ಹೊಸ ವರ್ಷಕ್ಕೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಹುಟ್ಟು ಹಬ್ಬದಿನದಂದು ಅಚ್ಚರಿಯ ಉಡುಗೊರೆ ನೀಡಲಿದ್ದಾರೆ. ಹೌದು ಯಶ್ ಅಭಿಮಾನಿಗಳು ಮತ್ತು ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಕಾತರದಿಂದ ಕಾಯುತ್ತಿರುವ ಕೆಜಿಎಫ್2 ಸಿನಿಮಾದ ಟೀಸರ್ ಯಶ್ ಹುಟ್ಟು ಹಬ್ಬದಿನದಂದು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಜನವರಿ 8ರಂದು ಯಶ್ ಹುಟ್ಟು ಹಬ್ಬ ಪ್ರತಿವರ್ಷದಂತೆ ಈ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಮಾಡಬಹುದಿತ್ತೇನೋ ಆದರೆ ಕೊರೋನ ಇರುವ ಸಮಯದಲ್ಲಿ ಅದು ಈಡೇರುವುದು ಅನುಮಾನವೇ ಜೊತೆಗೆ ಕಳೆದ ಹುಟ್ಟು ಹಬ್ಬದಿನದಂದು ಯಶ್ ನೋಡಲಾಗಲಿಲ್ಲ ಎಂದು ಅಭಿಮಾನಿಯೊಬ್ಬರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರು.

ಎರಡು ವರ್ಷದ ಹಿಂದೆ ಅಂದರೆ 2018 ಡಿಸೆಂಬರ್ ನಲ್ಲಿ ತೆರೆಕಂಡ ಕೆಜಿಎಫ್ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಬಂದು ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತೊಂದು ಹಂತಕ್ಕೆ ಕೊಂಡುಹೋಗಿತ್ತು. ಇದೀಗ ಚಾಪ್ಟರ್ ಅದನ್ನೂ ಮೀರಿಸುವಂತಹ ಮೇಕಿಂಗ್ ಹೊಂದಿದ್ದು ಅಭಿಮಾನಿಗಳಲ್ಲಿ ಚಾಪ್ಟರ್ ಒನ್ ಗಿಂತ ಚಾಪ್ಟರ್ ಎರಡಕ್ಕೆ ಮಿತಿಮೀರಿದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದೀಗ ಎಲ್ಲರ ಗಮನಯಿರುವುದು ಕೆಜಿಎಫ್2 ಚಿತ್ರದ ಟೀಸರ್ ಮೇಲೆ ಅದೂ ಸಹ ಇದೀಗ ಈಡೇರುವಂತಹ ಎಲ್ಲಾ ಲಕ್ಷಣಗಳು ಇದೆ ಒಟ್ಟಿನಲ್ಲಿ ಭಾರತೀಯ ಚಿತ್ರರಂಗ ಕುತೂಹಲದಿಂದ ಎದುರು ನೋಡುತ್ತಿರುವ ಕೆಜಿಎಫ್ ಚಿತ್ರದ ಟೀಸರ್ ಯಶ್ ಹುಟ್ಟು ಹಬ್ಬದಿನದಂದು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯಾಗಿದೆ.