ಕೆಜಿಎಫ್ ಎಂಬ ಒಂದು ಸಿನಿಮಾ ಸೃಷ್ಟಿಸಿದ ಹವಾ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಡೀ ದೇಶವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿತ್ತು ನಮ್ಮ ಹೆಮ್ಮೆಯ ಕೆಜಿಎಫ್ ಚಿತ್ರ. ಇದೀಗ ಅದರ ಎರಡನೇ ಭಾಗದ ಟೀಸರ್ ಬಿಡುಗಡೆಯಾಗಿ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್ ಆಗಿ ಹೊರಹೊಮ್ಮಿದ್ದು ಈಗ ಇತಿಹಾಸ. ಯಾವುದೇ ಒಂದು ಚಿತ್ರದಲ್ಲಿ ಬಹುತೇಕ ಜನ ಗುರುತಿಸುವುದು ಚಿತ್ರದ ನಾಯಕ ನಾಯಕಿ ಹಾಗೂ ನಿರ್ದೇಶಕರನ್ನು ಮಾತ್ರ ಆದರೆ ಕೆಜಿಎಫ್ ಎಂಬ ದಾಖಲೆಯ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರನ್ನು ಸಹ ಜನ ಆ ಪಾತ್ರದ ಹೆಸರಿನಿಂದ ಗುರುತು ಹಿಡಿಯುವರು ಎಂದರೆ ನೀವೇ ಊಹಿಸಿ ಆ ಚಿತ್ರ ಸೃಷ್ಟಿಸಿದ ಹವಾ ಎಂತದ್ದು ಎಂದು.

ಕೆಜಿಎಫ್ ಒಂದನೇ ಅವತರಣಿಕೆಯಲ್ಲಿ ಯಶ್ ಅವರ ಮುಂದೆ ಸರಿಸಮಾನವಾಗಿ ನಿಂತು ಅಭಿನಯಿಸಿ ಶ್ರೇಷ್ಠ ವಿಲನ್ ಗಳಲ್ಲಿ ತಾವು ಒಬ್ಬರು ಎಂದು ಸಾಬೀತುಪಡಿಸಿದವರು ಗರುಡ ಖ್ಯಾತಿಯ ರಾಮ್ ಅವರು. ಹೌದು ಕೆಜಿಎಫ್ ಚಿತ್ರ ನೋಡಿದ ಜನ ಯಶ್ ಅವರನ್ನು ಜನ ಎಷ್ಟು ಮೆಚ್ಚಿಕೊಂಡರು ಅಷ್ಟೇ ಗರುಡ ರಾಮ್ ಅವರನ್ನು ಸಹ ಮೆಚ್ಚಿಕೊಂಡರು. ಅದು ಪ್ರಶಾಂತ್ ನೀಲ್ ಆ ಪಾತ್ರಕ್ಕೆ ನೀಡಿದ ಗತ್ತು ಎನ್ನಬಹುುದು.

ಈ ಚಿತ್ರದಿಂದ ದೇಶಾದ್ಯಂತ ಹೆಸರುವಾಸಿಯಾದ ಗರುಡ ರಾಮ್ ಇದೀಗ ಬೇರೆ ಭಾಷೆಯ ಶ್ರೇಷ್ಠ ನಟರುಗಳ ಜೊತೆ ಅಭಿನಯಿಸುವ ಅವಕಾಶವನ್ನು ಪಡೆಯುತ್ತಿದ್ದಾರೆ. ಇದೀಗ ಗರುಡ ರಾಮ್ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದು ಖ್ಯಾತ ನಟ ಮೋಹನ್ಲಾಲ್ ವಿರುದ್ಧ ವಿಲನ್ ಆಗಿ ತೊಡೆ ತಟ್ಟಲು ಸಜ್ಜಾಗಿದ್ದಾರೆ. ಹೌದು ಮಲಯಾಳಂ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಉನ್ನಿಕೃಷ್ಣನ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರಕ್ಕೆ ಅರಟ್ಟು ಎಂದು ಹೆಸರಿಡಲಾಗಿದೆ.

ಇನ್ನೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಇನ್ನೊಬ್ಬ ಕನ್ನಡಿಗರು ಅಭಿನಯಿಸುತ್ತಿದ್ದಾರೆ ಅದು ಯಾರೆಂದರೆ ಶ್ರದ್ಧಾ ಶ್ರೀನಾಥ್. ಒಟ್ಟಾರೆಯಾಗಿ ಹೇಳುವುದಾದರೆ ಗರುಡ ರಾಮ್ ಅವರು ತಮಗೆ ಸಿಕ್ಕ ಅವಕಾಶದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಇದೀಗ ಬೇರೆ ಬಾಷೆಯಲ್ಲಿ ಸದ್ದು ಮಾಡುತ್ತಿರುವುದು ಕನ್ನಡಿಗರ ಹೆಮ್ಮೆಯಾಗಿದೆ. ನಟ ಮೋಹನಲಾಲ್ ಮತ್ತು ಗರುಡ ರಾಮ್ ಕಾಂಬಿನೇಶನ್ ಹೇಗಿರಲಿದೆ ಎಂದು ಎಲ್ಲ ಅಭಿಮಾನಿಗಳು ಕಾಯುತ್ತಿದ್ದಾರೆ.