ಕೆಜಿಎಫ್ ಟೀಸರ್ ಅನ್ನು ಒಂದು ದಿನದ ಮೊದಲೇ ಸೋರಿಕೆ, ಈತನ ಮೇಲೆ ಎಲ್ಲರಿಗೂ ಅನುಮಾನ

ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಠಿಮಾಡಿದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಇಲ್ಲಿಯವರೆಗೆ 100 ಮಿಲಿಯನ್ ಕ್ಕಿಂತ ಹೆಚ್ಚು ವೀಕ್ಷಣೆ ಪಡೆಯುವುದರ ಜೊತೆಗೆ ಪ್ರೇಕ್ಷಕರಿಂದ ಅಮೋಘ ಮೆಚ್ಚುಗೆಯ ಪ್ರತಿಕ್ರಿಯೆ ಪಡೆದಿದೆ. ಸಿನಿ ಪಂಡಿತರ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ರಜಿನಿಯಂತೆ ಪರಭಾಷೆಗಳಲ್ಲಿಯೂ ಕೂಡ ಖ್ಯಾತಿ ಪಡೆಯುವ ಎಲ್ಲಾ ಲಕ್ಷಣಗಳಿವೆ, ಜೊತೆಗೆ ಹಾಲಿವುಡ್ ಮಂದಿ ಕೂಡ ಭಾರತೀಯ ಚಿತ್ರರಂಗದ ಮೇಲೆ ದೃಷ್ಠಿ ಹರಿಸುವಂತೆ ಮಾಡಿದ ಹೆಗ್ಗಳಿಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾಗಿದೆ. ಇನ್ನು ವರದಿಯ ಪ್ರಕಾರ ಈ ಚಿತ್ರ‌ದ ಟೀಸರ್ ಹಾಲಿವುಡ್ ಸಿನಿಮಾಗಳ ದಾಖಲೆಯನ್ನೇ ಧೂಳಿಪಟ ಮಾಡಿದೆ ಎಂದು ತಿಳಿದುಬಂದಿದೆ.

ಕೆಜಿಎಫ್2 ಚಿತ್ರತಂಡದ ಗುರಿಯಿದ್ದಿದ್ದು ಈ ಟೀಸರ್ ಪ್ರಭಾಸ್ ಅಭಿನಯದ ಸಾಹೋ ಸಿನಿಮಾದ ಟೀಸರ್ ರೆಕಾರ್ಡ್ ಬ್ರೇಕ್ ಮಾಡಬೇಕು ಎಂಬ ಇಚ್ಛೆಯಿತ್ತು, ಸಾಹೋ ಸಿನಿಮಾದ ಟೀಸರ್ ಒಂದೇ ದಿನದಲ್ಲಿ 25 ಮಿಲಿಯನ್ ವೀಕ್ಷಣೆ ಪಡೆದಿತ್ತು. ಹಾಗಾಗಿ ಸಾಹೋ ಚಿತ್ರದ ಟೀಸರ್ ದಾಖಲೆಯನ್ನ ಸರಿಗಟ್ಟಬೇಕು ಎಂಬ ಆಲೋಚನೆ ಚಿತ್ರತಂಡದಲ್ಲಿತ್ತು ಆದರೆ ನಿರೀಕ್ಷೆಗೂ ಮೀರಿ ಕೇವಲ ಎರಡೇ ದಿನದಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದು ಕೆಜಿಎಫ್ ಚಿತ್ರತಂಡ ಆಶ್ಚರ್ಯದ ಜೊತೆಗೆ ಹರ್ಷೋದ್ಗಾರದಿಂದ ಸಂಭ್ರಮಿಸುತ್ತಿದೆ.

ಕೆಜಿಎಫ್ 2 ಚಿತ್ರದ ಟೀಸರ್ 100 ಮಿಲಿಯನ್ ವೀಕ್ಷಣೆ ಪಡೆದ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರು ಲೈವ್ ಬಂದು ನನ್ನ ಎಲ್ಲಾ ಚಿತ್ರಗಳಿಗೆ ನೀವು ಬೆಂಬಲವಾಗಿ ನಿಂತಿದ್ದೀರಿ ಈ ಚಿತ್ರಕ್ಕೂ ಕೂಡ ನೀವು ತೋರಿದ ಪ್ರೀತಿ, ಅಭಿಮಾನಕ್ಕೆ ನಾನು ಚಿರುಋಣಿ ಎಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಒಟ್ಟಾರೆಯಾಗಿ ಕನ್ನಡ ಚಿತ್ರವನ್ನು ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡಬೇಕು, ನಮ್ಮ ಕನ್ನಡ ಸಿನಿಮಾದ ಗುಣಮಟ್ಟದ ಬಗ್ಗೆ ಅವರಿಗೆ ತಿಳಿಸಬೇಕು ಎನ್ನುತ್ತಿದ್ದ ಯಶ್ ಇದೀಗ ತಮ್ಮ ನಟನೆಯ ಕೆಜಿಎಫ್ 2 ಚಿತ್ರವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿರುವುದು ನಿಜಕ್ಕೂ ಇದು ಕನ್ನಡಿಗರಿಗೆ ಹೆಮ್ಮೆ ಎನಿಸುತ್ತದೆ.

ಈ ನಡುವೆ ಕೆಜಿಎಫ್ ಚಿತ್ರದ ಟೀಸರ್ ಒಂದು ದಿನದ ಮೊದಲೇ ಸೋರಿಕೆ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು, ಇಷ್ಟು ದೊಡ್ಡ ಚಿತ್ರವನ್ನು ಸೋರಿಕೆ ಮಾಡಿದ್ದು ಯಾರು ಮತ್ತು ಹೇಗೆ ಅಂದಾಗ ಎಲ್ಲರ ಗಮನ ಹೋಗಿದ್ದು ಭಾರತೀಯ ಚಿತ್ರರಂಗಕ್ಕೆ ತಲೆನೋವಾಗಿರುವ ತಮಿಳ್ ರಾಕರ್ಸ್ ಪುಂಡರ ತಂಡ. ಹೌದು ಪ್ರಶಾಂತ್ ನೀಲ್ ಒಬ್ಬ ಅಚ್ಚು ಕಟ್ಟಾಗಿ ಕೆಲಸ ಮಾಡುವ ನಿರ್ದೇಶಕ, ಇಂತವರ ಚಿತ್ರದ ಟೀಸರ್ ಅನ್ನೇ ಸೋರಿಕೆ ಮಾಡುತ್ತಾರೆ ಅಂದರೆ ಇವರು ಸಾಮಾನ್ಯ ಜನರು ಮಾಡುವ ಕೆಲಸ ಅಲ್ಲ ಬಿಡಿ. ಹೆಚ್ಚು ಕಡಿಮೆ ಸಿನಿಮಾ ಪ್ರಿಯರಿಲ್ಲ ಇದರ ಹಿಂದೆ ತಮಿಳು ರಾಕರ್ಸ್ ಅವರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಪ್ರಭು ಎಂಬ ವ್ಯಕ್ತಿ ತಮಿಳು ರಾಕರ್ಸಿನ ಮುಖ್ಯ ಅಡ್ಮಿನ್ ಹಾಗೂ ಇನ್ನೂ 4-5 ಜನರ ತಂಡ ಈ ತಮಿಳು ರಾಕರ್ಸ್ ಎಂಬ ವೆಬ್ಸೈಟ್ ಅನ್ನು ನಡೆಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

%d bloggers like this: