ಕೆಜಿಎಫ್2 ಟೀಸರ್ ಬಂದಮೇಲೆ ಗೂಗಲ್ ಅಲ್ಲಿ ಯಶ್ ಬಗ್ಗೆ ಹುಡುಕಾಟ ನಡೆಸಿರುವ ಜನರ ಸಂಖ್ಯೆ ಇದು

ಯಶ್ ಜೀವನದಲ್ಲಿ ಇನ್ನುಮುಂದೆ ಕೆಜಿಎಫ್ ಚಿತ್ರಕ್ಕಿಂತ ಮೊದಲು ಹಾಗು ಕೆಜಿಎಫ್ ಚಿತ್ರದ ನಂತರ ಎಂಬ ಎರಡು ಭಾಗಗಳಿರುತ್ತವೆ, ಯಾಕಂದರೆ ಕೆಜಿಎಫ್ ಚಿತ್ರದ ಮುಂಚೆ ಕೇವಲ ಕರ್ನಾಟಕಕ್ಕೆ ಯಶ್ ಅವರು ಸೀಮಿತರಾಗಿದ್ದರು ಆದರೆ ಯಶ್ ಅವರು ಈಗ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಎರಡು ವರ್ಷದ ಹಿಂದೆ ತೆರೆಕಂಡ ಯಶ್ ಅವರ ಬಹುನಿರೀಕ್ಷಿತ ಹಾಗು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಚಿತ್ರವಾದ ಕೆಜಿಎಫ್ ಮೊದಲ ಚಾಪ್ಟರ್ ಇಡೀ ಭಾರತದ ತುಂಬೆಲ್ಲಾ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ ಯಶ್ ಹಾಗೂ ಕನ್ನಡ ಚಿತ್ರರಂಗಕ್ಕೆ ಹೆಸರು ತಂದುಕೊಟ್ಟಿತು. ತದನಂತರ ಕನ್ನಡದ ಹಲವು ಚಿತ್ರಗಳು ಬೇರೆ ರಾಜ್ಯಗಳಲ್ಲಿಯೂ ತೆರೆದುಕೊಳ್ಳಲು ಶುರು ಆದವು. ಕೆಜಿಎಫ್ ಕನ್ನಡ ಚಿತ್ರರಂಗಕ್ಕೆ ಮೊದಲ ನೂರು ಕೋಟಿ ಹಾಗೂ ಮೊದಲ ಇನ್ನೂರು ಕೋಟಿ ಗಳಿಕೆಯನ್ನು ತಂದುಕೊಟ್ಟಿತು.

ರ ಅಕ್ಟೋಬರ್ ತಿಂಗಳಲ್ಲಿ ಕೆಜಿಎಫ್ ಎರಡನೇ ಚಾಪ್ಟರ್ ಬಿಡುಗಡೆ ಆಗಬೇಕಾಗಿತ್ತು ಆದರೆ ಈ ಮಹಾಮಾರಿ ಕೊರೊನ ಸಲುವಾಗಿ ಚಿತ್ರದ ಚಿತ್ರೀಕರಣ ಹಾಗೂ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದಕ್ಕೆ ಹಾಕಿದೆ. ಮೊನ್ನೆಯಷ್ಟೇ ಕೆಜಿಎಫ್ ಎರಡನೇ ಚಾಪ್ಟರ್ನ ಟೀಸರ್ ಬಿಡುಗಡೆ ಆಗಿದೆ, ಬಿಡುಗಡೆ ದಿನಾಂಕದ ಬಗ್ಗೆ ಇನ್ನು ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈಗ ಯಶ್ ಅಭಿಮಾನಿಗಳಿಗೆ ಇನ್ನೊಂದು ಖುಷಿಯ ಸುದ್ದಿ ಏನಪ್ಪಾ ಅಂದರೆ ಕಳೆದ ವಾರವಷ್ಟೇ ಬಿಡುಗಡೆ ಆಗಿರುವ ಕೆಜಿಎಫ್ ಎರಡನೇ ಚಾಪ್ಟರ್ನ ಟೀಸರ್ ಸಿನಿಮಾ ಜಗತ್ತಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿತು, ತೆಲುಗು ತಮಿಳು ಅಷ್ಟೇ ಅಲ್ಲ ಎಷ್ಟೋ ಹಾಲಿವುಡ್ ಚಿತ್ರಗಳು ಮಾಡದಿರುವ ದಾಖಲೆಯನ್ನು ಮಾಡಿದೆ.

ಯೌಟ್ಯೂಬ್ ಅಲ್ಲಿ ಟೀಸರ್ ಬಿಡುಗಡೆ ಆದ ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬರೋಬ್ಬರಿ 78.5 ಮಿಲಿಯನ್ ಅಂದರೆ ಸುಮಾರು ಎಂಟು ಕೋಟಿಯಷ್ಟು ವೀಕ್ಷಣೆ ಪಡೆದು ಭಾರತದಲ್ಲೆ ಯಾವ ಚಿತ್ರರಂಗ ಮಾಡದ ದಾಖಲೆಯನ್ನು ಮಾಡಿತು. ಇಂದಿನ ತನಕ ಹೇಳಬೇಕೆಂದರೆ ಕೆಜಿಎಫ್ 150ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಹಾಗು ಅದು ಇನ್ನು ಜಾಸ್ತಿ ಆಗುತ್ತಲೇ ಇದೆ. ಬರಿ ಅಭಿಮಾನಿಗಳಿಂದ ಮಾತ್ರವಲ್ಲ ತೆಲುಗು ಹಿಂದಿ ನಟರೂ ಕೂಡಾ ಕೆಜಿಎಫ್ ಟೀಸರ್ ನೋಡಿ ಬೆರಗಾಗಿದ್ದಾರೆ. ಈ ನಡುವೆ ಯಶ್ ಅವರ ಬಗ್ಗೆ ಇರುವ ಈ ವಿಶೇಷ ಸುದ್ದಿಯೊಂದನ್ನು ಹೇಳುತ್ತೇವೆ ನೋಡಿರಿ.

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿ ವೈರಲ್ ಆದರೆ ಜನರು ಕುತೂಹಲದಿಂದ ಆ ವಿಷಯದ ಬಗ್ಗೆ ಗೂಗಲ್ ಅಲ್ಲಿ ಹುಡುಕಾಡುವುದು ಹೆಚ್ಚು, ಹಾಗೆಯೇ ಜನೆವರಿ ಏಳನೇ ತಾರೀಖು ಕೆಜಿಎಫ್ ಟೀಸರ್ ಬಿಡುಗಡೆ ಆಗಿ ಎಲ್ಲ ಕಡೆ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ಯಶ್ ಯಾರು ಮತ್ತು ಏನ್ ಮಾಡ್ತಾರೆ ಎಂಬ ಎಲ್ಲಾ ವಿಷಯಗಳನ್ನು ಗೂಗಲ್ ಅಲ್ಲಿ ಹುಡುಕಾಟ ನಡೆಸಿದ್ದಾರೆ. ಅಂದಹಾಗೆ ಟೀಸರ್ ಬಿಡುಗಡೆ ಆದಾಗಿಂದ ಇವತ್ತಿನ ತನಕ ಕೇವಲ ಎಂಟು ದಿನದಲ್ಲಿ ಬರೋಬ್ಬರಿ 208,684 ಜನರು ಯಶ್ ಅವರ ಬಗ್ಗೆ ಇಂಟರ್ನೆಟ್ ಅಲ್ಲಿ ಗೂಗಲ್ ಅಲ್ಲಿ ಸರ್ಚ್ ಮಾಡಿದ್ದಾರೆ. ಯಶ್ ಅವರ ಹುಟ್ಟುಹಬ್ಬದ ಒಂದೇದಿನಕ್ಕೆ 63,767 ಜನರು ಯಶ್ ಬಗ್ಗೆ ಹುಡುಕಾಡಿರುವುದು ವಿಶೇಷ. ದಿನಕ್ಕೆ ಸರಾಸರಿ ಇಪ್ಪತ್ತಾರು ಸಾವಿರ ಜನರು ಯಶ್ ಅವರ ಬಗ್ಗೆ ಹುಡುಕಿದ್ದಾರೆ.

%d bloggers like this: