ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಹೊರದೇಶದಲ್ಲಿ ಭಾರಿ ಬೇಡಿಕೆ! ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಟೀಸರ್ 150 ಮಿಲಿಯನ್ ಕ್ಕಿಂತ ವೀಕ್ಷಣೆ ಪಡೆದು ವಿಶ್ವದಾದ್ಯಂತ ಭಾರಿ ಜನಪ್ರಿಯಗೊಂಡಿದೆ. ಕೆಜಿಎಫ್2 ಚಿತ್ರದ ಟೀಸರ್ ಬಿಡುಗಡೆಯಾದ ಒಂದು ವಾರದಲ್ಲಿ ಬರೋಬ್ಬರಿ ನೂರೈವತ್ತು ಮಿಲಿಯನ್ ಕ್ಕಿಂತ ಹೆಚ್ಚು ವೀಕ್ಷಣೆ ಪಡೆಯುವುದರ ಮುಲಕ ವಿಶ್ವದ ಚಿತ್ರರಂಗದಲ್ಲಿ ಯಾವ ಚಿತ್ರವೂ ಮಾಡದ ದಾಖಲೆಯನ್ನು ನಿರ್ಮಾಣ ಮಾಡಿದೆ, ಪ್ರಶಾಂತ್ ನೀಲ್ ಅವರ ಅದ್ಭುತ ಕಲ್ಪನೆ ನರಾಚಿ ಎಂಬ ನರಕ ಸಾಮ್ರಾಜ್ಯದ ಕೋಟೆ ಕಟ್ಟಿರುವುದರಲ್ಲಿ ಅವರ ಪ್ರತಿಭೆಯನ್ನು ನೋಡಬಹುದಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಒಟ್ಟಾರೆ ಬಜೆಟ್ ಬರೋಬ್ಬರಿ ನೂರು ಕೋಟಿ ಎಂದು ಅಂದಾಜಿಸಲಾಗಿದೆ.

ಇನ್ನು ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಪ್ರಖ್ಯಾತ ನಟರು ನಟಿಸಿರುವುದರಿಂದ ದೇಶಾದ್ಯಂತ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಉಂಟು ಮಾಡಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟಿಯಾದ ರಾಷ್ಟ್ರಪ್ರಶಸ್ತಿ ವಿಜೇತೆ ರವೀನಾ ಟಂಡನ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಜೊತೆಗೆ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ರಿಲೀಸ್ ಅಗಿರುವ ಟೀಸರ ಅಲ್ಲಿ ಅವರ ಗೆಟಪ್ ಕುತೂಹಲ ಕೆರಳಿಸಿದೆ. ಬಹುಭಾಷಾ ನಟರಾಗಿರುವ ಪ್ರಕಾಶ್ ರಾಜ್ ಕೂಡ ಇದರಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರವನ್ನು ಮುಂದುವರಿಸಿದ್ದಾರೆ.

ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಸದ್ದು ಮಾಡುತ್ತದೆ. ಅದೂ ಕೂಡ ಈ ಚಿತ್ರದ ವಿತರಣೆಯ ವಿಚಾರವಾಗಿ ಹೌದು ದೇಶಾದ್ಯಂತ ಈ ಚಿತ್ರದ ವಿತರಣೆ ಹಕ್ಕನ್ನು ಪಡೆಯಲು ಡಿಸ್ಟ್ರಿಬ್ಯುಟರ್ ಗಳು ಸಾಲು ಸಾಲಾಗಿ ನಿಂತಿದ್ದಾರೆ. ದೇಶದಲ್ಲಿ ಆಗಿದ್ದರೆ ಈ ಸುದ್ದಿ ಸೌಂಡ್ ಆಗುತ್ತಿರಲಿಲ್ಲ.ಆದರೆ ಕೆಜಿಎಫ್ ಚಾಪ್ಟರ್2 ಚಿತ್ರದ ವಿತರಣೆ ಹಕ್ಕನ್ನು ಪಡೆಯಲು ವಿದೇಶದಲ್ಲಿಯೂ ಕೂಡ ಭಾರಿ ಪೈಪೋಟಿ ಏರ್ಪಟ್ಟಿದೆ. ಹೊರದೇಶದ ಪ್ರತಿಷ್ಠಿತ ಚಿತ್ರ ವಿತರಣೆಯ ಸಂಸ್ಥೆವೊಂದು ನಲವತ್ತು ಕೋಟಿ ನೀಡಲು ತಯಾರಾಗಿದೆ, ಆದರೆ ನಿರ್ಮಾಪಕರಾದ ವಿಜಯ್ ಕಿರಂಗದೂರ್ ನಲವತ್ತು ಕೋಟಿಗೆ ಒಪ್ಪದೆ, ಬರೋಬ್ಬರಿ ಎಪ್ಪತ್ತು ಕೋಟಿಗೆ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ.

ಕೆಜಿಎಫ್ ಹಕ್ಕುಗಳನ್ನು ಚಿತ್ರತಂಡ ಎಪ್ಪತ್ತು ಕೋಟಿಗೆ ಬೇಡಿಕೆ ಇಟ್ಟಿರುವುದು ಒಳ್ಳೆಯ ವಿಷಯ ಹಾಗು ಇಷ್ಟು ದೊಡ್ಡ ಮೊತ್ತಕ್ಕೆ ಈ ಚಿತ್ರ ಅರ್ಹ ಚಿತ್ರ. ಒಂದು ಕಾಲದಲ್ಲಿ ಕನ್ನಡದ ಚಿತ್ರಗಳು ಹೊರ ದೇಶದಲ್ಲಿ ಬಿಡುಗಡೆ ಆಗಬೇಕಾಗಿದ್ದರೆ, ಅಲ್ಲಿನ ಕೆಲವು ಸ್ಥಳೀಯ ಸಂಸ್ಥೆಗಳಿಗೆ ಕಮಿಷನ್ ನೀಡಬೇಕಾಗಿತ್ತು, ಆದರೆ ಇಂದು ಕೆಜಿಎಫ್ 2 ಚಿತ್ರದ ವಿತರಣೆಯ ಹಕ್ಕನ್ನು ಪಡೆಯಲು ವಿದೇಶಿ ಸಂಸ್ಥೆಗಳೇ ಕಮೀಷನ್ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಸುವರ್ಣ ಯುಗದ ಸಮಯ ಬರಲು ಕಾರಣವಾದ ನಮ್ಮ ಕನ್ನಡದ ಕೆಜಿಎಫ್ 2 ಚಿತ್ರ ನಿಜಕ್ಕೂ ಕನ್ನಡದ ಹೆಮ್ಮೆಯ ಚಿತ್ರ ಆಗಿದೆ.