ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಜೊತೆ ಹ್ಯಾಟ್ರಿಕ್ ಪ್ರಿನ್ಸ್ ಧೃವಸರ್ಜಾ ಸಿನಿಮಾ ಮಾಡುವುದು ಖಚಿತವಾಗಿದೆ. ಪ್ರೇಮ್ ಸಿನಿಮಾಗಳು ಅಂದರೆ ಅವು ಟೈಟಲ್ ಫಿಕ್ಸ್ ಆಗೋಕ್ ಮುಂಚೆನೇ ಮುಹೂರ್ತ ಮಾಡಿಕೊಳ್ಳೋದಕ್ಕೂ ಮುನ್ನವೇ ಸಖತ್ ಕ್ರೇಜ಼್ ಹುಟ್ಟು ಹಾಕುತ್ತವೆ. ಈ ಕ್ರೇಜ಼್ ಹುಟ್ಟಿಸಲು ಪ್ರೇಮ್ ಈಗಾಗಲೇ ಒಂದಷ್ಟು ಪ್ಲಾನ್ ಮಾಡಿಟ್ಟುಕೊಂಡಿದ್ದಾರೆ. ಅದಕ್ಕೂ ಮುನ್ನ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಅವರ ಅಭಿಮಾನಿಗಳಿಗೆ ಮೂಡಿರುವ ಪ್ರಶ್ನೆ ಅಂದರೆ ಪ್ರೇಮ್ ನಮ್ಮ ಧೃವಬಾಸ್ ಅವರನ್ನ ಯಾವ ಅವತಾರದಲ್ಲಿ ತೋರಿಸಲಿದ್ದಾರೆ ಎಂದು ಫುಲ್ ಕನ್ಫ್ಯೂಸ್ ಆಗವ್ರೇ. ಅದಕ್ಕೆ ಉತ್ತರ ಅಂದರೆ ಪ್ರೇಮ್ ಈ ಬಾರಿ ರಗಡ್ ಮಾಸ್ ಸ್ಟೋರಿ ರೆಡಿ ಮಾಡಿಕೊಂಡಿರುವುದರಿಂದ ಪೊಗರಿನ ಹೈದ ಧೃವಸರ್ಜಾ ಅವರನ್ನ ಗ್ಯಾಂಗ್ ಸ್ಟರ್ ರೂಪದಲ್ಲಿ ಖಡಕ್ ಆಗಿ ತೆರೆ ಮೇಲೆ ಭರ್ಜರಿಯಾಗಿ ಮಿಂಚಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಇತ್ತೀಚಿಗೆ ಜೋಗಿ ಪ್ರೇಮ್ ಮತ್ತು ಧೃವ ಸರ್ಜಾ ಕಾಂಬಿನೇಶನ್ ನಲ್ಲಿ ಮೂಡಿ ಬರಲಿರುವ ಚಿತ್ರದ ಅಪ್ಡೇಟ್ ಅಂದರೆ ಅದು ಈ ಚಿತ್ರಕ್ಕೆ ವಿಲನ್ ಯಾರು ಎಂಬುದು. ಈ ಮುಂಚೆ ಪ್ರೇಮ್ ಅವರು ಧೃವ ಸರ್ಜಾ ಅವರೆದರು ಬಾಲಿವುಡ್ ಖ್ಯಾತ ನಟ ನಿರ್ದೇಶಕ ಅಜಯ್ ದೇವಗನ್ ಅವರನ್ನ ಕರೆ ತರಲಿದ್ದಾರೆ ಎಂದು ಕೇಳಿ ಬಂದಿತ್ತು. ಆದರೆ ಅಜಯ್ ದೇವಗನ್ ಅವರ ಡೇಟ್ ಹೊಂದಾಣಿಕೆ ಆಗದ ಕಾರಣ ಇದೀಗ ಅವರ ಜಾಗಕ್ಕೆ ಅಧೀರ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಹೌದು ಕೆಜಿಎಫ್ ಚಾಪ್ಟರ್2 ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿರುವ ಸಂಜಯ್ ದತ್ ಅವರು ಪೊಗರಿನ ಹೈದನೊಂದಿಗೆ ಸೆಣಸಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಇನ್ನು ಈ ಹೆಸರಿಡದ ಜೋಗಿ ಪ್ರೇಮ್ ಮತ್ತು ಧೃವ ಸರ್ಜಾ ಕಾಂಬಿನೇಶನ್ ಸಿನಿಮಾಗೆ ಕೆ.ವಿ.ಎನ್ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಲಿದ್ದು.

ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗಲಿದೆಯಂತೆ. ಸದ್ಯಕ್ಕೆ ಧೃವಸರ್ಜಾ ಎಪಿ ಅರ್ಜುನ್ ಅವರ ನಿರ್ದೇಶನದ ಮಾರ್ಟಿನ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆದ ನಂತರ ಜೋಗಿ ಪ್ರೇಮ್ ಅವರ ಸಿನಿಮಾದಲ್ಲಿ ಧೃವ ಸರ್ಜಾ ತೊಡಗಿಸಿಕೊಳ್ಳಲಿದ್ದಾರೆ. ಗ್ಯಾಂಗ್ ಸ್ಟರ್ ಕ್ಯಾರೆಕ್ಟರ್ ಆಗಿರೋದ್ರಿಂದ ಧೃವ ಅವರ ಲುಕ್, ಹೇರ್ ಸ್ಟೈಲ್ ಕಂಪ್ಲೀಟ್ ಚೇಂಜ್ ಆಗಲಿದೆಯಂತೆ. ಇತ್ತ ಪ್ರೇಮ್ ಕೂಡ ತಮ್ಮ ಬಾಮೈದ ರಾಣಾಗೆ ಆಕ್ಷನ್ ಕಟ್ ಹೇಳಿರುವ ಏಕ್ ಲವ್ ಯಾ ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ಬಿಝಿ಼ ಆಗಿದ್ದಾರೆ. ಇದೆಲ್ಲಾ ಮುಗಿಸಿಕೊಂಡು ಜೋಗಿ ಪ್ರೇಮ್ ತಮ್ಮ ಹೊಸ ಚಿತ್ರವನ್ನು ಮುಂದಿನ ವರ್ಷ2022 ಜನವರಿಯಲ್ಲಿ ಸಂಕ್ರಾಂತಿ ಹಬ್ಬದಂದು ಸಟ್ಟೇರಲಿದೆ ಎಂದು ಈ ಚಿತ್ರತಂಡದ ಮೂಲಗಳಿಂದ ತಿಳಿದು ಬಂದಿದೆ. ಈ ಚಿತ್ರಕ್ಕೆ ಕನ್ನಡದ ನಾಯಕಿಯನ್ನೇ ಕರೆ ತರಲಾಗುತ್ತದೆ ಎಂದು ಕೂಡ ತಿಳಿದು ಬಂದಿದೆ.