ಖಾಲಿ ಹೊಟ್ಟೆಯಲ್ಲಿ ಈ ಆಹಾರ ಪದಾರ್ಥಗಳನ್ನು ತಿನ್ನಬೇಡಿರಿ

ಸಾಮಾನ್ಯವಾಗಿ ಮನುಷ್ಯರ ಹೊಟ್ಟೆಯು ಕೆಲ ಆಹಾರಗಳಿಗೆ ಬೇಗ ಸ್ಪಂದಿಸುವುದಿಲ್ಲ,ನಾವು ಕೆಲ ಪದಾರ್ಥಗಳನ್ನು ಹೆಂಗ್ ಬೇಕೋ ಹಂಗೆ ತಿನ್ನಬಾರದು.ಒಂದು ವೇಳೆ ಖಾಲಿ ಹೊಟ್ಟೆಯಲ್ಲಿ ಕೆಲ ಪದಾರ್ಥಗಳನ್ನು ತಿಂದರೆ ನಮ್ಮ ದೇಹಕ್ಕೆ ಹಲವಾರು ತೊಂದರೆಗಳು ಎದುರಾಗುತ್ತವೆ.ಹಾಗಿದ್ದರೆ ಬನ್ನಿ ಖಾಲಿ ಹೊಟ್ಟೆಯಲ್ಲಿ ಯಾವ ಯಾವ ಆಹಾರ ಪದಾರ್ಥಗಳನ್ನು ತಿನ್ನಬಾರದು ಅಂತ ನೋಡಿಕೊಂಡು ಬರೋಣ.ಅಂದರೆ ಅತ್ಯಂತ ಖಾರದ ಮತ್ತು ಎಣ್ಣೆಯಲ್ಲಿ ಕರೆದಿರುವಂತಹ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲೇಬಾರದು.ಯಾಕೆಂದರೆ ಆ ಸ್ಪೈಸಿ ಆಹಾರದಲ್ಲಿರುವ ಖಾರದ ಅಂಶ ನಿಮ್ಮ ಹೊಟ್ಟೆಯಲ್ಲಿ ಪಚನ ಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ.ಅಲ್ಲದೆ ಅದರಿಂದ ಅಸಿಡಿಟಿ ಕೂಡಾ ಬರುತ್ತದೆ ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಖಾರದ ಪದಾರ್ಥ ಬೇಡ.ನೀವು ಬೆಳಿಗ್ಗೆ ಎದ್ದ ತಕ್ಷಣ ಅಥವಾ ಬೆಳಗಿನ ತಿಂಡಿ ಸಮಯದಲ್ಲಿ ಏನಾದ್ರೂ ಸಿಹಿ ಪದಾರ್ಥ ಅಥವಾ ಒಂದು ಗ್ಲಾಸ್ ಯಾವುದಾದರೂ ಜ್ಯೂಸ್ ಅನ್ನು ಸೇವಿಸುತ್ತೀರಾ? ಬೆಳಗ್ಗೆ ಎದ್ದ ತಕ್ಷಣ ಸಕ್ಕರೆ ಅಂಶ ಜಾಸ್ತಿ ಇರುವ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಮೇದೋಜೀರಕ ಗ್ರಂಥಿ ಅಂದರೆ ನಿಮ್ಮ pancreas ಮೇಲೆ ಭಾರ ಬೀಳುತ್ತದೆ.ಒಂದು ಗ್ಲಾಸ್ ಹಣ್ಣಿನ ರಸ ದೇಹಕ್ಕೆ ಒಳ್ಳೆಯೇದೇ ಆದರೂ ಹೆಚ್ಚಾಗಿ ಅದರಲ್ಲಿ ಸಕ್ಕರೆ ಅಂಶ ಇರುವದರಿಂದ ನಿಮ್ಮ ಲಿವರ್ಗೂ ಸಹ ತೊಂದರೆ ಆಗುತ್ತದೆ.

ಆಲ್ಕೋಹಾಲನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ರೂ ಅಥವಾ ಬೇರೆ ಯಾವ ಟೈಮ್ ಅಲ್ಲಿ ಸೇವಿಸಿದ್ರು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.ಆದರೂ ಆಲ್ಕೋಹಾಲ್ ಪ್ರಿಯರಾಗಿದ್ದರೆ ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವನೆ ಬೇಡ.ಕಾರಣ ಏನಂದರೆ,ಆಲ್ಕೋಹಾಲ್ ಅಲ್ಲಿ ಆಸಿಡ್ ಪದಾರ್ಥಗಳು ಇರುವದರಿಂದ ಅದರ ಸೇವನೆ ಸೀದಾ ಲಿವರ್ ಮೇಲೆ ಪರಿಣಾಮ ಬೀಳುತ್ತದೆ.ಆದರಿಂದ ಇದನ್ನು ಕೂಡಾ ಖಾಲಿ ಹೊಟ್ಟೆಯಲ್ಲಿ ಕಡಿಮೆ ಮಾಡಿ.ಪೆಪ್ಸಿ ಕೊಕೊಕೋಲಾ ತರಹದ ಪಾನೀಯಗಳು ಬಾಯಿಗೆ ರುಚಿಯೇ ಸರಿ ಆದರೆ ಖಾಲಿ ಹೊಟ್ಟೆಯಲ್ಲಿ ದೇಹಕ್ಕೆ ಇವು ರುಚಿಯಲ್ಲ.ಇವು ಒಂತರ ಆಸಿಡ್ ಇದ್ದಂಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಉರಿಯುತ್ತದೆ.ನಿಂಬೆ ಹಣ್ಣು ಕಿತ್ತಳೆ ಹಣ್ಣು ಮೋಸಂಬಿ ಹಣ್ಣುಗಳಲ್ಲಿ ಹುಳಿ ಅಂಶ ಜಾಸ್ತಿ ಇರುತ್ತದೆ,ಹುಳಿ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿವುದರಿಂದ ಅಸಿಡಿಟಿ ಅಷ್ಟೇ ಅಲ್ಲದೆ ಪಿತ್ತ ಕೂಡಾ ಹೆಚ್ಚಾಗುತ್ತದೆ.ಇದೆ ಕಾರಣಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಎಷ್ಟೋ ಜನರಿಗೆ ಪಿತ್ತ ಹೆಚ್ಚಾಗಿ ತಲೆ ತಿರುಗುವುದು ಮತ್ತು ವಾಂತಿ ಬರುವಂತ ಅನುಭವ ಆಗುತ್ತದೆ.ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಹುಳಿ ಹಣ್ಣುಗಳು ಉತ್ತಮ ಅಲ್ಲ.ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಅನ್ನು ಸೇವಿಸುವುದು ಎಷ್ಟೋ ಜನರ ದಿನ ನಿತ್ಯದ ಕೆಲಸ,ಆದರೆ ಕಾಫೀ ಅಲ್ಲಿರುವ ಕೆಫೆನ್ ಅಂಶವು ಹೊಟ್ಟೆಯಲ್ಲಿ ಅಸಿಡಿಟಿ ಅಲ್ಲದೆ ಗ್ಯಾಸ್ ಅಂತಹ ತೊಂದರೆಗಳಿಗೆ ಎದೆ ಮಾಡಿಕೊಡುತ್ತದೆ.

%d bloggers like this: