ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕನ್ನಡ ಚಿತ್ರರಂಗದ ಬೆಳವಣಿಗೆ ಕುರಿತು ಟ್ವೀಟ್ ಮಾಡಿದ್ದಾರೆ. ನೈಜ ಕಥೆಯಾಧಾರಿತ ಸಿನಿಮಾಗಳ ಮೂಲಕ ಸಾಕಷ್ಟು ಖ್ಯಾತಿ ಪಡೆದಿರುವ ರಾಮ್ ಗೋಪಲ್ ವರ್ಮಾ ಒಂದಷ್ಟು ವಿವಾದ ಹೇಳಿಕೆಗಳನ್ನು ನೀಡುತ್ತಾ ಕುಖ್ಯಾತಿ ಎನ್ನುವ ಹಣೆಪಟ್ಟಿಯನ್ನು ಪಡೆದಿದ್ದಾರೆ. ಇವರು ಕಳೆದ ಬಾರಿ ರಜಿನಿಯವರ ರೂಪವನ್ನು ತೆಗೆಳಿ ವಿವಾದಕ್ಕೆ ಸಿಲುಕಿದ್ದರು, ನಂತರ ಸಿನಿಮಾ ನಟಿಯೊಬ್ಬರಿಗೆ ಸಾರ್ವಜನಿಕವಾಗಿ ಕಿಸ್ ಮಾಡಿ ಟೀಕೆಗೆ ಗುರಿಯಾಗಿದ್ದರು. ಹೀಗೆ ಒಂದಷ್ಟು ವಿವಾದಕ್ಕೆ ಎಡೆಮಾಡಿಕೊಡುವಂತಹ ದುರ್ವರ್ತನೆಯ ಮತ್ತು ವಿವಾದ ಆಗುವಂತಹ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದಾರೆ. ಇದೀಗ ಮತ್ತೆ ಸುದ್ದಿಯಾಗಿರುವುದು ಕನ್ನಡ ಚಿತ್ರರಂಗದ ಬೆಳವಣಿಗೆ ಕುರಿತು ಟ್ವೀಟ್ ಮಾಡುವ ಮೂಲಕ.

ಹೌದು ಕಳೆದ ಎರಡು ವರ್ಷಗಳ ಹಿಂದಿನವರೆಗೆ ಬಾಲಿವುಡ್ ಇರಲಿ ನಮ್ಮ ದಕ್ಷಿಣ ಭಾರತದ ಸಿನಿ ಉದ್ಯಮವೇ ಕಡೆಗಣಿಸಿತ್ತು, ಕನ್ನಡ ಚಿತ್ರಕ್ಕೆ ಅಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ, ಮತ್ತು ಕನ್ನಡ ಚಿತ್ರಗಳ ಬಗ್ಗೆ ಗಮನವನ್ನೂ ಸಹ ಕೊಡುತ್ತಿರಲಿಲ್ಲ. ಆದರೆ ಕನ್ನಡದಲ್ಲಿ ಎರಡು ವರ್ಷದ ಹಿಂದೆ ಬಂದ ಕೆಜಿಎಫ್ ಚಿತ್ರ ನೋಡಿ ಇಡೀ ಭಾರತೀಯ ಚಿತ್ರರಂಗವೇ ಆಶ್ಚರ್ಯ ಪಟ್ಟಿದೆ, ಕನ್ನಡ ಸಿನಿಮಾದ ಗತ್ತು ಏನೆಂದು ಇತರೆ ಭಾಷೆಗಳಿಗೆ ಗೊತ್ತಾಗಿದೆ ಎಂದು ಟ್ವೀಟ್ ಮಾಡಿ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ಯಾಗ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಇನ್ನು ರಾಮ್ ಗೋಪಾಲ್ ವರ್ಮಾ ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಕಿಲ್ಲಿಂಗ್ ವೀರಪ್ಪನ್ ಚಿತ್ರ ನಿರ್ದೆಶನ ಮಾಡಿದ್ದರು. ಲೂಸಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಹೊಸ ತಿರುವನ್ನು ಪಡೆಯಿತು ಎನ್ನಬಹುದು. ಇನ್ನು ರಂಗೀತರಂಗ, ಗುಲ್ಟು ಸಿನಿಮಾಗಳು ವಿಭಿನ್ನ ಕಥೆಗಳ ಮೂಲಕ ಒಂದಷ್ಟು ಬೇರೆ ಭಾಷೆಯವರನ್ನು ಗಮನ ಸೆಳೆದಿದ್ದವು. ಇದೀಗ ಕೆಜಿಎಫ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗುವುದರ ಮೂಲಕ ಕನ್ನಡ ಚಿತ್ರರಂಗ ಇಡೀ ವಿಶ್ವಕ್ಕೆ ತನ್ನ ಕಂಪನ್ನು ಪಸರಿಸಿದೆ.