ಖಾಲಿ ಹೊಟ್ಟೆಯಲ್ಲಿ ಚಹಾ ಕಾಫಿ ಕುಡಿದು ಈ ಸಮಸ್ಯೆಗಳನ್ನು ಮೈಮೇಲೆ

ಸಾಮಾನ್ಯವಾಗಿ ನಮಗೆ ಬೆಳಿಗ್ಗೆ ಎದ್ದ ತಕ್ಷಣ ಅಗತ್ಯವಾಗಿ ಬೇಕಿರುವುದು ಕಾಫಿ ಟೀ, ಇದು ನಮ್ಮ ಭಾರತೀಯರು ರೂಡಿಸಿಕೊಂಡಿರುವ ನಿಯಮ ಬೆಳಿಗ್ಗೆ ಎದ್ದ ಕಾಫಿ ಟೀ ಕುಡಿಯಲಿಲ್ಲ ಅಂದರೆ ಅಂದಿನ ಕೆಲಸ ಕಾರ್ಯ ಮಾಡಲು ಅವರಿಗೆ ಮನಸ್ಸಾಗುವುದಿಲ್ಲ ಚಟುವಟಿಕೆಯಿಂದ ಕೆಲಸ ಮಾಡಬೇಕಾದರೆ ಕಡ್ಡಾಯವಾಗಿ ಟೀ ಕುಡಿಯಲೇಬೇಕು ಎಂಬ ಹಲವರು ಮತ್ತೊಂದೆಡೆ ಬೆಳಿಗ್ಗೆ ಕಾಫಿ, ಟೀ ಕುಡಿಯಲಿಲ್ಲವಾದರೆ ಅಂದು ಅವರಿಗೆ ಮಲಬದ್ದತೆ ಕಾಡುತ್ತದೆ. ಇಷ್ಟರ ಮಟ್ಟಿಗೆ ನಮ್ಮ ಆಹಾರ ಕ್ರಮದಲ್ಲಿ ಕಾಫಿ ಟೀಗೆ ಪ್ರಥಮ ಆದ್ಯತೆ ನೀಡಿದ್ದೇವೆ. ಇದು ಸಾಮಾನ್ಯವಾದ ವಿಚಾರ ಸರಿ. ಆದರೆ ನಾವು ಇಲ್ಲಿ ಗಮನಿಸಿಬೇಕಾದ ಪ್ರಮುಖ ವಿಚಾರವೆಂದರೆ ಈ ಕಾಫಿ ಟೀ ಯನ್ನು ನಾವು ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತೇವೆ. ಇದು ನಮಗೆ ಅರಿವಿಲ್ಲದೆ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ.

ಬ್ರಿಟೀಷರು ಆರಂಭಿಸಿದ ಈ ಕಾಫಿ, ಟೀ ಪರಿಪಾಠವನ್ನು ನಮ್ಮ ಪೂರ್ವಜರು ಪಾಲಿಸಿಕೊಂಡ ಪರಿಣಾಮ ಇಲ್ಲಿಯವರೆಗೂ ನಾವು ಇದನ್ನು ರೂಡಿಸಿಕೊಂಡು ಬಂದಿದ್ದೇವೆ. ಇದು ನಮ್ಮ ಶರೀರಕ್ಕೆಶಕ್ತಿಯನ್ನುಒದಗಿಸಿದರು ಕೂಡ ಖಾಲಿ ಹೊಟ್ಟೆಯಲ್ಲಿ ಕಾಫೀ, ಟಿ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಬೀರ ಪರಿಣಾಮ ಬೀರುತ್ತದೆ. ಟೀ ಅಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಟ್ಯಾನಿಕ್ ಎಂಬ ಪೋಷಕಾಂಶಗಳು ಜೊತೆಗೆ ಕ್ಯಾಟಿಚೆನ್ ಅಂಶಗಳು ಜೀವರಾಸಾಯನಿಕ ಕ್ರಿಯೆಗಳನ್ನು ಚುರುಕುಗೊಳಿಸುತ್ತವೆ. ಅದಲ್ಲದೆ ಈ ಟೀ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಆದರೆ ಹಲವು ಸಂಶೋಧಕರ ಪ್ರಕಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ,ಟೀ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ, ಟೀ ಅಲ್ಲಿರುವಕೆಪೇನ್ ಜಠರದ ರಸವನ್ನು ಹೆಚ್ಚಾಗಿ ಪ್ರಚೋದಿಸಿ ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗಿ ನಡೆಯದಂತೆ ಏರುಪೇರು ಮಾಡುತ್ತದೆ. ಟೀ ಸೇವನೆಯಿಂದ ನಿಮಗೆ ಆರಾಮದಾಯಕ ಅನಿಸಬಹುದು ಆದರೆ ಇದು ನಿಧಾನಗತಿಯ ವಿಷವಿದ್ದಂತೆ ಎಂದು ಹಲವು ಸಂಶೋಧಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜಠರ ರಸದ ಆಮ್ಲೀಯತೆ ಸಮತೋಲನ ತಪ್ಪಿ ಜೀವ ರಾಸಾಯನಿಕ ಕ್ರಿಯೆಗಳಲ್ಲಿ ಏರುಪೇರಾಗುತ್ತದೆ. ಇದರಿಂದ ನಿಮ್ಮ ಹಲ್ಲಿನ ಹೊರ ಕವಚ ಬೇಗ ಸವೆಯುತ್ತದೆ.

ಈ ಹಲ್ಲುಗಳು ಸೆವೆಯುವುದಕ್ಕೆ ಪ್ರಮುಖ ಕಾರಣವೆಂದರೆ ರಾತ್ರಿಯ ಸಮಯದಲ್ಲಿ ನಿಮ್ಮ ಬಾಯಿಯಲ್ಲಿ ಹೆಚ್ಚು ಬ್ಯಾಕ್ಟಿರಿಯಾಗಳು ಸಂಗ್ರಹವಾಗಿರುತ್ತವೆ ಇವು ಸಕ್ಕರೆ ಅಂಶಗಳನ್ನು ಹೊಡೆದಾಕಿ ಚಿಕ್ಕದಾಗಿರುತ್ತದೆ, ಹೀಗಾಗಿ ಬಾಯಿಯಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ ಇಂತಹ ಸಮಯದಲ್ಲಿ ನೀವು ಬಿಸಿಯುಕ್ತ ಟೀ ಕುಡಿಯುವುದರಿಂದ ಆಮ್ಲೀಯತೆಯಿಂದ ನಿಮ್ಮ ಹಲ್ಲುಗಳ ಹೊರ ಪದರಗಳು ಸಡಿಲಗೊಂಡು ಸೆವೆಯುತ್ತವೆ. ಟೀ ಒಂದು ರೀತಿಯಾದ ಮೂತ್ರ ವರ್ಧಕವಾಗಿರುತ್ತದೆ.

ರಾತ್ರಿಯ ಸಮಯದಲ್ಲಿ ನಾವು ಮಲಗಿರುತ್ತೇವೆ ಕನಿಷ್ಟ ಎಂಟು ಗಂಟೆಗಳ ಕಾಲ ಮಲಗಿರುವ ಸಮಯದಲ್ಲಿ ನಮ್ಮ ಶರೀರಕ್ಕೆ ನೀರಿನ ಲಭ್ಯತೆ ಇರುವುದಿಲ್ಲ, ಅಂತಹ ಸಮಯದಲ್ಲಿ ಬೆಳಿಗ್ಗೆ ಎದ್ಧ ಕೂಡಲೇ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಕಾಡುತ್ತದೆ. ಅದಲ್ಲದೆ ಸ್ನಾಯುಗಳಿಗೆ, ಮಾಂಸ ಕಂಡಗಳಿಗೆ ಶಕ್ತಿ ಕಡಿಮೆಯಾಗುತ್ತದೆ.

ಟೀ ಅಲ್ಲಿರುವ ಕೆಫೇನ್ ಅಂಶವು ದೇಹದಲ್ಲಿರುವ ಶಕ್ತಿಯನ್ನು ವೃದ್ಧಿಸುತ್ತದೆ ಆದರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಉದಾಹರಣೆಗೆ ವಾಕರಿಕೆ ತಲೆ ತಿರುಗುವಂತದ್ದು ನಿದ್ದೆಗೆ ಸಂಬಂಧಿಸಿದ ತೊಂದರೆ ಉದ್ವೇಗಕ್ಕೆ ಒಳಗಾಗುವಂತಹ ಸಮಸ್ಯೆಗಳು ಕಾಡುತ್ತದೆ, ಬೆಳಿಗ್ಗೆಯ ಸಮಯದಲ್ಲಿ ತಿಂಡಿ ತಿಂದ ನಂತರ ಟೀಸೇವಿಸುವುದುಒಳ್ಳೆಯದು ಇದರಿಂದ ಟೀ ಯಲ್ಲಿರುವ ಕೆಫೇನ್ ಕಬ್ಬಿಣಾಂಶವನ್ನು ಹೀರಿಕೊಳ್ಳುವುದು ಕಡಿಮೆಯಾಗಿರುತ್ತದೆ. ಅದರಲ್ಲಿಯೂ ಈ ರಕ್ತ ಹೀನತೆ ಸಮಸ್ಯೆಯಿಂದಬಳಲುತ್ತಿರುವವರು ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಕಾಫಿಟೀ ಸೇವಿಸಬಾರದು.

%d bloggers like this: