ಕೆಜಿಎಫ್ ಚಾಪ್ಟರ್2 ಎದುರು ಬಿಡುಗಡೆಗೆ‌ ಸಜ್ಜಾಗಿವೆ ಬಿಗ್ ಬಜೆಟ್ ಚಿತ್ರಗಳು

ಕೋವಿಡ್ ಹಾವಳಿಯಿಂದ ಸರ್ಕಾರವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಥಿಯೇಟರ್ ಗಳಿಗೆ 100% ಪರ್ಮಿಷನ್ ನೀಡಿಲ್ಲ. 100% ಅವಕಾಶ ನೀಡದ ಹೊರತು, ಸಿನಿಮಾಗಳು ನೀರಿಕ್ಷೆಯಂತೆ ಕಲೆಕ್ಷನ್ ಮಾಡುವುದಿಲ್ಲ. ಇವೆಲ್ಲ ಆತಂಕಗಳಿಂದ ಹಲವು ತಿಂಗಳುಗಳಿಂದ ಹಲವಾರು ಬಿಗ್ ಬಜೆಟ್ ಚಿತ್ರಗಳು, 100% ಪರ್ಮಿಷನ್ ಗಾಗಿ ಕಾಯುತ್ತಿವೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದರೂ ಕೂಡ, ರಿಲೀಸ್ ಮಾಡಲು ಬಯಸುತ್ತಿಲ್ಲ. ಸಣ್ಣ ಸಣ್ಣ ಸಿನಿಮಾಗಳಾದರೆ 50-50 ಅವಕಾಶ ಇದ್ದರೂ ರಿಲೀಸ್ ಮಾಡುತ್ತಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಸಿನಿಮಾಗಳು 100 ಪರ್ಸೆಂಟ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಸದ್ಯಕ್ಕೆ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ ರಿಲೀಸ್ ಗಾಗಿ ಮೊದಲ ಸಾಲಿನಲ್ಲಿ ಕಾಯುತ್ತಾ ಕುಳಿತಿರುವುದು ತ್ರಿಬಲ್ ಆರ್ ಸಿನಿಮಾ. ಕೊರೋಣ ಹಾವಳಿ ಇಲ್ಲದಿದ್ದರೆ ಇದೇ ತಿಂಗಳು ಏಳನೇ ತಾರೀಕು ರಿಲೀಸ್ ಆಗಿ ಇಷ್ಟೊತ್ತಿಗೆ ಹಲವು ದಾಖಲೆಗಳನ್ನು ತನ್ನೊಳಗೆ ಸೇರಿಸಿಕೊಳ್ಳಬೇಕಿತ್ತು. ಆದರೆ, ಥಿಯೇಟರ್ ಗಳಿಗೆ ಸಂಪೂರ್ಣ ಅವಕಾಶ ನೀಡದ ಕಾರಣ ಈ ತಿಂಗಳು ತ್ರಿಬಲ್ ಆರ್ ರಿಲೀಸ್ ಮಾಡುವ ಪ್ಲಾನ್ ನಿಂತುಹೋಯಿತು. ಸದ್ಯಕ್ಕೆ ಈ ಸಿನೆಮಾವನ್ನು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ರಿಲೀಸ್ ಮಾಡಲು ಈ ಚಿತ್ರತಂಡ ಕಾದುಕುಳಿತಿದೆ. ಆದರೆ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಮತ್ತು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕೆಜಿಎಫ್ 2, ಏಪ್ರಿಲ್ 14 ರಂದು ರಿಲೀಸ್ ಮಾಡುವುದಾಗಿ ಮೊದಲೇ ಹೇಳಿಕೊಂಡಿದೆ.

ಏಪ್ರಿಲ್ 14 ರಂದು ರಿಲೀಸ್ ಮಾಡುವುದಾಗಿ ಎಲ್ಲ ಸಿನಿಮಾಗಳಿಗಿಂತ ಮೊದಲೇ ಹೇಳಿದ್ದು ಕೆಜಿಎಫ್ 2. ಆದರೂ ಬೇರೆ ಭಾಷೆಯ ಸ್ಟಾರ್ ನಟರ ಸಿನಿಮಾಗಳು ಅದೇ ತಿಂಗಳಿನಲ್ಲಿ ಅದೇ ದಿನ ಮತ್ತು ಅದೇ ದಿನದ ಆಸುಪಾಸಿನಲ್ಲಿ ರಿಲೀಸ್ ಮಾಡಲು ಹವಣಿಸುತ್ತಿವೆ.
ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳು ಸ್ಯಾಂಡಲ್ವುಡ್ ಮೇಲೆ ದಾಳಿ ನಡೆಸಲು ಸಿದ್ಧವಾಗಿವೆ ಎಂಬಂತೆ ತೋರುತ್ತಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿ ಇಡೀ ಭಾರತದಲ್ಲಿಯೇ ಬಾರಿ ಮಾರ್ಕೆಟ್ ಕ್ರಿಯೇಟ್ ಮಾಡಿಕೊಂಡಿದ್ದ ಯಶ್ ಅವರಿಗೆ ಇದೀಗ ಎಲ್ಲ ಭಾಷೆಯ ಸ್ಟಾರ್ ನಟರು ಕಾಂಪಿಟೇಷನ್ ಕೊಡಲು ನೋಡುತ್ತಿದ್ದಾರೆ. ಎಲ್ಲರೂ ಏಪ್ರಿಲ್ 14 ರಂದು ತಮ್ಮ ಚಿತ್ರಗಳನ್ನು ರಿಲೀಸ್ ಮಾಡಲು ಕಾದು ಕುಳಿತಿರುವುದು ನೋಡಿದರೆ ಇದು ಗೊತ್ತಾಗುತ್ತಿದೆ.

ಬಾಲಿವುಡ್ ನ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡ, ಈ ಮೊದಲು ಏಪ್ರಿಲ್ ನಲ್ಲಿ ರಿಲೀಸ್ ಮಾಡಲ್ಲ ಎಂದು ಹೇಳಿತ್ತು. ಆದರೆ ಈಗ ಏಪ್ರಿಲ್ 14 ರಂದು ರಿಲೀಸ್ ಮಾಡುವುದಾಗಿ ಹೇಳುತ್ತಿದೆ. ಕಾಲಿವುಡ್ ನ ಸೂಪರ್ ಸ್ಟಾರ್ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಕೂಡ ಏಪ್ರಿಲ್ 14 ರಂದು ರಿಲೀಸ್ ಆಗಲು ರೆಡಿ ಆಗುತ್ತಿದೆ ಎನ್ನಲಾಗಿದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ, ಏಪ್ರಿಲ್ 14 ಫಿಕ್ಸ್ ಎಂದು ಕೇಳಿ ಬರುತ್ತಿದೆ. ಇಷ್ಟೆಲ್ಲಾ ಸ್ಟಾರ್ ನಟರ ಸಿನಿಮಾಗಳು ಏಪ್ರಿಲ್ 14 ರಂದು ರಿಲೀಸ್ ಆಗುತ್ತಿವೆ. ಯಾವ ನಟರ ಸಿನಿಮಾಗಳು ಮೇಲೇರಲಿವೆ, ಯಾವ ನಟರ ಸಿನಿಮಾಗಳು ಕೆಳಕ್ಕುರುಳಲಿವೆ ಎಂಬುದನ್ನು ಕಾದುನೋಡಬೇಕು.

%d bloggers like this: