ಕೆಜಿಎಫ್ ಹಾದಿಯನ್ನೇ ಅನುಸರಿಸುತ್ತಿದೆ ದಕ್ಷಿಣ ಭಾರತದ ಮತ್ತೊಂದು ದೊಡ್ಡ ಬಹು ನಿರೀಕ್ಷಿತ ಚಿತ್ರ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಆಗಿರುವ ಸಲಾರ್ ಸಿನಿಮಾ ತಂಡದಿಂದ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದೆ. ಹೌದು ಕೆಜಿಎಫ್ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಪರಭಾಷೆ ಸಿನಿಮಾ ಸಲಾರ್. ಈ ಸಲಾರ್ ಸಿನಿಮಾ ಸಾಕಷ್ಟು ವಿಚಾರಗಳಿಗೆ ಭಾರಿ ಸುದ್ದಿ ಮಾಡುತ್ತಿದೆ‌. ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ನಾಯಕ ನಟರಾಗಿ ಶೃತಿ ಹಾಸನ್ ನಾಯಕಿಯಾಗಿ ನಟಿಸುತ್ತಿರುವ ಸಲಾರ್ ಸಿನಿಮಾ ಉಗ್ರಂ ಸಿನಿಮಾದ ರಿಮೇಕ್ ಸಿನಿಮಾ ಎಂದೇ ಹೇಳಲಾಗುತ್ತಿದ್ದರು ಕೂಡ ನಿರ್ದೇಶಕ ಪ್ರಶಾಂತ್ ನೀಲ್ ಮಾತ್ರ ಈ ಬಗ್ಗೆಯೂ ಎಲ್ಲಿಯೂ ಕೂಡ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ.

ಮಾಸ್ ಕಥೆ ಹೊಂದಿರುವ ಸಲಾರ್ ಚಿತ್ರದಲ್ಲಿ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಎದುರು ತೊಡೆ ತಟ್ಟಿದ್ದಾರೆ ಜಗಪತಿ ಬಾಬು. ಇವರ ಜೊತೆಗೆ ಕನ್ನಡದ ಯುವ ಖ್ಯಾತ ನಟ ಭಜರಂಗಿ ಮಧು ಗುರು ಸ್ವಾಮಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಲಾರ್ ಸಿನಿಮಾ ತಂಡ ಭಾಗಶಃ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ನೀಲ್ ಪ್ರಮೋಶನ್ ಕಾರ್ಯ ಆರಂಭಿಸುವ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.

ಇದರ ಜೊತೆ ಜೊತೆಗೆ ಚಿತ್ರತಂಡಕ್ಕೆ ಹೊಸದೊಂದು ಆಲೋಚನೆ ಮೂಡಿದೆ. ಅದೇನಪ್ಪಾ ಅಂತೀರಾ ಫುಲ್ ಮಾಸ್ ಎಂಟರ್ಟೈನರ್ ಆಗಿರುವ ಸಲಾರ್ ಸಿನಿಮಾವನ್ನು ಎರಡು ಭಾಗಗಳಾಗಿ ರಿಲೀಸ್ ಮಾಡುವ ಯೋಜನೆ ಮಾಡಿದ್ದಾರಂತೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಕೂಡ ಅಧಿಕೃತವಾಗಿ ತಿಳಿಸಿಲ್ಲ. ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ನಿರ್ಮಾಣ ಮಾಡಿರುವ ಕೆಜಿಎಫ್ ಚಿತ್ರ ಈಗಾಗಲೇ ಎರಡು ಭಾಗಗಳಾಗಿ ರಿಲೀಸ್ ಆಗತ್ತಿದೆ.

ಇನ್ನೊಂದೆಡೆ ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ಕೂಡ ಎರಡು ಭಾಗಗಳಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಇದೆಲ್ಲದರ ಕಾರಣ ನಿರ್ಮಾಪಕರು ಸಲಾರ್ ಸಿನಿಮಾವನ್ನೂ ಕೂಡ ಎರಡು ಭಾಗಗಳಲ್ಲಿ ರಿಲೀಸ್ ಮಾಡೋಣ ಎಂದು ಆಲೋಚನೆ ಮಾಡಿದ್ದಾರಂತೆ. ಈ ಸಲಾರ್ ಸಿನಿಮಾಗೂ ಕೆಜಿಎಫ್ ಸಿನಿಮಾದಲ್ಲಿ ಕಮಾಲ್ ಮಾಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರೇ ರಾಗ ಸಂಯೋಜನೆ ಮಾಡಿದ್ದಾರೆ. ಈ ಸಲಾರ್ ಸಿನಿಮಾಗಾಗಿ ಪ್ರಭಾಸ್ ಅಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ.

%d bloggers like this: