ಕೆಜಿಎಫ್ ಟೀಸರ್ ನೋಡಿದ ಹೃತಿಕ್ ರೋಷನ್ ಅವರು ಯಶ್ ಮತ್ತು ಟೀಸರ್ ಬಗ್ಗೆ ಹೇಳಿದ್ದು ಹೀಗೆ

ಕೆಜಿಎಫ್2 ಚಿತ್ರದ ಟೀಸರ್ ನೋಡಿ ಬಾಲಿವುಡ್ ದಿಗ್ಗಜರು ಬೆರಗು! ಭಾರತೀಯ ಚಿತ್ರರಂಗದಲ್ಲಿ ರಾತ್ರೋ ರಾತ್ರಿ ಸಂಚಲನ ಮೂಡಿಸಿದ ಕೆಜಿಎಫ್ ಸಿನಿಮಾ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಗಳಿಸಿರುವುದರ ಜೊತೆಗೆ ಟೀಸರ್ ಬಿಡುಗಡೆಯಾದ ಜಸ್ಟ್ 49 ನಿಮಿಷಗಳಲ್ಲಿ 5 ಮಿಲಿಯನ್ ಕ್ಕಿಂತ ಹೆಚ್ಚುವೀಕ್ಷಣೆ ಪಡೆದಿದೆ, ವೀಕ್ಷಣೆ ಮಾಡಿದ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆಯುತ್ತಿದೆ. ಜನವರಿ8 ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಕೆಜಿಎಫ್ 2 ಚಿತ್ರದ ಟೀಸರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಟೀಸರ್ ವೀಕ್ಷಸಿದ ಪ್ರೇಕ್ಷಕರು ಮಾತ್ರ ಹೊಗಳಿದಲ್ಲದೆ ಭಾರತೀಯ ಚಿತ್ರರಂಗವೇ ನಿಬ್ಬೆರಾಗಿ ಸಿನಿ ದಿಗ್ಗಜರಿಂದ ಚಿತ್ರತಂಡಕ್ಕೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ವಿಶೇಷವಾಗಿ ಬಾಲಿವುಡ್ ಸೂಪರ್ ಸ್ಟಾರ್ ಎವರ್ಗ್ರೀನ್ ಹ್ಯಾಂಡ್ಸಮ್ ಹೀರೋ ಹೃತಿಕ್ ರೊಷನ್ ಕೆಜಿಎಫ್ 2 ಚಿತ್ರದ ಟೀಸರ್ ನೋಡಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ವಾವ್ ಎಂತಹ ಅದ್ಭುತವಾದ ಟೀಸರ್” ಎಂದು ಬರೆದುಕೊಂಡು ಚಿತ್ರತಂಡಕ್ಕೆ ವಿಶ್ ಮಾಡುವುದರ ಜೊತೆಗೆ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಕೆಜಿಎಫ್ 2 ಸಿನಿಮಾ ಕನ್ನಡದ ಚಿತ್ರರಂಗದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ದಿದೆ. ಕೆಜಿಎಫ್ ಸಿನಿಮಾದ ಮುಂದುವರಿದ ಭಾಗವಾಗಿ ಬಂದಿರುವ ಪಾರ್ಟ್2 ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಲು ಹೊರಟಿದೆ ಎನ್ನಬಹುದಾಗಿದೆ.

%d bloggers like this: