನೋಡಿದವರಿಗೆ ಹುಚ್ಚು ಹಿಡಿಸುವಂತಹ ಚಿತ್ರವಿದು. ಮ್ಯಾಡನೆಸ್, ಐ ಲವ್ಡ್ ಇಟ್ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅವರು ಮಾಡಿರುವ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಿದೆ.