ಕೆಜಿಎಫ್ ಚಿತ್ರಕ್ಕೆ ಆರುಮುಗಮ್ ರವಿಶಂಕರ್

ಕನ್ನಡದ ಗೋಲ್ಡನ್ ಸಿನಿಮಾ ಅಂತಾನೇ ಗುರುತಿಸಿಕೊಂಡ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನೇ ಬದಲಾಯಿಸಿ ಇಡೀ ಭಾರತೀಯ ಚಿತ್ರರಂಗ ದಕ್ಷಿಣ ಭಾರತದತ್ತ ತಿರುಗುವಂತೆ ಮಾಡಿತ್ತು. ಅದರಲ್ಲೂ ಕನ್ನಡ ಚಿತ್ರರಂಗದ ಗರಿಮೆ ಉತ್ತರ ಭಾರತದ ಉದ್ದಗಲಕ್ಕೂ ಪಸರಿಸಿತು. ಅಂದಹಾಗೆ ಎರಡು ವರ್ಷಗಳ ಹಿಂದೆ ಬಿಡುಗಡೆಗೊಂಡ ಈ ಚಿತ್ರ ರಾಕಿಂಗ್ ಸ್ಟಾರ್ ಯಶ್ ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಮತ್ತು ಬಿ.ಸುರೇಶ ಮಾಳವಿಕ ಅವಿನಾಶ್ ಅವರ ಮುಖ್ಯಭೂಮಿಕೆಯಲ್ಲಿ ತೆರೆಕಂಡ ಈ ಚಿತ್ರ ಬಾಕ್ಸ್ ಅಫೀಸ್ ಅನ್ನು ಧೂಳಿಪಟ ಮಾಡಿತ್ತು.

ಇದೀಗ ಕೆಜಿಎಫ್ ಚಿತ್ರದ ಮುಂದುವರಿದ ಭಾಗ ಪಾರ್ಟ್2 ಆಗಿ ಬರುತ್ತಿದ್ದು ಚಿತ್ರ ದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದು ಚಿತ್ರಕ್ಕೆ ಮತ್ತಷ್ಟು ಮೈಲೇಜ್ ಬಂದಿತ್ತು ಅಷ್ಟೇ ಗಮನ ಸೆಳೆದಿತ್ತು. ಸಂಜಯ ದತ್ ಅವರು ಕೆಜಿಎಫ್ ಚಿತ್ರದಲ್ಲಿ ಅಧಿರ ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಇದೀಗ ಕೆಜಿಎಫ್ ಚಿತ್ರತಂಡ ಮತ್ತೊಂದು ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದೆ. ಅದು ಕೆಜಿಎಫ್ ಸಿನಿಮಾಗೆ ಕೆಂಪೇಗೌಡ ಆರ್ಮುಗಂ ಖ್ಯಾತಿಯ ರವಿಶಂಕರ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಧ್ವನಿ ಮತ್ತು ವಿಶಿಷ್ಟ ಅಭಿನಯದಿಂದ ಮೆಚ್ಚುಗೆ ಪಡೆದಿರುವ ರವಿಶಂಕರ್ ಅವರು ಕೆಜಿಎಫ್ ಚಿತ್ರದ ಪಾತ್ರವೊಂದಕ್ಕೆ ಕಂಠದಾನ ಕಲಾವಿದರಾಗಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ.

ಹೌದು ಕೆಜಿಎಫ್ ಚಿತ್ರ ಭಾರತದಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಗೊಳ್ಳುತ್ತಿರುವುದಿರಂದ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಯ ಅವತರಣೆಕೆಯಲ್ಲಿ ಬಿಡುಗಡೆ ಗೊಳ್ಳುತ್ತಿದೆ. ಆಯಾ ಭಾಷೆಯ ಡಬ್ಬಿಂಗ್ ಅನ್ನು ವಿವಿಧ ಖಳನಟರು ಅಧೀರ ಪಾತ್ರಧಾರಿ ಯಾಗಿರುವ ಸಂಜಯ್ ದತ್ ಅವರಿಗೆ ಧ್ವನಿಯಾಗಲಿದ್ದಾರೆ. ಹಿಂದಿಯಲ್ಲಿ ಸ್ವತಃ ಸಂಜಯ್ ದತ್ ಅವರೇ ಧ್ವನಿ ನೀಡಲಿದ್ದಾರೆ. ಆದರೆ ತೆಲುಗಿನಲ್ಲಿ ರವಿಶಂಕರ್ ಅಧೀರ ಪಾತ್ರಕ್ಕೆ ಧ್ವನಿಯಾಗಲಿದ್ದಾರೆ. ಇನ್ನು ಕನ್ನಡದ ಕೆಜೆಎಫ್ ಸಿನಿಮಾದಲ್ಲಿ ಅಧೀರ ಪಾತ್ರ ನಿರ್ವಹಿಸಿರುವ ಸಂಜಯ್ ದತ್ ಅವರಿಗೆ ಭಜರಂಗಿ ಚಿತ್ರ ಖ್ಯಾತಿಯ ಮಧು ಗುರುಸ್ವಾಮಿ ಅವರು ಧ್ವನಿಯಾಗಲಿದ್ದಾರೆ ಎಂದು ಚಿತ್ರತಂಡ ಮೂಲಗಳು ತಿಳಿಸಿವೆ.

%d bloggers like this: